Advertisement

ನ.13ರಿಂದ 17ರ ತನಕ ದಿಲ್ಲಿಯಲ್ಲಿ 3ನೇ ಬಾರಿ ಬೆಸ-ಸಮ

03:16 PM Nov 09, 2017 | Team Udayavani |

ಹೊಸದಿಲ್ಲಿ : ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ಜೀವಕ್ಕೇ ಅಪಾಯಕಾರಿ ಎನ್ನುವ ಮಟ್ಟಕ್ಕೆ ಏರಿರುವ ಕಾರಣ ಇದೇ ನ.13ರಿಂದ 17ರ ತನಕ ಮತ್ತೆ ಬೆಸ-ಸಮ ವಾಹನ ಸಂಚಾರ ನಿಯಮವನ್ನು ಜಾರಿಗೆ ತರಲಾಗುತ್ತಿದೆ. ದಿಲ್ಲಿಯ ಸಾರಿಗೆ ಸಚಿವ ಕೈಲಾಶ್‌ ಗೆಹಲೋತ್‌ ಅವರು ತಮ್ಮ ಸರಕಾರದ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.

Advertisement

ದಿಲ್ಲಿಯಲ್ಲಿ ವಾಹನಗಳಿಂದಾಗುವ ವಾಯು ಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬೆಸ – ಸಮ ವಾಹನ ಸಂಚಾರ ನಿಯಮ ಜಾರಿಗೆ ಬರುತ್ತಿರುವುದು ಇದೀಗ ಮೂರನೇ ಬಾರಿ. ಮೊದಲನೇ ಬಾರಿ ಇದು ಜಾರಿಗೆ ಬಂದದ್ದು 2106ರ ಜ.1ರಿಂದ 15 ದಿನಗಳ ಮಟ್ಟಿಗೆ. ಎರಡನೇ ಬಾರಿ ಅದೇ ವರ್ಷ ಎಪ್ರಿಲ್‌ 15ರಿಂದ ಮತ್ತೆ ಈ ನಿಯಮವನ್ನು ಜಾರಿಗೆ ತರಲಾಯಿತು. 

ಈ ಎರಡೂ ಹಂತಗಳಲ್ಲಿ ದ್ವಿಚಕ್ರ ವಾಹನಗಳಿಗೆ, ಸಿಎನ್‌ಜಿ ಚಾಲಿತ ಕಾರುಗಳಿಗೆ ಮತ್ತು ಮಹಿಳಾ ಡ್ರೈವರ್‌ಗಳಿಗೆ (ಒಂಟಿಯಾಗಿ ಇಲ್ಲವೇ ಮಕ್ಕಳೊಂದಿಗೆ) ರಿಯಾಯಿತಿ ನೀಡಲಾಯಿತು.

ಇದೀಗ ಮೂರನೇ ಬಾರಿ ಜಾರಿಗೆ ತರಲಾಗುವ ಬೆಸ – ಸಮ ನಿಯಮದಲ್ಲಿ ಹಿಂದಿನ ರೀತಿಯ ರಿಯಾಯಿತಿಗಳು ಇರುವುದೋ ಇಲ್ಲವೋ ಎಂಬುದು ಈಗಿನ್ನೂ ಸ್ಪಷ್ಟವಾಗಿಲ್ಲ.

ಬೆಸ – ಸಮ ವಾಹನ ನಿಯಮವನ್ನು 3ನೇ ಬಾರಿ ಜಾರಿಗೆ ತರಲಾಗುವ ಬಗ್ಗೆ ಇಂದು ಸಂಜೆ ಸಾರಿಗೆ ಸಚಿವ ಅಶೋಕ್‌ ಗೆಹಲೋತ್‌ ಅವರು ಪತ್ರಿಕಾ ಗೋಷ್ಠಿ ಕರೆಯಲಿದ್ದು ಆಗ ಶರತು ಮತ್ತು ನಿಬಂಧನೆ ಬಗ್ಗೆಯೂ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next