Advertisement

ಚನ್ನೂರ ಗ್ರಾಮಸ್ಥರ ಸಮಸ್ಯೆ ಆಲಿಸಿದ ಅಧಿಕಾರಿಗಳು

05:43 PM Mar 22, 2021 | Team Udayavani |

ಗುತ್ತಲ: ತಾಲೂಕಿನ ಚನ್ನೂರ ಗ್ರಾಮದಲ್ಲಿಶನಿವಾರ ಗ್ರಾಮ ವಾಸ್ತವ್ಯ ಮಾಡಿದ ಸುಮಾರು32ಇಲಾಖೆ ಅಧಿಕಾರಿಗಳು, ಗ್ರಾಮಸ್ಥರಸಮಸ್ಯೆಗಳನ್ನು ಆಲಿಸಿದರು.

Advertisement

ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿಮುಖ್ಯವಾಗಿ ಗ್ರಾಮದಲ್ಲಿನ ಚರಂಡಿವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದಗ್ರಾಮಸ್ಥರು, ಗ್ರಾಮಕ್ಕೆ ಹೊಂದಿಕೊಂಡಿರುವಲೋಕೋಪಯೋಗಿ ಇಲಾಖೆಯ ರಸ್ತೆಅಕ್ಕಪಕ್ಕದಲ್ಲಿ ಚರಂಡಿ ನಿರ್ಮಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ರತ್ನವ್ವಮಲ್ಲೇಶಣ್ಣ ನವರ ಎಂಬ ಮಹಿಳೆಕಣ್ಣೀರಿಡುತ್ತಾ, ನನ್ನ ಮನೆಗೆ ಮಳೆಗಾಲದಲ್ಲಿ ಚರಂಡಿ ನೀರಿನೊಂದಿಗೆ ಅಪಾರ ಪ್ರಮಾಣದಮಳೆ ನೀರು ಹರಿದು ಬರುತ್ತದೆ. ಇದರಿಂದ,ಲಕ್ಷಾಂತರ ರೂ. ಸಾಲ ಮಾಡಿ ಕಟ್ಟಿಕೊಂಡ ಮನೆಬಿದ್ದು ಹೋಗಿದೆ. ಇದಕ್ಕೆ ಪರಿಹಾರ ಕಲ್ಪಿಸಿ ನನ್ನಮನೆ ಉಳಿಸಿಕೊಡಿ ಎಂದು ಗೋಗರೆದರು.ಇದಕ್ಕೆ ಪ್ರತಿಕ್ರಿಯೇ ನೀಡಿದ ತಾಪಂಇಒ, ಇದನ್ನು ನರೇಗಾ ಯೋಜನೆಯಲ್ಲಿ ಮಾಡಿಕೊಡುವುದಾಗಿ ಹೇಳಿದರು.

ಅಲ್ಲದೇ, ಸ್ಥಳದಲ್ಲಿದ್ದ ಪಿಡಿಒ ದಾವಲಸಾಬ ಕಮಗಾಲ ಅವರಿಗೆ ಇಲ್ಲಿ ಶೀಘ್ರದಲ್ಲಿ ಚರಂಡಿನಿರ್ಮಿಸುವಂತೆ ಸೂಚಿಸಿದರು. ನಂತರ ಹಳ್ಳವನ್ನು ಒತ್ತುವರೆ ಮಾಡಿಮನೆಯನ್ನು ಕಟ್ಟಿಕೊಂಡುವರ ಮನೆಗಳನ್ನು ಪರಿಶೀಲಿಸಿ, ಮನೆ ಕುಸಿದು ಬೀಳುವಹಂತದಲ್ಲಿದೆ. ಇಲ್ಲಿ ವಾಸ ಮಾಡವುದು ಅಪಾಯಕಾರಿ ಎಂದು ಎಚ್ಚರಿಸಿದರು.

