Advertisement
ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಸುತ್ತೂರು ಶ್ರೀಕ್ಷೇತ್ರದಲ್ಲಿ ನಡೆದ ರೈತ ಉತ್ಪಾದನಾ ಕಂಪನಿಗಳು-ಅವಕಾಶಗಳು ಮತ್ತು ಸವಾಲುಗಳು ವಿಷಯ ಕುರಿತ ಕೃಷಿ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಕೆರೆ ಜೀರ್ಣೋದ್ಧಾರ ಅವಶ್ಯ: ಕೃಷಿಯಲ್ಲಿ ಯಥೇಚ್ಚ ರಸಗೊಬ್ಬರ ಬಳೆಕೆಯಿಂದ ಭೂಮಿ ಮತ್ತು ಮಾನವನ ಆರೋಗ್ಯದ ಮೇಲೆ ದುಷ್ಪ$ರಿಣಾಮ ಬೀರುತ್ತಿದೆ ಎಂದ ಅವರು, ಕೆರೆಗಳ ಜೀರ್ಣೋದ್ಧಾರಕ್ಕೆ ಸರ್ಕಾರ ವಿಶೇಷ ಗಮನಕೊಡಬೇಕಿದೆ. ಸರ್ಕಾರದ ಹೂಳೆತ್ತುವ ಕಾಮಗಾರಿಗೆ ಬದಲಾಗಿ ರೈತರೇ ಕೆರೆಯ ಗೋಡನ್ನು ಹೊಲಕ್ಕೆ ಬಳಸಿಕೊಂಡಲ್ಲಿ ಉತ್ತಮ ಗೊಬ್ಬರ ದೊರಕಲಿದೆ ಎಂದು ಹೇಳಿದರು.
ರೈತರ ಸ್ಥಿತಿ ಅತಂತ್ರ: ಭಗೀರಥ ಉಪ್ಪಾರ ಪೀಠದ ಪುರುಷೋತ್ತಮಾನಂದ ಮಹಾಸ್ವಾಮಿ ಮಾತನಾಡಿ, ಯುವಕರು ಕೃಷಿಯಿಂದ ವಿಮುಖರಾಗಿ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಿ ಕೃಷಿಯತ್ತ ಯುವಜನರನ್ನು ಆಕರ್ಷಿಸುವ ಕೆಲಸವಾಗಬೇಕು.
ಆದರೆ, ಸರ್ಕಾರದ ನೀತಿ-ನಿಯಮಗಳು ಸಮರ್ಪಕವಾಗಿ ಜಾರಿಯಾಗದಿರುವುದರಿಂದ ರೈತರ ಸ್ಥಿತಿ ಡೋಲಾಯಮಾನವಾಗಿದೆ. ಕೃಷಿಗೆ ನೀರು, ವಿದ್ಯುತ್ ಸಮರ್ಪಕವಾಗಿ ಒದಗಿಸದೆ, ಬೆಳೆಗೆ ವೈಜಾnನಿಕ ಬೆಲೆ ಕೊಡದ ಸರ್ಕಾರಗಳು ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಪರಿಹಾರ ನೀಡಿ ಕೈತೊಳೆದುಕೊಳ್ಳುವ ಮಟ್ಟಕ್ಕೆ ತಲುಪಿವೆ ಎಂದು ವಿಷಾದಿಸಿದರು.
