Advertisement

Passengers: ನವರಾತ್ರಿಯ ಸಂದರ್ಭ ಪ್ರಯಾಣಿಕರ ಸಂಖ್ಯೆ ವೃದ್ಧಿ

11:22 AM Oct 23, 2023 | Team Udayavani |

ಸುರತ್ಕಲ್‌: ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ಕ್ಷೇತ್ರಗಳಲ್ಲಿ ಒಂದಾದ ಮುರ್ಡೇಶ್ವರಕ್ಕೆ ಅರಮನೆ ನಗರಿ ಮೈಸೂರಿನಿಂದ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ಮಂಗಳೂರು ರೈಲನ್ನು ಮುರ್ಡೇಶ್ವರದವರೆಗೆ ವಿಸ್ತರಿಸಿದ್ದು ಈ ಭಾಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಂತಸ ತಂದಿದೆ.

Advertisement

ಜತೆಗೆ ಮಂಗಳೂರು ಸುರತ್ಕಲ್‌ನಿಂದ ತೆರಳುವ ಮಂದಿಗೆ ಉಡುಪಿ ಪ್ರಯಾಣಕ್ಕೆ ಹಾಗೂ ಪ್ರವಾಸಿ ಕ್ಷೇತ್ರದ ವೀಕ್ಷಣೆಗೆ ರೈಲಿನ ಸಮಯವೂ ಈಗಿನ ವೇಳಾಪಟ್ಟಿ ಸುಧಾರಣೆ ಆದಲ್ಲಿ ಉಪಯುಕ್ತ ಪ್ರವಾಸಿ ರೈಲು ಎನಿಸಿಕೊಳ್ಳಲಿದೆ.

ಇದೀಗ ನವರಾತ್ರಿಯ ಸಂದರ್ಭ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದೆ.

ಬೆಂಗಳೂರಿನಿಂದ ರಾತ್ರಿ 8.15 ಹೊರಟು ಮೈಸೂರಿಗೆ 11.20ಕ್ಕೆ ಮುಟ್ಟಿದರೆ ಇತ್ತ ಮಂಗಳೂರಿಗೆ ಮುಂಜಾನೆ 8.30ಕ್ಕೆ, ಉಡುಪಿಗೆ 10.40ಕ್ಕೆ ತಲುಪುತ್ತದೆ.

ವಿವಿಧ ಪ್ರವಾಸಿ ಕ್ಷೇತ್ರಗಳಾದ ಬಾರ್ಕೂರು, ಕೊಲ್ಲೂರು, ಭಟ್ಕಳ ಹಾಗೂ ಮುರ್ಡೇಶ್ವರ ಹೀಗೆ ವಿವಿಧ ಕ್ಷೇತ್ರವನ್ನು ಸಂದರ್ಶಿಸಲು ಈ ರೈಲು ಅನುಕೂಲ ಕಲ್ಪಿಸುತ್ತದೆ. ದಿನದ ಮಟ್ಟಿಗೆ ಪಿಕ್‌ನಿಕ್‌ಗೆ ತೆರಳುವ ತಂಡ ಇಲ್ಲವೇ ಕುಟುಂಬ ಸಮೇತರಾಗಿ ಹೋಗುವ ಮಂದಿಗೆ ಅತೀ ಕಡಿಮೆ ವೆಚ್ಚ ದಲ್ಲಿ ಪ್ರವಾಸಿ ಕ್ಷೇತ್ರ ತಲುಪಲು ಸಾಧ್ಯವಾಗುತ್ತದೆ.

Advertisement

ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾಗಿ ರುವ ಮುಡೇìಶ್ವರಕ್ಕೂ ಮೈಸೂರಿಗೂ ರೈಲು ಮೂಲಕ ಸಂಪರ್ಕವು ಆರಾಮದಾಯಕ ಹಾಗೂ ಅವಸರವಿಲ್ಲದ ಪ್ರಯಾಣವನ್ನು ಬಯಸುವವರಿಗೆ ಈ ರೈಲು ಅನುಕೂಲ. ಆದರೆ ಮುಡೇìಶ್ವರದಿಂದ ಮಧ್ಯಾಹ್ನ ಹೊರಟರೆ, ಮೈಸೂರಿಗೆ ನಸುಕಿನ ವೇಳೆಗಿಂತ ಮೊದಲೇ ತಲುಪುವ ಕಾರಣ ಸಮಯದ ಹೊಂದಾಣಿ ಕೆಯಲ್ಲಿ ಬದಲಾವಣೆ ಮಾಡ ಬಹುದು ಎಂಬ ಅಭಿ ಪ್ರಾಯವೂ ಕೇಳಿ ಬಂದಿದೆ.