ನರೇಗಾದಲ್ಲಿ ಹಳ್ಳಕ್ಕೆ ತಡೆಗೋಡೆ ನಿರ್ಮಿಸುವಂತೆ ಸೂಚಿಸಿದರು. ಸಾರ್ವಜನಿಕರಿಂದ ಬಂದ ಒಟ್ಟು 87 ದೂರಗಳಲ್ಲಿ 32ದೂರುಗಳಿಗೆ ತಕ್ಷಣ ಪರಿಹಾರನೀಡಿದ ಅಧಿಕಾರಿಗಳು ಉಳಿದ 55 ಅರ್ಜಿಗಳವಿಲೇವಾರಿಗೆ ಸಮಯ ಪಡೆದುಕೊಂಡರು.ಆರೋಗ್ಯ ಇಲಾಖೆಯಿಂದ ಬೆಳಿಗ್ಗೆಯಿಂದ ಸಂಜೆಯವರೆಗೂ ಜನರ ಆರೋಗ್ಯ ತಪಾಸಣೆ ನಡೆಯಿತು.

Advertisement

ಗ್ರಾಪಂ ಅಧ್ಯಕ್ಷೆ ಭಾರತಿ ಹಳ್ಳಿಕೇರಿಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷಶಂಭಣ್ಣ ಗೋಪಾಳಿ, ತಾಪಂ ಸದಸ್ಯ ಎಂ.ಎಂವಗ್ಗಣ್ಣನವರ, ಬಿಇಒ ಎಂ.ಎಚ್‌.ಪಾಟೀಲ್‌,ಎಡಿಎ ಆರ್‌.ಕೆ.ಕುಡಪಲಿ, ಉಪ ತಹಶೀಲ್ದಾರ್‌ರಾದ ಗವಿಸಿದ್ದಪ್ಪ ದ್ಯಾಮಣ್ಣನವರ,ಪಶುಸಂಗೋಪನೆ ಇಲಾಖೆಯ ಎಡಿಎ ಡಾ.ಪರಮೇಶ ಹುಬ್ಬಳ್ಳಿ, ಆಹಾರ ಶಿರಸ್ತೇದಾರ್‌ಉಮೇಶ ಸೂರಣಗಿ, ಆಹಾರ ನಿರೀಕ್ಷಕಎನ್‌.ಟಿ ಕನವಳ್ಳಿ, ತೋಟಗಾರಿಕೆಯ ಸಹಾಯಕ ನಿರ್ದೇಶಕ ಬಿ.ಎನ್‌ ಬರೇಗಾರ,ಪಿಆರ್‌ಡಿಯ ಎಇಇ ಪ್ರವೀಣ ಬಿರಾದಾರ,ಕಾರ್ಮಿಕ ಇಲಾಖೆಯ ಲತಾ, ಅಕ್ಷರದಾಸೋಹದ ಸಹಾಯಕ ನಿರ್ದೇಶಕಪುಷ್ಪಲತಾ ಬಿದರಿ, ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಓಂಕಾರ ಪಾಂಚಾಳ,ಸಮಾಜ ಕಲ್ಯಾಣ ಅಧಿಕಾರಿ ರವಿಕುಮಾರ,ಸಮಾಜಿಕ ಅರಣ್ಯ ಇಲಾಖೆ ಮಂಜುನಾಥ,ಸಿಡಿಪಿಒ ಶೈಲಜಾ ಕುರಹಟ್ಟಿ, ಬಿಸಿಎಂ ವನಿತಾಸುಂಕದ, ಡಾ. ಚಂದ್ರಶೇಖರ ಹೊತ್ತಿಗೆಗೌಡ್ರ, ಪಿಎಸ್‌ಐ ಸಿದ್ಧಾರೂಢ ಬಡಿಗೇರ, ಪ್ರಾದೇಶಿಕ ಸಾರಿಗೆ ಇಲಾಖೆಯ ರಮೇಶ ದೊಡ್ಡಮನಿ ಸೇರಿದಂತೆ ವಿವಿಧ ಇಲಾಖೆ ಅ ಧಿಕಾರಿಗಳು,ಹೆಸ್ಕಾಂ ಎಇಇ ಸಿ.ಬಿ. ಹೊಸಮನಿ, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next