Advertisement
ಅವರು ಶುಕ್ರವಾರ ಒಡಿಯೂರು ಆತ್ರೇಯ ಮಂಟಪದಲ್ಲಿ ಕ್ಷೇತ್ರದ ವತಿಯಿಂದ ನಡೆದ ಶ್ರೀ ಒಡಿಯೂರು ರಥೋತ್ಸವ-ತುಳುನಾಡª ಜಾತ್ರೆ 2019ರ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ, ಫಲಾನುಭವಿಗಳಿಗೆ ಸಹಾಯಧನ ವಿತರಿಸಿ ಆಶೀರ್ವಚನ ನೀಡಿದರು.
ವಿಶೇಷ ಅಭ್ಯಾಗತರಾಗಿದ್ದ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಮಾತನಾಡಿ, ಒಡಿಯೂರು ಗ್ರಾಮ ವಿಕಾಸ ಯೋಜನೆ ನೂರಾರು ಸೇವಾ ಕಾರ್ಯಗಳನ್ನು ಆಯೋಜಿಸುತ್ತಿದ್ದು, ಶ್ರೀ ಕ್ಷೇತ್ರಕ್ಕೆ ಆಗಮಿಸುವ ರಸ್ತೆ ವಿಸ್ತರಣೆ ಕಾರ್ಯಗಳಿಗೆ ಸರಕಾರದ ವತಿಯಿಂದ ಅನುದಾನ ತರಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
Related Articles
Advertisement
ಗುರುದೇವ ಸೇವಾ ಬಳಗದ ಪ್ರಮುಖರಾದ ವಾಮಯ್ಯ ಬಿ. ಶೆಟ್ಟಿ ಮುಂಬಯಿ, ರೋಹಿತ್ ಡಿ. ಶೆಟ್ಟಿ ನಗ್ರಿಗುತ್ತು, ಕೇರಳದ ಆರ್‌ಟಿಒ ಅಧಿ ಕಾರಿ ಅಜಿತ್ ಕುಮಾರ್ ಪಂದಳಂ, ಎ. ಅಶೋಕ್ ಕುಮಾರ್ ಬಿಜೈ, ಕೃಷ್ಣ ಎಲ್. ಶೆಟ್ಟಿ, ಜಯಂತ್ ಜೆ. ಕೋಟ್ಯಾನ್, ಸರ್ವಾಣಿ ಪಿ. ಶೆಟ್ಟಿ, ರೇವತಿ ವಾಮಯ್ಯ ಶೆಟ್ಟಿ, ಸೌಹಾರ್ದ ಸಹಕಾರಿ ಅಧ್ಯಕ್ಷ ಎ. ಸುರೇಶ್ ರೈ ಮೊದಲಾದವರು ಉಪಸ್ಥಿತರಿದ್ದರು.
ಯಶವಂತ ವಿಟ್ಲ ಸ್ವಾಗತಿಸಿದರು. ಸದಾಶಿವ ಅಳಿಕೆ ಸಹಾಯಹಸ್ತ ಫಲಾನುಭವಿಗಳ ಪಟ್ಟಿ ಓದಿದರು. ಮಾತೇಶ್ ಭಂಡಾರಿ ವಂದಿಸಿದರು. ನಿತ್ಯಶ್ರೀ ರೈ ಆಶಯಗೀತೆ ಹಾಡಿದರು. ಉದ್ಯಮಿ ಪ್ರಕಾಶ್ ಕೆ. ಶೆಟ್ಟಿ ಪೇಟೆಮನೆ ಕಾರ್ಯಕ್ರಮ ನಿರೂಪಿಸಿದರು.
ಉಗ್ರರಿಗೆ ಅನುಗ್ರಹವಿಲ್ಲ ಯೋಧರ ಹತ್ಯೆಯನ್ನು ಖಂಡಿಸುವುದರ ಜತೆಗೆ ಇದಕ್ಕೆ ಪ್ರತ್ಯುತ್ತರ ನೀಡುವ ಕಾರ್ಯವಾಗಬೇಕು. ಉಗ್ರರಿಗೆ ಯಾವತ್ತೂ ಅನುಗ್ರಹ ವಿರುವುದಿಲ್ಲ. ಯೋಧರಿಗೆ ಸಾಂತ್ವನ ಹೇಳುವ ಕಾರ್ಯವನ್ನು ಸಮಾಜ ಮಾಡಬೇಕು. ಉಗ್ರರನ್ನು ಮುಗಿ ಸಲು ನಮ್ಮ ಸೇನೆಗೆ ಭಗವಂತ ಭೀಮ ಬಲ ನೀಡಲಿ ಎಂದು ಪ್ರಾರ್ಥಿಸುವುದಾಗಿ ಶ್ರೀಗಳು ತಿಳಿಸಿದರು. ವಿಟ್ಲ: ಶ್ರೀ ಒಡಿಯೂರು ರಥೋತ್ಸವ-ತುಳುನಾಡª ಜಾತ್ರೆಯ ಧಾರ್ಮಿಕ ಸಭೆಯನ್ನು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಉದ್ಘಾಟಿಸಿದರು.