Advertisement

ಎನ್‌ಪಿಎಸ್‌ ಯೋಜನೆಯಲ್ಲಿನ ಕರಗೊಂದಲಗಳು 

10:22 AM Mar 27, 2017 | Team Udayavani |

ನ್ಯಾಶನಲ್‌ ಪೆನ್ಶನ್‌ ಸ್ಕೀಂ ಬಗ್ಗೆ ಸಾಕಷ್ಟು ಜನ ಜಾಗೃತಿ ಈಗಾಗಲೇ ಏರ್ಪಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಅದರ ಮೇಲೆ ನೀಡಿರುವ ಕರ ವಿನಾಯಿತಿ. ಈ ಯೋಜನೆಯ ಮೇಲೆ ಸಿಗುವ ಹಾಗೂ ಬೇರಾವ ಯೋಜನೆಗೂ ಸಿಗದ ಕರ ವಿನಾಯಿತಿ ಇದರ ಹೆಗ್ಗಳಿಕೆ.

Advertisement

ನ್ಯೂ ಪೆನ್ಶನ್‌ ಸ್ಕೀಂ ಅಥವಾ ನ್ಯಾಶನಲ್‌ ಪೆನ್ಶನ್‌ ಸ್ಕೀಮಿನಲ್ಲಿ ವಾರ್ಷಿಕ ರೂ.1.5 ಲಕ್ಷದವರೆಗೆ 80ಸಿ ಕರಲಾಭ ಸಿಗುತ್ತದೆ (ಈ ಸೆಕ್ಷನ್‌ ಅಡಿಯಲ್ಲಿ ಎನ್‌ಪಿಎಸ್‌ ಅಲ್ಲದೆ ಪಿಪಿಎಫ್, ಎನ್‌ಎಸ್‌ಸಿ, ಇಎಲ್‌ಎಸ್‌ಎಸ್‌, 5 ವಾರ್ಷಿಕ ಎಫ್ಡಿ, ಟ್ಯೂಷನ್‌ ಫೀಸ್‌ ಇತ್ಯಾದಿ ಹಲವಾರು ಯೋಜನೆಗಳೂ ಸೇರಿವೆ). ಅದಲ್ಲದೆ 2015ರಿಂದ ಆರಂಭಗೊಂಡಂತೆ ಇದೇ ಸ್ಕೀಮಿಗೆ ಹೊಸ ಸೆಕ್ಷನ್‌ 80ಸಿಸಿಡಿ (1ಬಿ) ಅನುಸಾರ ಇನ್ನೊಂದು ರೂ. 50,000 ಮೊತ್ತದ ಪ್ರತ್ಯೇಕ ಕರವಿನಾಯಿತಿ ಲಭಿಸುತ್ತದೆ. ಈ 50,000 ಕರವಿನಾಯಿತಿ ಇದೊಂದೇ ಸ್ಕೀಮಿಗೆ ಸಿಗುತ್ತದಲ್ಲದೆ ಬೇರಾವ ಸ್ಕೀಮಿನಲ್ಲೂ ಲಭ್ಯವಿಲ್ಲ. ಈ ಕಾರಣಕ್ಕೆ ಎನ್‌ಪಿಎಸ್‌ ಸ್ಕೀಮಿನ ಘನತೆ ಮತ್ತು ಉಪಯುಕ್ತತೆ ಇನ್ನಷ್ಟು ಹೆಚ್ಚಿದೆ. ಇವೆರಡೂ ಅಲ್ಲದೆ ಉದ್ಯೋಗದಾತರು ತಮ್ಮ ದೇಣಿಗೆಯನ್ನು ನಿಮ್ಮ ಖಾತೆಗೆ ನೀಡಿದರೆ ಆ ಮೊತ್ತವೂ ಕೂಡ ಇನ್ನೊಂದು ಪ್ರತ್ಯೇಕ ಸೆಕ್ಷನ್‌ 80 ಸಿಸಿಡಿ (2) ಪ್ರಕಾರ ಕರ ವಿನಾಯಿತಿಗೆ ಒಳಪಡುತ್ತದೆ. ಹಾಗಾಗಿ ಮೂರು ಪ್ರತ್ಯೇಕ ಸೆಕ್ಷನ್‌ಗಳ ಅಡಿಯಲ್ಲಿ ಕರಲಾಭ ಇರುವ ಈ ಯೋಜನೆ ಇತ್ತೀಚೆಗೆ ಬಹಳ ಜನಪ್ರಿಯವಾಗುತ್ತಿದೆ. ಓದುಗರು ಈ ಮೂರೂ ಸೆಕ್ಷನ್‌ಗಳನ್ನು ಪ್ರತ್ಯೇಕವಾಗಿ ಮತ್ತು ಸ್ಪಷ್ಟವಾಗಿ ಅರ್ಥೈಸಿಕೊಂಡು ವ್ಯವಹರಿಸಬೇಕು. ಇವುಗಳ ಬಗ್ಗೆ ಸಾಕಷ್ಟು ಗೊಂದಲಗಳು ಸುಳಿದಾಡುತ್ತಿವೆ. ಉದ್ಯೋಗದಾತರು ನೀಡುವ 80ಸಿಸಿಡಿ (2)ದೇಣಿಗೆಯನ್ನೇ ತಮ್ಮ 80ಸಿಸಿಡಿ (1ಬಿ) ಎಂದು ನಂಬಿ ತಣ್ಣನೆ ಕೂತು ವರ್ಷಾಂತ್ಯದಲ್ಲಿ ಕರಲಾಭ ವಂಚಿತರಾದವರು ಹಲವರಿ¨ªಾರೆ.  

