Advertisement

ಅ. 10: ಮಣಿಪಾಲದಲ್ಲಿ ಆಟಿಸಂ ಸೆಂಟರ್‌ ಉದ್ಘಾಟನೆ

11:38 AM Oct 05, 2017 | |

ಉಡುಪಿ: ಮಣಿಪಾಲ ವಿಶ್ವವಿದ್ಯಾನಿಲಯದ ಸ್ಕೂಲ್‌ ಆಫ್ ಅಲೈಡ್‌ ಹೆಲ್ತ್‌ ಸಾಯನ್ಸ್‌ ಹಾಗೂ ಸರಕಾರೇತರ ಸಂಸ್ಥೆ “ಆಸರೆ’ಯ ಆಶ್ರಯದಲ್ಲಿ ಮಕ್ಕಳಿಗೆ ಆಟಿಸಂ ಹಾಗೂ ಕಲಿಕೆ ಅಸಾಮರ್ಥ್ಯ ಚಿಕಿತ್ಸಾ ಕೇಂದ್ರ ಅ. 10ರಂದು ಮಣಿಪಾಲದ ಆಸರೆಯ ಕ್ಯಾಂಪಸ್‌ನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಮಣಿಪಾಲ ವಿ.ವಿ.ಯ ಸ್ಕೂಲ್‌ ಆಫ್ ಅಲೈಡ್‌ ಹೆಲ್ತ್‌ ಸಾಯನ್ಸ್‌ (ಎಸ್‌ಒಎಎಚ್‌ಎಸ್‌) ಡೀನ್‌ ಡಾ| ಬಿ. ರಾಜಶೇಖರ್‌ ಅವರು ಎಸ್‌ಒಎಎಚ್‌ಎಸ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ಕೇಂದ್ರವನ್ನು ಅ. 10ರ ಸಂಜೆ 6ಕ್ಕೆ ಸಚಿವ ಪ್ರಮೋದ್‌ ಉದ್ಘಾಟಿಸಲಿದ್ದಾರೆ. ಮಣಿಪಾಲ ವಿ.ವಿ.ಯ ಪ್ರೊ ಚಾನ್ಸಲರ್‌ ಡಾ| ಎಚ್‌.ಎಸ್‌. ಬಲ್ಲಾಳ್‌ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ದೇಶದಲ್ಲಿ 2007ರಲ್ಲಿ ಮಾಡಿದ ಸಮೀಕ್ಷೆಯೊಂದರಲ್ಲಿ ಪ್ರತಿ 250 ಮಗುವಿಗೆ ಒಂದು ಮಗು ಆಟಿಸಂ ಸಮಸ್ಯೆ ಅಥವಾ ಕಲಿಕೆಯ ಅಸಾಮರ್ಥ್ಯದಿಂದ ಬಳಲುತ್ತಿರುತ್ತದೆ. ಕಲಿಕೆ ಅಸಾಮರ್ಥ್ಯ ಇರುವ ಮಗು ಲೆಕ್ಕವನ್ನು ಸರಿಯಾಗಿ ಮಾಡುವಲ್ಲಿ, ಅಕ್ಷರಗಳನ್ನು ಸರಿಯಾಗಿ ಗುರುತಿಸುವಲ್ಲಿ ವಿಫ‌ಲವಾಗುತ್ತದೆ. ಈ ಸಮಸ್ಯೆಗಳ ನಿವಾರಣೆಗೆ  ವಿಶೇಷವಾಗಿ ತರಬೇತಾದ ತಜ್ಞರ ಅಗತ್ಯವಿದೆ.

2011ರ ಜನಗಣತಿಯಂತೆ ಉಡುಪಿ ಜಿಲ್ಲೆಯಲ್ಲಿ ಆರು ವರ್ಷದೊಳಗಿನ 1,03,160 ಮಕ್ಕಳಿದ್ದಾರೆ. ಜಿಲ್ಲೆಯಲ್ಲಿ ಕೆಲವು ವಿಶೇಷ ಶಾಲೆಗಳನ್ನು ಹೊರತುಪಡಿಸಿ ಇಂಥ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುವ ತಜ್ಞರಿರುವ ಶಾಲೆಗಳಿಲ್ಲ. ಮಣಿಪಾಲ ಕೇಂದ್ರದಲ್ಲಿ ಕ್ಲಿನಿಕಲ್‌ ಸೈಕಾಲಜಿಸ್ಟ್‌, ಸ್ಪೀಚ್‌ ಲ್ಯಾಂಗ್ವೆಜ್‌ ಪೆಥಾಲಜಿಸ್ಟ್‌ ಹಾಗೂ ಆಡಿಯೋಲಜಿಸ್ಟ್‌, ಸ್ಪೆಷಲ್‌ ಎಜುಕೇಟರ್‌ಗಳನ್ನು ನಿಯೋಜಿಸಲಾಗುವುದು ಎಂದರು.

ಎಸ್‌ಒಎಎಚ್‌ಎಸ್‌ನ ಡಾ| ಸಾಬು ಕೆ.ಎಂ., ಕರ್ನಲ್‌ ಪ್ರಕಾಶ್‌ಚಂದ್ರ, ಆಸರೆಯ ಜೈವಿಟuಲ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ಕರಾವಳಿಯ ಮೊದಲ ಕೇಂದ್ರ
ಕರಾವಳಿಯಲ್ಲಿ ಪ್ರಾರಂಭಗೊಳ್ಳುತ್ತಿರುವ ಮೊದಲ ಆಟಿಸಂ ಚಿಕಿತ್ಸಾ ಕೇಂದ್ರ ಇದಾಗಿದೆ. ಸದ್ಯಕ್ಕೆ ಚಿಕಿತ್ಸೆಗೆ ಬೆಂಗಳೂರು, ಮೈಸೂರು ನಗರಗಳಿಗೆ ಹೋಗಬೇಕಾಗಿದೆ. ಆಟಿಸಂ ಮಕ್ಕಳಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ ಆಗಿದೆ. ಮಗುವಿನ ಚಟುವಟಿಕೆಗಳ ಮೂಲಕ ಸಮಸ್ಯೆ ಇರುವುದನ್ನು ಪತ್ತೆಹಚ್ಚಬಹುದಾಗಿದೆ. ಅದೇ ರೀತಿ ಮಗು ಶಾಲೆಗೆ ಹೋಗುವ ಸಮಯದಲ್ಲಿ ಕಲಿಕೆ ಅಸಾಮರ್ಥ್ಯವನ್ನು ಗುರುತಿಸಿ ಚಿಕಿತ್ಸೆ ನೀಡಿದರೆ ಸಾಮಾನ್ಯ ಮಗುವಿನಂತೆ ಬೆಳೆಯಲು ಸಾಧ್ಯ. ಮಗುವಿನ ಸಮಸ್ಯೆಯನ್ನು ಸಾಧ್ಯವಾದಷ್ಟು ಬೇಗ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಮಗು ಸಾಮಾನ್ಯ ಮಗುವಿನಂತೆ ಬೆಳೆಯುವ ಸಾಧ್ಯತೆ ಇರುತ್ತದೆ ಎಂದು ಡಾ| ರಾಜಶೇಖರ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next