Advertisement

ODI Ranking: ದ್ವಿತೀಯ ಸ್ಥಾನಕ್ಕೆ ಏರಿದ ಟೀಮ್‌ ಇಂಡಿಯಾ

02:23 AM Sep 16, 2023 | Team Udayavani |

ದುಬಾೖ: ಪಾಕಿಸ್ಥಾನ ತಂಡದ ಏಷ್ಯಾ ಕಪ್‌ ನಿರ್ಗಮನ ದೊಂದಿಗೆ ಭಾರತ ಏಕದಿನ ರ್‍ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನಕ್ಕೆ ಏರಿದೆ. ಬಾಬರ್‌ ಪಡೆ ಮೂರಕ್ಕೆ ಕುಸಿದಿದೆ. ಅಗ್ರಸ್ಥಾನದ ಹೆಗ್ಗಳಿಕೆ ಆಸ್ಟ್ರೇಲಿಯದ್ದಾಗಿದೆ.

Advertisement

ಗುರುವಾರ ರಾತ್ರಿಯ ಲಾಸ್ಟ್‌ ಬಾಲ್‌ ಥ್ರಿಲ್ಲರ್‌ನಲ್ಲಿ ಶ್ರೀಲಂಕಾಕ್ಕೆ ಶರಣಾದದ್ದು ಪಾಕಿಸ್ಥಾನಕ್ಕೆ ಭಾರೀ ಹಿನ್ನಡೆಯಾಗಿ ಪರಿಣಮಿಸಿತು. ಅದು ಸೂಪರ್‌-4 ಹಂತದಲ್ಲಿ ಅನುಭವಿಸಿದ ಸತತ 2ನೇ ಸೋಲು ಇದಾಗಿತ್ತು. ಇದರಿಂದ 2 ಸ್ಥಾನ ಕುಸಿತ ಕಾಣಬೇಕಾಯಿತು. ಪಾಕಿಸ್ಥಾನವೀಗ 115 ಅಂಕ ಹೊಂದಿದೆ.

ಭಾರತ 116 ಅಂಕ, ಅಗ್ರಸ್ಥಾನಿ ಆಸ್ಟ್ರೇಲಿಯ 118 ಅಂಕಗಳನ್ನು ಹೊಂದಿದೆ. ಮುಂಬರುವ ವಿಶ್ವಕಪ್‌ ಪಂದ್ಯಾವಳಿಯನ್ನು ಅಗ್ರ ರ್‍ಯಾಂಕಿಂಗ್‌ನೊಂದಿಗೆ ಆಡಲಿಳಿಯುವುದು ಆಸ್ಟ್ರೇಲಿಯದ ಯೋಜನೆ. ಆದರೆ ಇದಕ್ಕೂ ಮುನ್ನ ಭಾರತದ ವಿರುದ್ಧ ಅದು 3 ಪಂದ್ಯಗಳ ಏಕದಿನ ಸರಣಿ ಯನ್ನಾಡಲಿದೆ. ಇಲ್ಲಿನ ಫ‌ಲಿತಾಂಶ ನಿರ್ಣಾಯಕವಾಗಲಿದೆ. ಭಾರತಕ್ಕೂ ಇಲ್ಲಿ ನಂ.1 ಸ್ಥಾನ ಅಲಂಕರಿಸುವ ಎಲ್ಲ ಸಾಧ್ಯತೆ ಇದೆ.

ಈಗಿನ ರ್‍ಯಾಂಕಿಂಗ್‌ ಪ್ರಕಾರ ಅಗ್ರ 3 ತಂಡಗಳ ನಡುವೆ ಕೇವಲ 3 ಅಂಕಗಳ ವ್ಯತ್ಯಾಸವಷ್ಟೇ ಇದೆ. ಹೀಗಾಗಿ ತಂಡಗಳ ರ್‍ಯಾಂಕಿಂಗ್‌ ಯಾವುದೇ ಹೊತ್ತಿನಲ್ಲಿ ಬದಲಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next