Advertisement
ಸ್ಥಳೀಯರೊಬ್ಬರು ತಮ್ಮ ರಬ್ಬರ್ ತೋಟಕ್ಕೆ ಮಣ್ಣು ಹಾಕಿದ ಪರಿಣಾಮವಾಗಿ ಮೋರಿಯ ಬಳಿ ಕೆರೆಯ ರೀತಿಯಲ್ಲಿ ಮಳೆನೀರು ಸಂಗ್ರಹವಾಗಿ ಒಸರಿನಿಂದಾಗಿ ರಸ್ತೆಯೂ ಕುಸಿಯುವ ಭೀತಿ ಎದುರಾಗಿದೆ. ಅಂಗನವಾಡಿ ಹಾಗೂ ಶಾಲೆಗೆ ಹೋಗುವ ಪುಟ್ಟ ಮಕ್ಕಳು ಈ ದಾರಿಯಾಗಿ ಸಾಗುವುದರಿಂದ ತೆರೆದ ಕೆರೆಯಂತೆ ಸಂಗ್ರಹವಾಗಿರುವ ನೀರಿನಿಂದಾಗಿ ಮಕ್ಕಳಿಗೂ ಅಪಾಯ ಸಂಭವಿಸುವ ಸಾಧ್ಯತೆ ಗಳಿವೆ ಎಂದು ಸ್ಥಳೀಯ ಕುಮಾರಧಾರ ಯುವಕ ಮಂಡಲದ ಪದಾಧಿಕಾರಿಗಳು ಎಂದು ಸ್ಥಳೀಯ ಕುಮಾರಧಾರ ಯುವಕ ಮಂಡಲದ ಪದಾಧಿಕಾರಿಗಳು ಪಂಚಾಯತ್‌ಗೆ ದೂರು ಸಲ್ಲಿಸಿದ್ದರು.
ಮೋರಿಯ ಬಳಿ ಮಾತ್ರವಲ್ಲದೇ ಇನ್ನೂ ಕೆಲವೆಡೆ ಚರಂಡಿಗೆ ಮಣ್ಣು ಹಾಕಿದ ಪರಿಣಾಮವಾಗಿ ಮಳೆನೀರು ಹರಿದುಹೋಗಲು ತಡೆಯುಂಟಾಗಿ ರಸ್ತೆಯ ಮೇಲೆ ಹರಿಯುತ್ತಿರುವುದು ಸ್ಥಳ ಪರಿಶೀಲನೆಯ ವೇಳೆ ಕಂಡುಬಂದಿದೆ. ಚರಂಡಿಯನ್ನು ಸರಿಪಡಿಸಿ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಿ ಸಮಸ್ಯೆ ಬಗೆಹರಿಸಲು ರಸ್ತೆ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಕಾಮಗಾರಿ ನಡೆಯಲಿದೆ. ಚರಂಡಿಗೆ ಮಣ್ಣು ತುಂಬಿ ನೀರು ಹರಿಯಲು ತಡೆಯೊಡ್ಡುವವರಿಗೆ ಮುಂದೆ ಆ ರೀತಿ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.
– ರವೀಂದ್ರ ಪುತ್ತೂರು,
ಇಂಜಿನಿಯರ್, ಪಿಎಂಜಿಎಸ್‌ವೈ