Advertisement

ಕೊಂಕಣ ರೈಲ್ವೇಯಲ್ಲಿ ಅಡಿಕೆ ಸಾಗಾಟ: ಇಂದು ಸಾಂಕೇತಿಕ ಚಾಲನೆ

10:44 PM Sep 22, 2020 | mahesh |

ಪುತ್ತೂರು: ಕೊಂಕಣ ರೈಲ್ವೇ ಮೂಲಕ ಗುಜರಾತ್‌ಗೆ ಅಡಿಕೆ ಸಾಗಾಟಕ್ಕೆ ಸೆ. 23ರಂದು ಬೆಳಗ್ಗೆ 9.30ಕ್ಕೆ ಎಪಿಎಂಸಿ ಪ್ರಾಂಗಣದಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಲಾಗುವುದು. ಅ. 3ರಂದು ಸಚಿವರ ಸಮ್ಮುಖದಲ್ಲಿ ಅಧಿಕೃತ ಉದ್ಘಾಟನೆ ನಡೆಸಲಾಗುವುದು ಎಂದು ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ರೈಲ್ವೇ ಅಧಿಕಾರಿ ಮಾಹಿತಿ ನೀಡಿದರು.

Advertisement

ಸೆ. 22ರಂದು ಸಾಲ್ಮರ ಎಪಿಎಂಸಿ ಸಭಾಂಗಣದಲ್ಲಿ ಅಧ್ಯಕ್ಷ ದಿನೇಶ್‌ ಮೆದು ಅಧ್ಯಕ್ಷತೆಯಲ್ಲಿ ಎಪಿಎಂಸಿ ಸಾಮಾನ್ಯ ಸಭೆ ನಡೆಯಿತು. ಕೊಂಕಣ ರೈಲ್ವೇ ಎಂಜಿನಿಯರ್‌ ಸುರೇಶ್‌ ಗೌಡ ಮಾಹಿತಿ ನೀಡಿ, ಸೆ. 23ರಂದು ಸಾಂಕೇತಿಕ ಚಾಲನೆ ಹಾಗೂ ಅ. 3ರಂದು ಎಪಿಎಂಸಿ ಇದರ ವಿವಿಧ ಕಾಮಗಾರಿಗಳ ಉದ್ಘಾಟನ ಸಂದರ್ಭ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

ಪುತ್ತೂರು, ಸುಳ್ಯ, ಬೆಳ್ತಂಗಡಿ ಸಹಿತ ಕರಾವಳಿ ಜಿಲ್ಲೆಗಳಿಂದ ರೈತರು ಬೆಳೆಯುವ ಕೃಷಿ ಉತ್ಪನ್ನ ಆಧಾರಿತ ವಸ್ತುಗಳನ್ನು ಉತ್ತರ ಭಾರತದ ರಾಜ್ಯಗಳಿಗೆ ಡೋರ್‌ ಟು ಡೋರ್‌ ಡೆಲಿವರಿ ಮಾಡುವ ನಿಟ್ಟಿನಲ್ಲಿ ಸಿದ್ಧತೆ ಮಾಡಲಾಗಿದೆ. ಸಂಬಂಧಪಟ್ಟ ಟ್ರಾನ್ಸ್‌ಪೊàರ್ಟರ್‌ಗಳಿಂದ, ಎಪಿಎಂಸಿ, ಕ್ಯಾಂಪ್ಕೋದಿಂದ ಅನುಮತಿ ಸಿಕ್ಕಿದೆ ಎಂದು ಅವರು ತಿಳಿಸಿದರು.

ಎಪಿಎಂಸಿ ಅಧ್ಯಕ್ಷ ದಿನೇಶ್‌ ಮೆದು ಮಾತನಾಡಿ, ಸೆ. 23ರಂದು ಕ್ಯಾಂಪ್ಕೋ ವತಿಯಿಂದ ರೈಲಿನ ಮೂಲಕ ಅಡಿಕೆ ಸಾಗಾಟ ಮಾಡಲಾಗುವುದು. ಸೆ. 26ರ ತನಕ ಪ್ರಾಯೋಗಿಕವಾಗಿ ರೈಲಿನಲ್ಲಿ ಅಡಿಕೆ ಸಾಗಾಟ ಮಾಡಲಾಗುವುದು. ಸಾಗಾಟದ ಸಂದರ್ಭದ ಸ್ಥಿತಿಗತಿಗಳ ಬಗ್ಗೆ ಚರ್ಚಿಸಿ ಎಲ್ಲ ಸಮಸ್ಯೆಗಳನ್ನು ಸರಿಪಡಿಸಿ ಉತ್ತಮ ಸೇವೆ ನೀಡಲು ರೈಲ್ವೇ ಪ್ರಯತ್ನ ಮಾಡುವ ಭರವಸೆ ದೊರೆತಿದೆ ಎಂದರು.

