ರಾಮನಗರ: ಪೌಷ್ಟಿಕ ಆಹಾರ ಸೇವನೆಯಿಂದ ದೇಹ ದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದರಜೊತೆಗೆ ದೈಹಿಕ ಸಾ ಮರ್ಥ್ಯ ವೃದ್ಧಿಸುತ್ತದೆ ಹಾಗೂ ಆರೋಗ್ಯಕರ ಬೆಳವಣಿಗೆಗೆ ಸಹಾಯಕವಾಗುತ್ತದೆ ಎಂದು ಜಿಪಂ ಸಿಇಒ ಇಕ್ರಂ ತಿಳಿಸಿದರು.
ಜಿಲ್ಲೆಯ ಕನ ಕ ಪುರ ತಾಲೂಕಿನ ಕಬ್ಟಾಳು ಗ್ರಾಮದಲ್ಲಿ ಕನಕಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ವತಿಯಿಂದ ಆಯೋಜಿಸಲಾಗಿದ್ದ ಪೋಷನ್ ಪಕ್ವಾಡ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆವತಿಯಿಂದ ಗಭಿರ್ಣಿಯರು, ಬಾಣಂತಿಯರು ಹಾಗೂ 1 ರಿಂದ 2 ವರ್ಷದೊಳಗಿನ ಮಕ್ಕಳಲ್ಲಿಅಪೌಷ್ಟಿಕತೆ ಉಂಟಾಗಬಾರದು ಎಂದು ಪೋಷಣ್ ಅಭಿಯಾನ ಯೋಜನೆಯಡಿ ಅಕ್ಕಿ, ಬೇಳೆ, ಹೆಸರುಕಾಳು ಮುಂತಾದ ಆಹಾರವನ್ನು ಕೋವಿಡ್ ಹಿನ್ನಲೆಯಲ್ಲಿ ಮನೆ ಮನೆಗೆ ತಲುಪಿಸಲಾಗುತ್ತಿದೆ. ಸರಿಯಾದ ಸಮಯಕ್ಕೆ ಆಹಾರ ಸೇವಿಸಿ ಪೌಷ್ಟಿಕತೆಗೆ ಹೆಚ್ಚಿನ ಆದ್ಯತೆ ನೀಡಿ ಎಂದರು.
ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಿಲ್ಲಾದ್ಯಂತ ನಗರ ಹಾಗೂ ಗ್ರಾ ಮೀಣ ಪ್ರದೇಶಗಳ ನಾಗ ರಿ ಕ ರಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸುವುದು ಪೋಷಣ್ ಪಕ್ವಾಡದ ಪ್ರಮುಖ ಕಾರ್ಯ ಕ್ರಮ ದ ಉದ್ದೇಶವಾಗಿದ್ದು, ಪೋಷಣ್ ಪಕ್ವಾಡಕಾರ್ಯಕ್ರಮವನ್ನು ಮಾ.31 ರವರೆಗೆ ಪ್ರತಿ ದಿನ ಪೌಷ್ಟಿಕಾಂಶಕ್ಕೆ ಹಾಗೂ ದಿನ ನಿತ್ಯದ ಆರೋಗ್ಯದ ಬಗ್ಗೆ ಸಮುದಾಯಗಳಲ್ಲಿ ಅರಿವು ಮೂಡಿಸಲು ವಿ ವಿಧ ಚಟುವಟಿಕೆಗಳನ್ನು ಹ ಮ್ಮಿಕೊಳ್ಳಲಾ ಗುವುದು ಎಂದರು.
ಕಾರ್ಯಕ್ರಮದಲ್ಲಿ ಜಿಪಂ ಯೋಜನಾ ನಿರ್ದೇಶಕ ಶಿವಕುಮಾರ್, ಕನಕಪುರ ತಾಪಂ ಇಒ ಮೋಹನ್‌ಬಾಬು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುನಾಥ್, ಆರೋಗ್ಯ ಸಹಾಯಕಿ ಅಲ ಮೇಲಮ್ಮ, ಪಿಡಿಒ ಲೋಕೇಶ್ ಇತರರಿದ್ದರು.