Advertisement
ತಾಲೂಕಿನ 30 ಗ್ರಾಪಂ ವ್ಯಾಪ್ತಿಯಲ್ಲಿ ಬಹುತೇಕ ಕಡೆಗಳಲ್ಲಿ ಪಿಡಿಒಗಳು ಮತ್ತು ಜನಪ್ರತಿನಿಧಿಗಳ ಮಧ್ಯೆ ಹೊಂದಾಣಿಕೆ ಇಲ್ಲವಾಗಿದ್ದರಿಂದ ಸಮಸ್ಯೆ ಬಿಗಡಾಯಿಸಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಕೆಲಸಗಳು ನಡೆಯುತ್ತಿಲ್ಲ. ಚುನಾಯಿತ ಸದಸ್ಯರ ಅಭಿಪ್ರಾಯಗಳಿಗೆ ಬೆಲೆ ಕೊಡುತ್ತಿಲ್ಲ ಎಂಬ ಆರೋಪ ಮುಂದಿಟ್ಟುಕೊಂಡು ಒಕ್ಕೂಟದ ನೇತೃತ್ವದಲ್ಲಿ ಸದಸ್ಯರು ಬಹಿರಂಗವಾಗಿ ಹರಿಹಾಯುತ್ತಿದ್ದಾರೆ.
Related Articles
Advertisement
ಈ ಹಿಂದೆ ಇದ್ದ ತಾಪಂ ಇಒ ಪವನ್‌ಕುಮಾರ್ ವರ್ಗಾವಣೆಯಾದ ನಂತರ ಹೊಸದಾಗಿ ಲಕ್ಷ್ಮೀದೇವಿ ಇಒ ಆಗಿ ಬಂದಿದ್ದಾರೆ. ಅವರು ಆಗಮಿಸಿರುವ ಆರಂಭದಲ್ಲೇ ಹಲವು ಸಮಸ್ಯೆ ಮುಂದಿಟ್ಟುಕೊಂಡು ಸದಸ್ಯರ ಒಕ್ಕೂಟ ಹೋರಾಟ ಆರಂಭಿಸಿದೆ. ಮಾತುಕತೆ ಸಂದರ್ಭದಲ್ಲಿ ಎಡಿಎಗಳು ನಾಟಕ ಮಾಡುತ್ತಿದ್ದಾರೆಂದು ಹರಿಹಾಯ್ದ ಘಟನೆಯೂ ನಡೆದಿದೆ. ಗ್ರಾಪಂ ಮಟ್ಟದಲ್ಲಿ ಆಡಳಿತ ನಿರ್ವಹಣೆ ಪಿಡಿಒಗಳ ಮೂಲಕ ಸಮರ್ಪಕವಾಗಿ ನಡೆಯುತ್ತಿಲ್ಲವೆಂಬ ಆರೋಪ ಬಲವಾಗಿದ್ದು, ಈ ರೀತಿಯ ವಾಕ್ಸಮರಕ್ಕೆ ನಾಂದಿ ಹಾಡಿದೆ.
ಸರಿಯಾದ ಸಮಯಕ್ಕೆ ಪಿಡಿಒಗಳು ಬರುತ್ತಿಲ್ಲ. ಕರ ವಸೂಲಿ ನಡೆಯುತ್ತಿಲ್ಲ. ಇ-ಸ್ವತ್ತು ನಿರ್ವಹಣೆ ಮಾಡುತ್ತಿಲ್ಲ. ಕ್ರಿಯಾಯೋಜನೆಗಳ ವಿವರ ಕೊಡುತ್ತಿಲ್ಲ. ಪಂಚಾಯತ್ ಸದಸ್ಯರಿಗೆ ಗೌರವ ಕೊಡುತ್ತಿಲ್ಲ. ಇದನ್ನೆಲ್ಲ ಸರಿಪಡಿಸಬೇಕು. –ರವಿಗೌಡ ಮಲದಗುಡ್ಡ, ಪ್ರಧಾನ ಕಾರ್ಯದರ್ಶಿ, ಗ್ರಾಪಂಸದಸ್ಯರ ಒಕ್ಕೂಟ, ಸಿಂಧನೂರು
–ಯಮನಪ್ಪ ಪವಾರ