Advertisement

ಕೋವಿಡ್‌ ವಾರ್ಡ್‌ಗೆ ಆಕ್ಷೇಪ

12:00 PM Nov 11, 2020 | Suhan S |

ಬೆಂಗಳೂರು: ಪ್ರಾದೇಶಿಕಕಣ್ಣಿನ ಆಸ್ಪತ್ರೆ ಮಿಂಟೋದಲ್ಲಿ ಕೋವಿಡ್‌ ಮತ್ತು ತೀವ್ರ ಉಸಿರಾಟ ಸಮಸ್ಯೆ (ಸಾರಿ) ವಾರ್ಡ್‌ ಪುನರಾರಂಭಿಸಲು ಬೆಂಗಳೂರು ವೈದ್ಯಕೀಯ ಕಾಲೇಜು ಮುಂದಾಗಿದೆ. ಬೆಳಕಿನ ಹಬ್ಬದ ಸಂದರ್ಭದಲ್ಲಿ ಈ ನಿರ್ಧಾರದಿಂದ ಹಾಸಿಗೆ ಕೊರತೆಯಾಗುವ ಸಾಧ್ಯತೆಗಳಿದ್ದು, ಇದು ಆಸ್ಪತ್ರೆ ವೈದ್ಯರ ನಿದ್ದೆಗೆಡಿಸಿದೆ.

Advertisement

ಸಾಮಾನ್ಯವಾಗಿ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹಾನಿಯಿಂದ ಮಿಂಟೋ ಆಸ್ಪತ್ರೆಯಲ್ಲಿ ರೋಗಿಗಳಸಂಖ್ಯೆ ಹೆಚ್ಚಾಗುತ್ತದೆ. ಬೆಂಗಳೂರು ಸೇರಿದಂತೆ ಇತರೆ ಜಿಲ್ಲೆಗಳಿಂದಲೂ ಪಟಾಕಿಯಿಂದ ಕಣ್ಣಿನ ಗಾಯಕ್ಕೊಳಗಾದವರು ಇಲ್ಲಿಗೆ ಬರುತ್ತಾರೆ. ಇದಕ್ಕಾಗಿ ಆಸ್ಪತ್ರೆಯುಮಕ್ಕಳು,ಮಹಿಳೆಹಾಗೂಪುರುಷರಿಗೆಂದು ಪ್ರತ್ಯೇಕ ವಾರ್ಡ್‌ ಮಾಡಿ 100 ಹಾಸಿಗೆಗಳನ್ನು ಮೀಸಲಿಡುತ್ತದೆ. ಜತೆಗೆ 24×7 ತುರ್ತು ಚಿಕಿತ್ಸಾ ಸೇವೆಯನ್ನು ನೀಡುತ್ತದೆ. ಪ್ರತಿ ವರ್ಷದಂತೆ ಈ ಬಾರಿಯೂ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿಯೇ ಆಸ್ಪತ್ರೆಯಲ್ಲಿ ಕೋವಿಡ್‌ ಮತ್ತು ಸಾರಿ ವಾರ್ಡ್‌ ಪುನಾರಂಭಕ್ಕೆ ಸಭೆಯಲ್ಲಿ ನಿರ್ಧರಿಸಲಾಗಿದೆ. ಅಲ್ಲದೆ, ಆಸ್ಪತ್ರೆಯಲ್ಲಿರುವ 300 ಹಾಸಿಗೆಗಳ ಪೈಕಿ 100 ಹಾಸಿಗೆ ಮೀಸಲಿಡುವಂತೆ ಸೂಚಿಸಿದೆ.

ಈ ರೀತಿ ಆಸ್ಪತ್ರೆಯಲ್ಲಿನ ಶೇ.33 ರಷ್ಟು ಹಾಸಿಗಳನ್ನು ಕೋವಿಡ್‌ ಸೋಂಕಿತರು ಮತ್ತು ಶಂಕಿತರ ಚಿಕಿತ್ಸೆಗೆ ಮೀಸಲಿಡುವುದರಿಂದ ಬಹುತೇಕ ಕಣ್ಣಿನ ಶಸ್ತ್ರ ಚಿಕಿತ್ಸೆಗಳು ಬಂದ್‌ ಮಾಡಬೇಕಾಗುತ್ತದೆ. ಜತೆಗೆ ಪಟಾಕಿ ಹಾನಿಗೊಳಗಾಗಿ ಬರುವವರಿವರ ಚಿಕಿತ್ಸೆಗೆ

