Advertisement
ತುಮಕೂರು ವಿವಿ ವ್ಯಾಪ್ತಿಯ ಸರ್ಕಾರಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜು, ಸಿದ್ಧ ಗಂಗಾ ಪದವಿಕಾಲೇಜು, ಸಿದ್ಧಗಂಗಾ ಡಿಪ್ಲೋಮಾಕಾಲೇಜು ಸೇರಿದಂತೆ ನಗರದ ವಿವಿಧಸ್ನಾತಕ ಪದವಿ, ಸ್ನಾತಕೋತ್ತರಪದವಿ, ಡಿಪ್ಲೋಮಾ ಕಾಲೇಜು ಗಳಲ್ಲಿ ತರಗತಿಗಳು ಸರ್ಕಾರದ ಆದೇಶದ ಹಿನ್ನೆಲೆ ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ತರಗತಿಗಳನ್ನು ಆರಂಭಿಸಿವೆ.
Related Articles
Advertisement
ಆಫ್ಲೈನ್ ತರಗತಿಗೆ ವಿದ್ಯಾರ್ಥಿಗಳ ಒತ್ತಾಯ : ಪದವಿ ಕಾಲೇಜುಗಳಲ್ಲಿ ಇದುವರೆಗೂ ಶೇ.9 ರಷ್ಟು ವಿದ್ಯಾರ್ಥಿಗಳ ಹಾಜರಾತಿ ಕಂಡು ಬರುತ್ತಿದ್ದು, ದಿನದಿಂದ ದಿನಕ್ಕೆ ವಿದ್ಯಾರ್ಥಿಗಳ ಹಾಜರಾತಿಹೆಚ್ಚುತ್ತಿದೆ. ವಿದ್ಯಾರ್ಥಿಗಳಕೋವಿಡ್ ಪರೀಕ್ಷೆ ವರದಿಯನ್ನು ಆರೋಗ್ಯಇಲಾಖೆ ಅಧಿಕಾರಿಗಳು48 ಗಂಟೆ ಬದಲು 24 ಗಂಟೆಯೊಳಗೆ ನೀಡಲುಕ್ರಮಕೈಗೊಳ್ಳಬೇಕು.ಈನಿಟ್ಟಿನಲ್ಲಿ ಆರೋಗ್ಯ ಇಲಾಖೆ ತ್ವರಿತವಾಗಿ ಕೆಲಸ ಮಾಡಬೇಕು ಆಫ್ಲೈನ್ ತರಗತಿ ಮಾಡಲು ಒತ್ತಾಯವಿದೆ ಎಂದು ಉನ್ನತ ಶಿಕ್ಷಣಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಹೇಳಿದರು.
ಆಪ್‌ಲೈನ್- ಆನ್‌ಲೈನ್ ಎರಡರಲ್ಲೂ ಶಿಕ್ಷಣ : ತುಮಕೂರು ವಿವಿಯಲ್ಲಿ40 ಸಾವಿರ ಸ್ನಾತಕ5000 ಸ್ನಾತಕೋತ್ತರ ವಿದ್ಯಾರ್ಥಿಗಳಿದ್ದಾರೆ. ಅಂತಿಮ ವರ್ಷದಲ್ಲಿ10 ಸಾವಿರ ಸ್ನಾತಕ 1500ಸ್ನಾತಕೋತ್ತರ ವಿದ್ಯಾರ್ಥಿಗಳು ಇದ್ದು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಆನ್‌ಲೈನ್ ಮತ್ತು ಆಫ್ಲೈನ್ ಎರಡೂ ನಡೆಯುತ್ತಿದೆ. ಹಂತಹಂತವಾಗಿ ವಿದ್ಯಾರ್ಥಿಗಳುಕಾಲೇಜಿಗೆ ಬರಲಿದ್ದಾರೆ ಎಂದು ತುಮಕೂರು ವಿವಿ ಕುಲಸಚಿವಕೆ.ಎನ್.ಗಂಗಾ ನಾಯಕ್ ತಿಳಿಸಿದರು.
ಪದವಿ ತರಗತಿ ಪ್ರಾರಂಭಿಸಿರುವುದು ಉತ್ತಮ ಬೆಳವಣಿಗೆ.ಮುಂಜಾಗ್ರತಾ ಕ್ರಮಗಳೊಂದಿಗೆ ಆಫ್ಲೈನ್ ತರಗತಿಗಳು ನಡೆಸುತ್ತಿರುವುದು ಅನುಕೂಲ. ನಾವು ಕೋವಿಡ್ ಪರೀಕ್ಷೆ ಮಾಡಿಸಿ ಮನೆಯವರ ಅನುಮತಿ ಪತ್ರ ಪಡೆದು ಬಂದಿದ್ದೇವೆ. –ಮೋನಿಕಾ, ವಿವಿ ವಿದ್ಯಾರ್ಥಿನಿ
ತುಮಕೂರು ಸರ್ಕಾರಿ ಪ್ರಥಮ ದರ್ಜೆ ಮಹಿಳಾಕಾಲೇಜಿನಲ್ಲಿಒಟ್ಟು 1208 ವಿದ್ಯಾರ್ಥಿಗಳಿದ್ದಾರೆ. ಅಂತಿಮ ವರ್ಷದ ಮೂರು ವಿದ್ಯಾಥಿನಿಯರುಕಾಲೇಜಿಗೆ ಬಂದಿದ್ದರು. ಅವರಿಗೆ ಪಾಠ ಆರಂಭ ಮಾಡಿದ್ದೇವೆ. –ಡಾ.ಟಿ.ಆರ್.ಲೀಲಾವತಿ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲೆ
-ಚಿ.ನಿ.ಪುರುಷೋತ್ತಮ್