Advertisement
ಓಟ್ಸ್ ಉತ್ತಪ್ಪಬೇಕಾಗುವ ಸಾಮಗ್ರಿ: ಓಟ್ಸ್ – ಒಂದು ಕಪ್, ಚಿರೋಟಿ ರವೆ- ಅರ್ಧ ಕಪ್, ಮೊಸರು- ಒಂದು ಕಪ್, ಅಕ್ಕಿ ಹಿಟ್ಟು- ಅರ್ಧ ಕಪ್, ಜೀರಿಗೆ- ಒಂದು ಚಮಚ, ಶುಂಠಿ- ಅರ್ಧ ಟೀ ಚಮಚ, ಕ್ಯಾರೆಟ್ ತುರಿ- ಒಂದು ಕಪ್, ಹೆಚ್ಚಿದ ಕ್ಯಾಪ್ಸಿಕಂ- ಒಂದು, ಹಸಿಮೆಣಸು- ಎರಡು, ಹೆಚ್ಚಿದ ಈರುಳ್ಳಿ- ಒಂದು ಕಪ್, ಕೊತ್ತಂಬರಿಸೊಪ್ಪು- ಎಂಟು ಚಮಚ, ಉಪ್ಪು ರುಚಿಗೆ.
ಬೇಕಾಗುವ ಸಾಮಗ್ರಿ: ಹಾಲು- ಒಂದು ಕಪ್, ಓಟ್ಸ್- ಎರಡು ದೊಡ್ಡ ಚಮಚ, ಹೆಚ್ಚಿದ ಬಾಳೆಹಣ್ಣು – ಐದು ಚಮಚ, ಹೆಚ್ಚಿದ ಪಪ್ಪಾಯ, ಸೇಬು, ಸಪೋಟಾ, ಖಬೂಜ- ತಲಾ ನಾಲ್ಕು ಚಮಚ, ಹುರಿದ ಅಗಸೆಬೀಜ- ಎರಡು ಚಮಚ, ಹೆಚ್ಚಿದ ಬಾದಾಮಿ ಮತ್ತು ಖರ್ಜೂರ- ಎರಡು ಚಮಚ, ಸಕ್ಕರೆ, ಬೆಲ್ಲ ಅಥವಾ ಜೇನುತುಪ್ಪ- ರುಚಿಗೆ ಬೇಕಷ್ಟು, ಕಾರ್ನ್ ಫ್ಲೇಕ್ಸ್ – ಎರಡು ಚಮಚ.
Related Articles
Advertisement
ಓಟ್ಸ್ ಲಡ್ಡು ಬೇಕಾಗುವ ಸಾಮಗ್ರಿ: ಓಟ್ಸ್ ‰- ಒಂದೂವರೆ ಕಪ್, ಸಕ್ಕರೆ- ಒಂದು ಕಪ್, ಗೋಡಂಬಿ ತರಿ- ಎಂಟು ಚಮಚ, ಏಲಕ್ಕಿ ಸುವಾಸನೆಗಾಗಿ, ತುಪ್ಪ- ಅರ್ಧ ಕಪ್. ತಯಾರಿಸುವ ವಿಧಾನ: ಬಾಣಲೆಯಲ್ಲಿ ಓಟ್ಸ್ ಹಾಕಿ ಐದು ನಿಮಿಷ ಸಣ್ಣ ಉರಿಯಲ್ಲಿ ಹುರಿದು ಆರಿದ ನಂತರ ನುಣ್ಣಗೆ ಪುಡಿಮಾಡಿ ಮಿಕ್ಸಿಂಗ್ ಬೌಲ್‌ಗೆ ಹಾಕಿ. ಇದಕ್ಕೆ ಸಕ್ಕರೆ ಪುಡಿ, ತುಪ್ಪದಲ್ಲಿ ಹುರಿದ ಗೋಡಂಬಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ತುಪ್ಪಬಿಸಿಮಾಡಿ ಇದಕ್ಕೆ ಸೇರಿಸಿ ಪುನಃ ಮಿಶ್ರಮಾಡಿ ಬಿಸಿ ಇರುವಾಗಲೇ ಉಂಡೆ ಕಟ್ಟಿ. ಓಟ್ಸ್ ಚಿಕ್ಕಿ
ಬೇಕಾಗುವ ಸಾಮಗ್ರಿ: ಓಟ್ಸ್ – ಅರ್ಧ ಕಪ್, ಬಿಳಿ ಎಳ್ಳು- ಕಾಲು ಕಪ್, ಸಕ್ಕರೆ- ಒಂದೂವರೆ ಕಪ್, ಬೆಲ್ಲದ ಪುಡಿ- ಕಾಲು ಕಪ್, ಹುರಿದು ಸಿಪ್ಪೆ$ತೆಗೆದು ತರಿತರಿಯಾಗಿಸಿದ ಶೇಂಗಾ- ಒಂದು ಕಪ್, ಏಲಕ್ಕಿ ಪುಡಿ ಸುವಾಸನೆಗಾಗಿ. ತಯಾರಿಸುವ ವಿಧಾನ: ಓಟ್ಸ್‌ನ್ನು ಐದು ನಿಮಿಷ ಸಣ್ಣ ಉರಿಯಲ್ಲಿ ಹುರಿದು ಆರಿದ ಮೇಲೆ ಮಿಕ್ಸಿಯಲ್ಲಿ ತರಿತರಿಯಾಗಿಸಿ. ಬಾಣಲೆಯಲ್ಲಿ ಸಕ್ಕರೆ ಮತ್ತು ಬೆಲ್ಲವನ್ನು ನೀರು ಸೇರಿಸದೆ ಸಣ್ಣ ಉರಿಯಲ್ಲಿ ಕರಗಲು ಇಡಿ. ಇದು ಸಂಪೂರ್ಣ ಕರಗಿದ ಮೇಲೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಮಿಶ್ರಮಾಡಿ ತಳ ಬಿಡಲು ಪ್ರಾರಂಭವಾದಾಗ ಒಂದು ಚಮಚ ತುಪ್ಪ ಮತ್ತು ಏಲಕ್ಕಿ ಪುಡಿ ಹಾಕಿ ಮಗುಚಿ ತುಪ್ಪ ಸವರಿದ ಮಣೆಯಲ್ಲಿ ಹರಡಿ, ತುಪ್ಪಸವರಿದ ಲಟ್ಟಣಿಗೆಯಿಂದ ಸರಿ ಮಾಡಿಕೊಳ್ಳಿ. ಬಿಸಿ ಇರುವಾಗಲೇ ಚಾಕುವಿನಿಂದ ಬೇಕಾದ ಆಕಾರಕ್ಕೆ ಕತ್ತರಿಸಿ. ಗೀತಾಸದಾ