Advertisement
ಅಧಿಕಾರ ವಿಕೇಂದ್ರೀಕರಣ ಉದ್ದೇಶದಿಂದ ಪ್ರತಿ ಕಂದಾಯ ವಿಭಾಗ ಕ್ಕೊಂದು ಪ್ರಾದೇಶಿಕ ಕಚೇರಿ ಸ್ಥಾಪಿ ಸಲು ಹಾಗೂ ಇನ್ನಿತರ ಸುಧಾ ರಣೆಗಳಿಗೆ 59.68 ಕೋಟಿ ರೂ. ವೆಚ್ಚ ಮಾಡಲು ಅ. 9ರಂದು ಹೊರಡಿ ಸಿರುವ ಆದೇಶದಲ್ಲಿ ಸರಕಾರ ಸಮ್ಮತಿ ಸೂಚಿಸಿದೆ. ಸದ್ಯಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೇಂದ್ರ ಕಚೇರಿಯಲ್ಲಿರುವ 4 ಜಂಟಿ ನಿರ್ದೇಶಕರು, 4 ಕಂದಾಯ ವಿಭಾಗ ಗಳಲ್ಲಿ ಸ್ಥಾಪನೆಯಾಗಲಿರುವ ಪ್ರಾದೇಶಿಕ ಕಚೇರಿಗಳಿಗೆ ಪ್ರಾದೇಶಿಕ ನಿರ್ದೇಶಕರಾಗಿ ನೇಮಕವಾಗಲಿದ್ದಾರೆ.
ಕರ್ನಾಟಕ ಯಕ್ಷಗಾನ ಮತ್ತು ಬಯಲಾಟಗಳು ಪ್ರತ್ಯೇಕ ಪ್ರದೇಶ ಗಳಲ್ಲಿ ಅತ್ಯಂತ ವ್ಯಾಪಕ ವಾಗಿ ಮತ್ತು ಜನಪ್ರಿಯ ಕಲಾ ಪ್ರಕಾರಗಳಾಗಿವೆ. ಇವುಗಳನ್ನು ಪ್ರಸಕ್ತ ಕರ್ನಾಟಕ ಯಕ್ಷಗಾನ-ಬಯಲಾಟ ಅಕಾಡೆಮಿ ಅಡಿಯಲ್ಲಿ ನಿರ್ವಹಿಸಲಾಗುತ್ತಿದೆ. ಯಕ್ಷಗಾನ ಪ್ರಕಾರಗಳ ಸಂಬಂಧಿ ಸಿದ ಚಟುವಟಿಕೆಗಳನ್ನು ನಿರ್ವಹಿ ಸುವ ಕರ್ನಾಟಕ ಯಕ್ಷಗಾನ ಅಕಾ ಡೆಮಿಯಿಂದ ದೊಡ್ಡಾಟ, ಸಣ್ಣಾಟ, ಕೃಷ್ಣ ಪಾರಿಜಾತದಂತಹ ಬಯಲಾಟ ಪ್ರಕಾರಗಳನ್ನು ಪೋಷಿಸುವ ಸಲು ವಾಗಿ ಈಗಿನ ಅಕಾಡೆಮಿಯಿಂದ ಬೇರ್ಪಡಿಸಿ ಕರ್ನಾಟಕ ಬಯಲಾಟ ಅಕಾಡೆಮಿ ರಚಿಸುವಂತೆ ಆದೇಶಿಸಲಾಗಿದೆ. ಸಂಗೀತ ಅಕಾಡೆಮಿಯಿಂದ ಪ್ರತ್ಯೇಕವಾಗಿ ನೃತ್ಯ ಅಕಾಡೆಮಿ ಸ್ಥಾಪನೆಯಾಗಲಿದೆ. ಹೊಸದಾಗಿ ಕರಾವಳಿ ಮತ್ತು ಬೆಂಗಳೂರಿನಲ್ಲಿ ರಂಗಾಯಣಗಳು ಸ್ಥಾಪನೆಯಾಗಿ ನಾಟಕ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯಲಿದೆ.