Advertisement

Udupi: ನವೆಂಬರ್ 3: ಕೃಷ್ಣ ಗೀತಾ ಸೇವಾ ವೃಂದಕ್ಕೆ ಚಾಲನೆ

08:52 PM Oct 29, 2024 | Team Udayavani |

ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಪರಿಕಲ್ಪನೆ ಆದೇಶ ಮತ್ತು ಮಾರ್ಗದರ್ಶನದನ್ವಯ ದೇವ-ದೇಶ-ದೇಹ ಮಂದಿರಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಉದ್ದೇಶದೊಂದಿಗೆ ಕೃಷ್ಣಗೀತಾ ಸೇವಾ ವೃಂದವನ್ನು ರಚಿಸಿಕೊಂಡು ಸ್ವಚ್ಛತಾ ಕೆಲಸಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.

Advertisement

ನವೆಂಬರ್ 3 ರ ಭಾನುವಾರ ಬೆಳಿಗ್ಗೆ 5.30ಕ್ಕೆ ಶ್ರೀಕೃಷ್ಣ ಮಠದ ಸನಿಹದಲ್ಲಿರುವ ಗೀತಾ ಮಂದಿರದಲ್ಲಿ ಪರ್ಯಾಯ ಶ್ರೀಪಾದರು ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ನಗರ ಸಭಾಧ್ಯಕ್ಷ ಪ್ರಭಾಕರ ಪೂಜಾರಿ, ಗಾಂಧಿ ಆಸ್ಪತ್ರೆಯ ಡಾ. ಹರಿಶ್ವಂದ್ರ, ಡಾ. ವೇದವ್ಯಾಸ ತಂತ್ರಿ ಮತ್ತಿತರರು ಪಾಲುಗೊಳ್ಳಲಿದ್ದಾರೆ.

ಭಾಗವಹಿಸುವ ಸಂಘ ಸಂಸ್ಥೆಗಳ ವಿವರ:

* ನಗರಸಭೆ, ಉಡುಪಿ

Advertisement

* ಪತಂಜಲಿ ಯೋಗ ಸಮಿತಿ, ಉಡುಪಿ

* ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ಉಡುಪಿ

* ಶ್ರೀ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ, ಮತ್ತು ಮಹಿಳಾ ಘಟಕ ಉಡುಪಿ ಜಿಲ್ಲೆ

* ಶಿವಾಜಿ ಪಾರ್ಕ್ ನಿರ್ವಹಣ ಸಮಿತಿ

* ಬಬ್ಬುಸ್ವಾಮಿ ದೇವಸ್ಥಾನ, ಇಂದಿರಾನಗರ

* ಶ್ರೀ ಕೃಷ್ಣಧಾಮ, ಮಕ್ಕಳ ಭಗವದ್ಗೀತಾ ಪಠಣ ಸಮಿತಿ

ಪ್ರತಿ ತಿಂಗಳ ಮೊದಲ ಭಾನುವಾರ ಬೆಳಿಗ್ಗೆ 6 – 7ರ ವರೆಗೆ ಗೀತಾ ಮಂದಿರದಲ್ಲಿ ಈ ಅಭಿಯಾನ ಮುಂದುವರೆಯಲಿದೆ.

ಆಸಕ್ತರು ಯಾವ ಊರಲ್ಲಿ ಬೇಕಾದರೂ ಗೀತಾ ಮಂದಿರ ಕೇಂದ್ರಿತ ಸೇವಾ ವೃಂದವನ್ನು ರಚಿಸಿಕೊಂಡು ಸ್ವಚ್ಛತಾ ಕಾರ್ಯಗಳನ್ನು ನಿಯಮಿತವಾಗಿ ನಡೆಸಿಕೊಂಡು ಬರಬಹುದು.

ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ ಶ್ರೀಪುತ್ತಿಗೆ ಮಠದ ಶ್ರೀರಮಣಾಚಾರ್ಯ ಅವರ ಮೊ.ಸಂ. 8792158946 ಅನ್ನು ಸಂಪರ್ಕಿಸಬಹುದು ಎಂದು ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ಪ್ರಕಟಣೆ ತಿಳಿಸಿದೆ

Advertisement

Udayavani is now on Telegram. Click here to join our channel and stay updated with the latest news.

Next