Advertisement

Odisha ರಾಜ್ಯ ಸರಕಾರವು ಭ್ರಷ್ಟರ ಹಿಡಿತಕ್ಕೆ ಸಿಲುಕಿದೆ: ಪಿಎಂ ಮೋದಿ

12:37 AM May 21, 2024 | Team Udayavani |

ಭುವನೇಶ್ವರ್‌: “ಒಡಿಶಾದ ಆಡಳಿತಾರೂಢ ಬಿಜು ಜನತಾ ದಳ (ಬಿಜೆಡಿ) ಸರಕಾರವು ಭಷ್ಟರ ಹಿಡಿತ ದಲ್ಲಿದ್ದು ಸಿಎಂ ಕಚೇರಿ ಮತ್ತು ನಿವಾಸಗಳನ್ನೂ ಭ್ರಷ್ಟರೇ ಆವರಿಸಿಕೊಂಡಿದ್ದಾರೆ. ಶೀಘ್ರವೇ ಈ ಸರಕಾರ ಕೆಳಗಿಳಿ ಯಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಧೆಂಕ ನಲ್‌ ಮತ್ತು ಕಟಕ್‌ ಲೋಕಸಭಾ ಕ್ಷೇತ್ರಗಳಲ್ಲಿ ಸಾರ್ವ ಜನಿಕ ಸಭೆಯನ್ನುದ್ದೇಶಿಸಿ ಪ್ರಧಾನಿ ಮಾತನಾಡಿದ್ದಾರೆ. ಈ ವೇಳೆ ಬಿಜೆಡಿ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿ ಖನಿಜ ಸಂಪನ್ಮೂಲಗಳಿಂದ ರಾಜ್ಯ ಸಮೃದ್ಧವಾಗಿದ್ದರೂ ಇಲ್ಲಿನ ಜನರು ಮಾತ್ರ ಸಂಕಷ್ಟದಲ್ಲಿದ್ದಾರೆ. ಖನಿಜ ಸಂಪನ್ಮೂಲಗಳ ಲಾಭವನ್ನು ಜನರು ಪಡೆಯದಂತೆ ಬಿಜೆಡಿ ಸರಕಾರ ತಡೆದಿದೆ’ ಎಂದು ಆರೋಪಿಸಿದ್ದಾರೆ.

Advertisement

ರತ್ನ ಭಂಡಾರದ ಕೀ ಕಾಣೆ: ಪಿಎಂ ಕಳವಳ
ಪುರಿ ಜಗನ್ನಾಥ ದೇಗುಲಕ್ಕೆ ಸೋಮವಾರ ಭೇಟಿ ನೀಡಿ ಪ್ರಧಾನಿ ನರೇಂದ್ರ ಮೋದಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿ, ಬಿಜೆಡಿ ಸರಕಾರದ ಅವಧಿಯಲ್ಲಿ ಜಗನ್ನಾಥ ದೇಗು ಲಕ್ಕೂ ಭದ್ರತೆ ಸಿಗುತ್ತಿಲ್ಲ. ರತ್ನ ಭಂಡಾರದ ಕೀ ಕಳೆದುಹೋಗಿ 6 ವರ್ಷ ಆಯಿತು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next