ತೊಡಕಾಗುವ ಸಾಧ್ಯತೆ ಹೆಚ್ಚಿದೆ ಎನ್ನುವುದು ಆಸ್ಪತ್ರೆ ವೈದ್ಯರ ಅಭಿಪ್ರಾಯವಾಗಿದೆ. ಇನ್ನೊಂದೆಡೆ ಪಟಾಕಿ ನಿಷೇಧಿಸಿರುವುದರಿಂದ ಹಾನಿಗೊಳಗಾದವರ ಸಂಖ್ಯೆಯೂ ಕಡಿಮೆ ಇರುವ ಸಾಧ್ಯತೆಗಳಿವೆ ಎಂದು ವಿಕ್ಟೋರಿಯಾ ಕೊರೊನಾ ಸೋಂಕು ನಿರ್ವಹಣೆ ನೋಡಲ್‌ ಅಧಿಕಾರಿ ತಿಳಿಸಿದ್ದಾರೆ.

ಕಳೆದ ತಿಂಗಳಷ್ಟೇ ಪೂರ್ಣ ಪ್ರಮಾಣದಲ್ಲಿ ಆರಂಭ :  ಕೋವಿಡ್ ಹಿನ್ನೆಲೆ ಮಿಂಟೋ ಆಸ್ಪತ್ರೆ ಸೇರಿದಂತೆ ವಿಕ್ಟೋರಿಯಾ ಸಮುತ್ಛಯದ ಎಲ್ಲಾ ಆಸ್ಪತ್ರೆಯನ್ನು ಕೋವಿಡ್ ಸೋಂಕಿತ ಚಿಕಿತ್ಸೆಗೆ ಮೀಸಲಿಡಲಾಗಿತ್ತು. ಹೀಗಾಗಿ, ಮಾರ್ಚ್‌ ನಲ್ಲಿ ಬಂದ್‌ ಆಗಿದ್ದ ಆಸ್ಪತ್ರೆಯು ಜೂನ್‌ 22ಕ್ಕೆ ತುರ್ತು ಚಿಕಿತ್ಸಾ ವಿಭಾಗವನ್ನು ಮಾತ್ರ ಆರಂಭಿಸಿತ್ತು. ಆನಂತರ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ಬಡವರಿಗೆ ಚಿಕಿತ್ಸೆ ಸಮಸ್ಯೆಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್‌ ಅವರು ಅಕ್ಟೋಬರ್‌ನಿಂದ ಕೋವಿಡ್ ವಾರ್ಡ್‌ ತೆರವುಗೊಳಿಸಿ ಪೂರ್ಣ ಪ್ರಮಾಣ ದಲ್ಲಿ ಸೇವೆ ಆರಂಭಿಸಲು ಸೂಚಿಸಿದ್ದರು. ಸದ್ಯ300ಕ್ಕೂಹೆಚ್ಚುರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ನಗರದಲ್ಲಿ ಕೋವಿಡ್ ಹೊಸ ಪ್ರಕರಣಗಳು ಕಡಿಮೆಯಾಗಿವೆ. ಆದರೂ, ಬಡವರ ಕಣ್ಣಿನ ಆಸ್ಪತ್ರೆಯಾಗಿರುವ ಮಿಂಟೋದಲ್ಲಿ ಹಾಸಿಗೆ ಮೀಸಲಿಡುವ ನಿರ್ಧಾರಕ್ಕೆಆಸ್ಪತ್ರೆವೈದ್ಯರು ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಯಾಕೆ ಮತ್ತೆ ಕೋವಿಡ್ ವಾರ್ಡ್‌? :  ವಿಕ್ಟೋರಿಯಾ ಆಸ್ಪತ್ರೆಯಕಟ್ಟಡಕಾಮಗಾರಿ ಹಿನ್ನೆಲೆ ಅಲ್ಲಿದ್ದಕೊರೊನಾ ವಾರ್ಡ್‌ ಅನ್ನು ಪಕ್ಕದಲ್ಲಿಯೇ ಇರುವ ಸಮುತ್ಛಯದ ಇತರೆ ಆಸ್ಪತ್ರೆಗಳಿಗೆ ವರ್ಗಾಯಿಸಲು ಬೆಂಗಳೂರು ವೈದ್ಯಕೀಯಕಾಲೇಜು ನಿರ್ಧರಿಸಿದೆ. ಅಲ್ಲದೆ, ವಿಕ್ಟೋರಿಯಾ ಸಮುಚ್ಛಯದಲ್ಲಿ 100 ಹಾಸಿಗೆಗಳ ಸಾರಿ ವಾರ್ಡ್‌ ತೆರೆಯಲು ರಾಜ್ಯ ಸರ್ಕಾರದಿಂದ ಸೂಚನೆ ಬಂದಿದೆ. ಸದ್ಯ ಮಿಂಟೋ ಆಸ್ಪತ್ರೆಯ ಬಳಿಯೇ ಆಕ್ಸಿಜನ್‌ ಕೊಳವೆ ಹಾದು ಹೋಗಿರುವುದರಿಂದ ಇಲ್ಲಿಯೇ ಕೋವಿಡ್‌ ಮತ್ತು ಸಾರಿ ವಾರ್ಡ್‌ ತೆರೆಯಲು ಮುಂದಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಸಾಕಷ್ಟು ಸಮಸ್ಯೆಯಾಗುತ್ತದೆ :  ಆರು ತಿಂಗಳು ಬಂದ್‌ ಹಿನ್ನೆಲೆ ಸದ್ಯ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿದೆ. ಸಾವಿರಾರು ಮಂದಿ ಶಸ್ತ್ರಚಿಕಿತ್ಸೆಗಾಗಿ ಎದುರು ನೋಡುತ್ತಿದ್ದಾರೆ. ರೋಗಿಯ ಆರೋಗ್ಯ ಸ್ಥಿತಿ ಅವಲೋಕಿಸಿ, ಆದ್ಯತೆ ಮೇರೆಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಅಲ್ಲದೆ, ದೀಪಾವಳಿ ಕೆಲ ದಿನಗಳಿದ್ದು, ಪಟಾಕಿ ಹಾನಿಗೊಳಗಾದವರ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ. ಮತ್ತೆ ಕೋವಿಡ್ ಅಥವಾ ಸಾರಿ ವಾರ್ಡ್‌ ಆರಂಭಿಸಿದರೆ ಹಾಸಿಗೆ ಮೀಡಲಿಡಬೇಕು, ಸಿಬ್ಬಂದಿ ನಿಯೋಜಿಸಬೇಕು. ಇದರಿಂದ ಇತರೆ ರೋಗಿಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತದೆ ಎಂದು ಮಿಂಟೋಕಣ್ಣಾಸ್ಪತ್ರೆ ನಿರ್ದೇಶಕಿ ಡಾ.ಸುಜಾತಾ ರಾಥೋಡ್‌ ತಿಳಿಸಿದರು.

