Advertisement

ಮರಳು ತೆಗೆಯುವುದಕ್ಕೆ ಆಕ್ಷೇಪ: ಟಿಪ್ಪರ್‌ ಲಾರಿ ವಶ

01:05 PM May 27, 2017 | Team Udayavani |

ಉಪ್ಪಿನಂಗಡಿ: ನೆಕ್ಕಿಲಾಡಿ ಬಳಿಯ ನೇತ್ರಾವತಿ ನದಿಯಿಂದ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಗೆಂದು ಎಲ್‌ ಆ್ಯಂಡ್‌ ಟಿ (ಲಾರ್ಸನ್‌ ಆ್ಯಂಡ್‌ ಟೂಬೊÅ) ಸಂಸ್ಥೆಯ ಮೂಲಕ ನದಿಯಿಂದ ಮರಳು ತೆಗೆಯುವಾಗ ಸಾರ್ವಜನಿಕರು ಆಕ್ಷೇಪಿಸಿದ್ದು, ಈ ಹಿನ್ನೆಲೆಯಲ್ಲಿ ಗಣಿ ಇಲಾಖೆ ಅಧಿಕಾರಿಗಳು ನದಿಯಲ್ಲಿ ಮರಳುಗಾರಿಕೆಗೆ ಬಳಸುತ್ತಿದ್ದ ಟಿಪ್ಪರ್‌ ಲಾರಿಯನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.

Advertisement

ನೆಕ್ಕಿಲಾಡಿ ಗ್ರಾಮದ ಬೊಳ್ಳಾರಿನಲ್ಲಿ ಮೂರು ದಿನಗಳಿಂದ ನದಿಯಿಂದ ಮರಳು ತೆಗೆಯುತ್ತಿದ್ದರೆನ್ನಲಾಗಿದ್ದು, ಇದಕ್ಕೆ ಆಕ್ಷೇಪ ಸೂಚಿಸಿರುವ ಸ್ಥಳೀಯ ಮರಳು ವ್ಯಾಪಾರಿಗಳು ಹಾಗೂ ಸಾರ್ವಜನಿಕರು, ಇಲ್ಲಿ ಅಕ್ರಮವಾಗಿ ಮರಳು ತೆಗೆಯಲಾಗುತ್ತಿದೆ ಎಂದು ಆರೋಪಿಸಿ ದರಲ್ಲದೆ ಸ್ಥಳೀಯರಿಗೂ  ಮರಳು ತೆಗೆಯಲು ಅವಕಾಶ ನೀಡುವಂತೆ ಆಗ್ರಸಿದರು. 

ಈ ಬಗ್ಗೆ ಗೊಂದಲವುಂಟಾದಾಗ ಸ್ಥಳಕ್ಕೆ ಗಣಿ ಇಲಾಖೆ ಅಧಿಕಾರಿಗಳು ಹಾಗೂ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಮರಳು ತೆಗೆಯದಂತೆ ತಡೆ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಹಿಸಿಕೊಂಡಿದ್ದು, ಇದರ ಗುತ್ತಿಗೆಯನ್ನು ಲಾರ್ಸನ್‌ ಆ್ಯಂಡ್‌ ಟೂಬೊÅ ಸಂಸ್ಥೆಗೆ ನೀಡಿದೆ. 

ಈ ಸಂಸ್ಥೆ ಮರಳು ಶೇಖರಣೆ ಮಾಡಲು ಆರಂಭಿಸಿದ್ದು, ಜಿಲ್ಲಾಡಳಿತದ ಅನುಮತಿ ಯೊಂದಿಗೆ ಇಲ್ಲಿ ಮರಳು ತೆಗೆಯುತ್ತಿದೆ ಎಂದು ಹೇಳಲಾಗುತ್ತಿತ್ತು. 

Advertisement

ಆದರೆ ಮರಳು ತೆಗೆಯಲು ನೀಡಿರುವ ಪರವಾನಿಗೆಯಲ್ಲಿ ಸೂಚಿಸಿರುವ ಜಾಗ ಮತ್ತು ಇದೀಗ ತೆಗೆಯುತ್ತಿರುವ ಜಾಗ ಬದಲಾಗಿದೆ ಆದ್ದರಿಂದ ಇಲ್ಲಿ ಈ ಗೊಂದಲ ಉಂಟಾಗಿದೆ ಎಂದು ಹೇಳಲಾಗಿದೆ.

ಬ್ಲಾಕ್‌ ಗೊಂದಲ ಇದೆ: ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಮೂರ್ತಿ, ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿ ಸಲುವಾಗಿ ಮರಳು ತೆಗೆಯಲು ಲಾರ್ಸನ್‌ ಆ್ಯಂಡ್‌ ಟೂಬೊÅ ಸಂಸ್ಥೆಗೆ ಪರವಾನಿಗೆ ನೀಡಲಾಗಿದೆ. ಆದರೆ ಅವರಿಗೆ ಪರವಾನಿಗೆಯಲ್ಲಿ ತಿಳಿಸಿರುವ ಮರಳು ಬ್ಲಾಕ್‌ ಮತ್ತು ಅವರು ಮರಳು ತೆಗೆಯುತ್ತಿರುವ ಜಾಗದ ಬಗ್ಗೆ ಗೊಂದಲ ಇದೆ. ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ವಾಹನ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಮೂರ್ತಿ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next