Advertisement

ಹೆರಿಗೆ ರಜೆ 180 ದಿನಕ್ಕೆ ವಿಸ್ತರಿಸಿದ ಓಡಿಸ್ಸಾ ಸರಕಾರ

06:39 PM Jan 11, 2022 | Team Udayavani |

ಭುವನೇಶ್ವರ : ಮಹತ್ದವ ಬೆಳವಣಿಗೆಯೊಂದರಲ್ಲಿ ಓಡಿಸ್ಸಾ ಸರಕಾರ ಉನ್ನತ ಶಿಕ್ಷ ಇಲಾಖೆ ವ್ಯಾಪ್ತಿಯಲ್ಲಿ ಬರುವ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಗಳಿಗೆ ಹೆರಿಗೆ ರಜೆಯನ್ನು 180 ದಿನಗಳಿಗೆ ವಿಸ್ತರಿಸಿದೆ.

Advertisement

ಈ ಹಿಂದೆ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕೇವಲ 90 ದಿನಗಳ ಕಾಲ ಮಾತ್ರ ಹೆರಿಗೆ ರಜೆ ನೀಡಲಾಗುತ್ತಿತ್ತು. ಆದರೆ ಈ ಸೌಲಭ್ಯವನ್ನು ಈಗ 180 ದಿನಗಳಿಗೆ ವಿಸ್ತರಿಸಲಾಗಿದೆ. ಅದೇ ರೀತಿ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಸರಕಾರಿ ನೌಕರಿಗೆ ಅರ್ಜಿ ಸಲ್ಲಿಸಲು ಇದ್ದ 32 ವರ್ಷಗಳ ಅವಧಿಯನ್ನು 38 ವರ್ಷಕ್ಕೆ ಹೆಚ್ಚಳ ಮಾಡಿ ಓಡಿಸ್ಸಾ ಸರಕಾರ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದೆ.

ಅದೇ ರೀತಿ ಅಂಗವಿಕಲತೆ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡದ ಅಭ್ಯರ್ಥಿಗಳು ಸರಕಾರಿ ನೌಕರಿಗೆ ಅರ್ಜಿ ಸಲ್ಲಿಸುವ ವಯೋಮಿತಿಯನ್ನು ೪೬ ವರ್ಷಕ್ಕೆ ಹೆಚ್ಚಳ ಮಾಡಲಾಗಿದೆ. ಹೆರಿಗೆ ರಜೆ 180 ದಿನಕ್ಕೆ ಹೆಚ್ಚಳ ಮಾಡಲಾಗಿದೆಯಾದರೂ ಇದು ಮೊದಲ ಎರಡು ಹೆರಿಗೆಗೆ ಮಾತ್ರ ಅನ್ವಯವಾಗುತ್ತದೆ.

ಮೂರನೇ ಹೆರಿಗೆಗೆ 12 ವಾರಗಳ ರಜಾ ಸೌಲಭ್ಯ ದೊರಕಲಿದೆ.  ಲೋಕಸಭೆಯಲ್ಲಿ ಅಂಗೀಕಾರಗೊಂಡ ಕಾಯಿದೆ ಅನ್ವಯ ಓಡಿಸ್ಸಾ ಸರಕಾರ ಈ ತಿದ್ದುಪಡಿ ಜಾರಿಗೆ ತಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next