ಇತರೆಡೆ ವರ್ಗಕ್ಕೆ ಕ್ರಮ: ಡೀನ್‌ :  ಮಿಂಟೋ ಆಸ್ಪತ್ರೆಯಲ್ಲಿ100 ಹಾಸಿಗೆಗಳ ತೀವ್ರ ಉಸಿರಾಟ ಸಮಸ್ಯೆ ಹೊಂದಿರುವ ರೋಗಿಗಳ ವಾರ್ಡ್‌ ಆರಂಭಿಸುವ ಕುರಿತು ಚರ್ಚೆ ನಡೆದಿದೆ. ಸದ್ಯ ದೀಪಾವಳಿ ಹಿನ್ನೆಲೆ ರೋಗಿಗಳ ಸಂಖ್ಯೆ ಹೆಚ್ಚಿರುತ್ತದೆ ಎಂದು ಇತರೆಡೆಗೆ ವರ್ಗಾಯಿಸಲುಕ್ರಮ ಕೈಗೊಳ್ಳುತ್ತೇನೆ ಎಂದು ಬೆಂಗಳೂರು ವೈದ್ಯಕೀಯಕಾಲೇಜು ನಿರ್ದೇಶಕರು ಮತ್ತು ಡೀನ್‌ ಡಾ.ಜಯಂತಿ ಸ್ಪಷ್ಟಪಡಿಸಿದ್ದಾರೆ.

 

-ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next