Advertisement

ನ್ಯೂಜಿಲ್ಯಾಂಡಿಗೂ ಆಘಾತವಿಕ್ಕಿದ ದಕ್ಷಿಣ ಆಫ್ರಿಕಾ

10:58 PM Mar 17, 2022 | Team Udayavani |

ಹ್ಯಾಮಿಲ್ಟನ್‌: ವನಿತಾ ವಿಶ್ವಕಪ್‌ ಕೂಟದ ಥ್ರಿಲ್ಲಿಂಗ್‌ ಮುಖಾ ಮುಖೀಯೊಂದರಲ್ಲಿ ದಕ್ಷಿಣ ಆಫ್ರಿಕಾ 2 ವಿಕೆಟ್‌ಗಳಿಂದ ಆತಿಥೇಯ ನ್ಯೂಜಿ ಲ್ಯಾಂಡನ್ನು ಮಣಿಸಿ ಅಜೇಯ ಓಟ ಬೆಳೆಸಿದೆ.

Advertisement

ಗುರುವಾರ “ಸೆಡ್ಡನ್‌ ಪಾರ್ಕ್‌’ನಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ನ್ಯೂಜಿಲ್ಯಾಂಡ್‌ 47.5 ಓವರ್‌ಗಳಲ್ಲಿ 228ಕ್ಕೆ ಕುಸಿಯಿತು. ದಕ್ಷಿಣ ಆಫ್ರಿಕಾ 49.3 ಓವರ್‌ಗಳಲ್ಲಿ 8 ವಿಕೆಟಿಗೆ 229 ರನ್‌ ಮಾಡಿ ರೋಚಕ ಜಯ ಸಾಧಿಸಿತು. ಮರಿಜಾನ್‌ ಕಾಪ್‌ ಅವರ ಮತ್ತೂಂದು ಆಲ್‌ರೌಂಡ್‌ ಶೋ ದಕ್ಷಿಣ ಆಫ್ರಿಕಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

ಹರಿಣಗಳ ಪಡೆ ಅಜೇಯ :

ಇದರೊಂದಿಗೆ ದಕ್ಷಿಣ ಆಫ್ರಿಕಾ ಆಡಿದ ನಾಲ್ಕೂ ಪಂದ್ಯಗಳನ್ನು ಗೆದ್ದಂ ತಾಯಿತು. ಆಸ್ಟ್ರೇಲಿಯ ಕೂಡ ಎಲ್ಲ 4 ಪಂದ್ಯ ಜಯಿಸಿದೆ. ರನ್‌ರೇಟ್‌ನಲ್ಲಿ ಮುಂದಿರುವ ಆಸ್ಟ್ರೇಲಿಯ (+1.744) ಅಗ್ರಸ್ಥಾನ ಅಲಂಕರಿಸಿದರೆ, ದಕ್ಷಿಣ ಆಫ್ರಿಕಾ ದ್ವಿತೀಯ ಸ್ಥಾನದಲ್ಲಿದೆ (+0.226). ನ್ಯೂಜಿಲ್ಯಾಂಡ್‌ 5 ಪಂದ್ಯಗಳಲ್ಲಿ ಅನುಭವಿಸಿದ 3ನೇ ಸೋಲು ಇದಾಗಿದೆ. ಅದು 4ನೇ ಸ್ಥಾನದಲ್ಲೇ ಉಳಿದಿದೆ.