ರೈಲಿನ ವೇಳಾಪಟ್ಟಿ ಹೀಗಿದೆ

ಮೈಸೂರು ಮೂಲಕ ಬೆಂಗಳೂರು ಮಂಗಳೂರು ನಡುವೆ ಸಂಚರಿಸುವ ಎಕ್ಸ್‌ ಪ್ರಸ್‌ ರೈಲು 16586/585 ಪ್ರತಿದಿನ ಮುಡೇìಶ್ವರವರೆಗೆ ಸಂಚರಿಸುವ ಹಿನ್ನೆಲೆಯಲ್ಲಿ ವೇಳಾಪಟ್ಟಿಯನ್ನು ಈ ರೀತಿ ಮಾಡಲಾಗಿದೆ. ನಂ.16585 ರೈಲು ಬೆಂಗಳೂರಿನ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ (ಎಸ್‌. ಎಂ.ವಿ.ಟಿ.ಬಿ.)ನಿಂದ ರಾತ್ರಿ 8.15ಕ್ಕೆ ಹೊರಡುತ್ತದೆ. ರಾತ್ರಿ 11.30ಕ್ಕೆ ಮೈಸೂರು ತಲುಪುತ್ತದೆ. ಬೆಳಗ್ಗೆ 8.30ಕ್ಕೆ ಮಂಗಳೂರು ಸೆಂಟ್ರಲ್‌ ನಿಲ್ದಾಣಕ್ಕೆ ತಲುಪುತ್ತದೆ. 9.40ಕ್ಕೆ ಸೆಂಟ್ರಲ್‌ ನಿಂದ ಹೊರಡುತ್ತದೆ. ಮಧ್ಯಾಹ್ನ 12.55ಕ್ಕೆ ಕ್ಕೆ ಮುರ್ಡೇಶ್ವರ ತಲುಪುತ್ತದೆ.

ನಂ.16586 ರೈಲು ಮುಡೇìಶ್ವರ ದಿಂದ ಮಧ್ಯಾಹ್ನ 2.10ಕ್ಕೆ ಹೊರಡುತ್ತದೆ. ಮಂಗಳೂರು ಸೆಂಟ್ರಲ್‌ ನಿಲ್ದಾಣಕ್ಕೆ ಸಂಜೆ 6.25ಕ್ಕೆ ಆಗಮಿಸುತ್ತದೆ. ಮೈಸೂರಿಗೆ ಮುಂಜಾನೆ 3.25ಕ್ಕೆ ತಲುಪಿದರೆ ಬೆಂಗಳೂರಿಗೆ ಬೆಳಗ್ಗೆ 7.15ಕ್ಕೆ ತಲುಪುತ್ತದೆ.

ಬೆಂಗಳೂರು ಮೈಸೂರು ಮುರ್ಡೇಶ್ವರ ನಡುವೆ ರೈಲು ಸಂಪರ್ಕ ಆಗಿರುವುದು ಕರಾವಳಿ ಕ್ಷೇತ್ರ ದರ್ಶನಕ್ಕೆ ಉಪಯುಕ್ತವಾಗಿದೆ. ಮುಂದಿನ ದಿನದಲ್ಲಿ ಈ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚಳ ಆಗುವುದರಲ್ಲಿ ಸಂಶಯವಿಲ್ಲ. – ಸುಧಾ ಕೃಷ್ಣಮೂರ್ತಿ, ಪಿಆರ್‌ಒ

Advertisement

Udayavani is now on Telegram. Click here to join our channel and stay updated with the latest news.

Next