ಭಾಗ್ಯ ಕೊಟ್ಟು ಜನರ ಸೋಮಾರಿ ಮಾಡಿದ ಸರ್ಕಾರ: ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಉಚಿತ ಆಹಾರದ ಜತೆಗೆ ಮದ್ಯವನ್ನೂ ಕೊಟ್ಟ ಸರ್ಕಾರ ಹಲವು ಭಾಗ್ಯಗಳನ್ನು ಕೊಟ್ಟು ಜನರನ್ನು ಸೋಮಾರಿಗಳನ್ನಾಗಿಸಿದೆ. ಸಾಲ ಮಾಡಿದ ರೈತರು ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ನಮ್ಮದು ರೈತಪರ ಸರ್ಕಾರ ಅನ್ನುವವರು ರೈತರಿಗಾಗಿ ಮಾಡಿರುವುದೇನು ಎಂದು ಪ್ರಶ್ನಿಸಿದರು.ರೈತರ ಸಮಸ್ಯೆಗಳಿಗೆ ಸರ್ಕಾರ ಮನ್ನಣೆ ನೀಡಿದ್ದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ, ಸರ್ಕಾರ ಆತ್ಮಹತ್ಯೆಗೆ ಪರಿಹಾರ ನೀಡಬೇಕಾದ ಪ್ರಮೇಯವು ಬರುತ್ತಿರಲಿಲ್ಲ. ರೈತರನ್ನು ಸರಿಯಾದ ರೀತಿಯಲ್ಲಿ ಪ್ರೋತ್ಸಾಹಿಸದೆ ಯಾವ ಭಾಗ್ಯವು ಬೇಕಿಲ್ಲ ಎಂದರು. ಸಿರಿಧಾನ್ಯ ಬೆಳೆದರೂ ಸೂಕ್ತ ಮಾರುಕಟ್ಟೆ ಸಿಗುತ್ತಿಲ್ಲ.
ರಾಗಿ ಬೆಳೆಯಲು ಹೋಗಿ ಹಾಕಿದ ಬಂಡವಾಳ ವಾಪಸ್ ಬಾರದೆ ಕೈಸುಟ್ಟುಕೊಂಡ ಉದಾಹರಣೆಗಳಿದೆ. ಹೀಗಾಗಿ ಸರ್ಕಾರ ಕ್ವಿಂಟಾಲ್ ರಾಗಿಗೆ 5 ಸಾವಿರ ರೂ. ಬೆಂಬಲ ಘೋಷಿಸಲಿ ಎಂದು ಆಗ್ರಹಿಸಿದರು. ಸರ್ಕಾರದ ವಿರುದ್ಧ ರೈತರು ಬಂಡೇಳುವ, ಪ್ರಶ್ನಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಆಗ ರೈತರ ಆತ್ಮಹತ್ಯೆಯೂ ತಪ್ಪುತ್ತೆ ಎಂದು ಹೇಳಿದರು.
ಸಂಘಟಿತರಾದರೆ ಶೋಷಣೆಯಿಂದ ಮುಕ್ತ: ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ರೈತರು ಸಂಘಟಿತರಾದರೆ ಶೋಷಣೆಯಿಂದ ಮುಕ್ತರಾಗಲು ಸಾಧ್ಯ. ಈ ನಿಟ್ಟಿನಲ್ಲಿ 8-10ಹಳ್ಳಿಗಳ ರೈತರು ಸೇರಿ ರೈತ ಉತ್ಪಾದನಾ ಕಂಪನಿಗಳನ್ನು ಸ್ಥಾಪಿಸಿಕೊಂಡರೆ ಅನುಕೂಲವಾಗಲಿದೆ. ಸರ್ಕಾರಗಳನ್ನು ಎಚ್ಚರಿಸಲು ಸಾಕಷ್ಟು ಹೋರಾಟ ಮಾಡುತ್ತಿದ್ದೇವೆ.
ಆದರೆ, ರಾಜಕಾರಣಿಗಳೇ ಕಾರ್ಖಾನೆಗಳ ಮಾಲೀಕರಾಗಿರುವುದರಿಂದ ನ್ಯಾಯಯುತ ಬೆಲೆಕೊಡಿಸಲಾಗಿಲ್ಲ. ಹೀಗಾಗಿ ರೈತರು ಸಂಘಟಿತರಾಗಿ ಜಾಗೃತರಾಗಬೇಕು ಎಂದರು. ಮಾರಿಷಸ್ ಉಪ ರಾಷ್ಟ್ರಪತಿ ಪರಮಶಿವುಂ ಪಿಳ್ಳೆ„ ವ್ಯಾಪೂರಿ, ತಮಿಳುನಾಡು ಶಾಸಕ ವಿಜಯನ್ ಮೊದಲಾದವರು ಉಪಸ್ಥಿತರಿದ್ದರು.