ಅ.3: ಕಾಮಗಾರಿಗಳ ಉದ್ಘಾಟನೆ
ಸೆ. 26ರಂದು ಎಪಿಎಂಸಿ ಪ್ರಾಂಗಣದಲ್ಲಿ ನಿಗದಿಯಾಗಿದ್ದ ವಿವಿಧ ಕಾಮಗಾರಿಗಳ ಉದ್ಘಾಟನ ಕಾರ್ಯಕ್ರಮವನ್ನು ವಿಧಾನ ಸಭಾ ಅಧಿವೇಶನದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದು, ಅ. 3ರಂದು ಉದ್ಘಾಟನೆ ನಡೆಯಲಿದೆ. ಈ ಕುರಿತ ಕಾರ್ಯಕ್ರಮಗಳ ವಿವರಗಳನ್ನು ಅಧ್ಯಕ್ಷ ದಿನೇಶ್‌ ಮೆದು ಸಭೆಯ ಗಮನಕ್ಕೆ ತಂದರು. ಎಪಿಎಂಸಿಯಲ್ಲಿ ಆಗಸ್ಟ್‌ ತಿಂಗಳ ಬಂದಿರುವ ಆದಾಯ, ಖರ್ಚುಗಳ ಲೆಕ್ಕಪತ್ರವನ್ನು, ಹಿಂದಿನ ಸಭೆಯ ನಡಾವಳಿಯನ್ನು ಕಾರ್ಯದರ್ಶಿ ರಾಮಚಂದ್ರ ವಾಚಿಸಿದರು. ಉಪಾಧ್ಯಕ್ಷ ಮಂಜುನಾಥ್‌ ಎನ್‌.ಎಸ್‌., ಸದಸ್ಯರಾದ ಬೂಡಿಯಾರ್‌ ರಾಧಾಕೃಷ್ಣ ರೈ, ಬಾಲಕೃಷ್ಣ ಸುವರ್ಣ, ಮೇದಪ್ಪ ಗೌಡ, ಕುಶಾಲಪ್ಪ ಗೌಡ, ಕಾರ್ತಿಕ್‌ ಬೆಳ್ಳಿಪ್ಪಾಡಿ, ಎಚ್‌. ಅಬ್ದುಲ್‌ ಶುಕೂರ್‌, ತ್ರಿವೇಣಿ ಪೆರೊಡಿ, ತೀರ್ಥಾನಂದ ದುಗ್ಗಳ, ಪುಲಸ್ತಾ ರೈ, ಕೃಷ್ಣ ಕುಮಾರ್‌, ಬಾಬು ಟಿ., ರೈಲ್ವೇ ಎಂಜಿನಿಯರ್‌ಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

50-50 ಅಭಿವೃದ್ಧಿ
ಎಪಿಎಂಸಿ ರಸ್ತೆಯ ರೈಲ್ವೇ ಅಂಡರ್‌ಪಾಸ್‌ ಕುರಿತಂತೆ 2014ರಲ್ಲಿ ಮೂಲ ಸೌಕರ್ಯ ಇಲಾಖೆ ಹಾಗೂ ಎಪಿಎಂಸಿ ಚರ್ಚಿಸಿದಂತೆ 50-50 ಖರ್ಚು ಭರಿಸುವುದೆಂದು ಅಂದಿನ ಸಭೆಯಲ್ಲಿ ನಿರ್ಣಯಿಸಲಾಗಿತ್ತು.  ಈ ಕುರಿತು ಮತ್ತೂಮ್ಮೆ ಹುಬ್ಬಳ್ಳಿ ವಲಯಕ್ಕೆ ಹೊಸ ಪತ್ರ ಸಲ್ಲಿಸಬೇಕಿದೆ. ಸೆ. 24ರಂದು ರಾಜ್ಯ ಸರಕಾರದ ಪತ್ರದೊಂದಿಗೆ ತೆರಳಲಾಗುವುದು ಎಂದು ದಿನೇಶ್‌ ಮೆದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next