35ನೇ ಓವರ್‌ ತನಕ ನ್ಯೂಜಿಲ್ಯಾಂಡ್‌ ಉತ್ತಮ ಸ್ಥಿತಿಯಲ್ಲಿತ್ತು. 3ಕ್ಕೆ 168 ರನ್‌ ಮಾಡಿ ದೊಡ್ಡ ಮೊತ್ತದ ಸೂಚನೆ ನೀಡಿತ್ತು. ನಾಯಕಿ ಸೋಫಿ ಡಿವೈನ್‌ ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡು ನಿಂತಿದ್ದರು. 40ನೇ ಓವರ್‌ನಲ್ಲಿ 93 ರನ್‌ ಮಾಡಿದ ಡಿವೈನ್‌ (101 ಎಸೆತ, 12 ಬೌಂಡರಿ, 1 ಸಿಕ್ಸರ್‌) ವಿಕೆಟ್‌ ಉರುಳುವುದರೊಂದಿಗೆ ಕಿವೀಸ್‌ ನಾಟಕೀಯ ಕುಸಿತ ಕಂಡಿತು. ಶಬಿ°ಮ್‌ ಇಸ್ಮಾಯಿಲ್‌ (27ಕ್ಕೆ 3), ಅಯಬೊಂಗಾ ಖಾಕಾ (31ಕ್ಕೆ 3) ಮತ್ತು ಮರಿಜಾನ್‌ ಕಾಪ್‌ (44ಕ್ಕೆ 2) ಘಾತಕ ಬೌಲಿಂಗ್‌ ದಾಳಿ ಸಂಘಟಿಸಿದರು. ಬ್ಯಾಟಿಂಗ್‌ನಲ್ಲೂ ಮಿಂಚಿದ ಕಾಪ್‌ ಅಜೇಯ 34 ರನ್‌ ಮಾಡಿ ತಂಡಕ್ಕೆ ಗೆಲುವು ತಂದಿತ್ತರು.

Advertisement

ದ. ಆಫ್ರಿಕಾ ಯಶಸ್ವಿ ಚೇಸಿಂಗ್‌ :

ಲಾರಾ ವೋಲ್ವಾರ್ಟ್‌ (67), ನಾಯಕಿ ಸುನೆ ಲುಸ್‌ (51) ದಕ್ಷಿಣ ಆಫ್ರಿಕಾ ಚೇಸಿಂಗ್‌ನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂತಿಮ ಓವರ್‌ನಲ್ಲಿ ದಕ್ಷಿಣ ಆಫ್ರಿಕಾ ಜಯಕ್ಕೆ 6 ರನ್‌ ಆಗತ್ಯವಿತ್ತು. ನ್ಯೂಜಿಲ್ಯಾಂಡ್‌ 2 ವಿಕೆಟ್‌ ಉರುಳಿಸಬೇಕಿತ್ತು. ಕಾಪ್‌ ಮೊದಲ ಎಸೆತವನ್ನೇ ಬೌಂಡರಿಗೆ ಬಾರಿಸಿದರು. ಬಳಿಕ ಸಿಂಗಲ್‌ ತೆಗೆದರು. 3ನೇ ಎಸೆತದಲ್ಲಿ ಒಂದು ರನ್‌ ತೆಗೆದ ಖಾಕಾ ತಂಡದ ಗೆಲುವನ್ನು ಸಾರಿದರು.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲ್ಯಾಂಡ್‌-47.5 ಓವರ್‌ಗಳಲ್ಲಿ 228 (ಡಿವೈನ್‌ 93, ಕೆರ್‌ 42, ಗ್ರೀನ್‌ 30, ಹ್ಯಾಲಿಡೇ 24, ಇಸ್ಮಾಯಿಲ್‌ 27ಕ್ಕೆ 3, ಖಾಕಾ 31ಕ್ಕೆ 3, ಕಾಪ್‌ 44ಕ್ಕೆ 2). ದಕ್ಷಿಣ ಆಫ್ರಿಕಾ-49.3 ಓವರ್‌ಗಳಲ್ಲಿ 8 ವಿಕೆಟಿಗೆ 229 (ವೋಲ್ವಾರ್ಟ್‌ 67, ಲುಸ್‌ 51, ಕಾಪ್‌ ಔಟಾಗದೆ 34, ಕೆರ್‌ 50ಕ್ಕೆ 3, ಮಕಾಯ್‌ 49ಕ್ಕೆ 2). ಪಂದ್ಯಶ್ರೇಷ್ಠ: ಮರಿಜಾನ್‌ ಕಾಪ್‌.

Advertisement

Udayavani is now on Telegram. Click here to join our channel and stay updated with the latest news.

Next