ಸದ್ಯದ ಪರಿಸ್ಥಿತಿಯಲ್ಲಿ ಎನ್‌ಪಿಎಸ್‌ಗೆ ಹೂಡಿಕೆಯ ಆಧಾರದಲ್ಲಿ ಮೇಲೆ ತಿಳಿಸಿದಂತೆ ಕರವಿನಾಯಿತಿ ಇದೆ. ವಾರ್ಷಿಕ ಪ್ರತಿಫ‌ಲದ ಮೇಲೂ ಪ್ರತಿವರ್ಷವೆಂಬಂತೆ ಕರಕಟ್ಟಬೇಕಾಗಿಲ್ಲ. ಆದರೆ 60ರ ವಯಸ್ಸಿನಲ್ಲಿ ಖಾತೆಯಲ್ಲಿ ಶೇಖರವಾದ ಒಟ್ಟು ಮೊತ್ತದ 60% ಹಿಂಪಡೆಯಬಹುದು. ಆದರೆ ಒಟ್ಟು ಮೊತ್ತದ 40% ಮಾತ್ರ ಕರಮುಕ್ತ ಆದಾಯವಾಗಿದೆ. ಹಾಗಾಗಿ 40% ಮಾತ್ರ ಹಿಂಪಡೆದು, ಉಳಿದ 60% ಅನ್ನು ಆನ್ಯೂಟಿ ಆಗಿ ಪರಿವರ್ತಿಸಬಹುದು. ಹಿಂಪಡೆಯದೆ ಆನ್ಯೂಟಿಯಾಗಿ ಪರಿವರ್ತಿಸಿಕೊಂಡ ಮೊತ್ತದ ಮೇಲೆ ನಿಯಮಿತವಾಗಿ ಬರುವ ಆನ್ಯೂಟಿ ಪೆನ್ಶನ್‌ ಮೇಲೂ ಆದಾಯ ಕರ ಇರುತ್ತದೆ.  ಇಲ್ಲಿ ಹಿಂಪಡೆಯುವ ಮೊತ್ತ ಗರಿಷ್ಠ 60%, ಅಂದರೆ ಅದರಿಂದ ಕೆಳಗಿನ ಯಾವ ಮೊತ್ತವನ್ನಾದರೂ ಹಿಂಪಡೆಯಬಹುದು. ಅಂದರೆ ನೂರಕ್ಕೆ ನೂರು ಶತಮಾನ ಆನ್ಯೂಟಿ ಕೂಡ ಪಡೆಯಬಹುದು. ಅಲ್ಲದೆ ಈ ಹಿಂಪಡೆತಕ್ಕೆ ಸಮಯಾವಕಾಶವೂ ಇದೆ. ಆನ್ಯೂಟಿ ಆರಂಭ 60 ವರ್ಷದ ಬಳಿಕ 3 ವರ್ಷಗಳೊಳಗೆ ಯಾವಾಗ ಬೇಕಾದರೂ ಆರಂಭಿಸಬಹುದು ಹಾಗೂ ಹಿಂಪಡೆಧಿಯುವ ಮೊತ್ತ 60 ಕಳೆದು 10 ವರ್ಷಗಳ ಒಳಗೆ ಯಾವಾಗ ಬೇಕಾದರೂ ಆರಂಭಿಸಬಹುದು. ಈ ಅವಕಾಶವನ್ನು ಕರ ಉಳಿತಾಯದ ದೃಷ್ಟಿಯಿಂದ ಬಳಸಿಕೊಳ್ಳಬಹುದು. 

60ರ ಮುನ್ನ: 60 ವರ್ಷ ಆಗುವ ಮುನ್ನ ಕೆಲಸ ಕಳೆದುಕೊಂಡೋ ಅಥವಾ ಇನ್ನಾವುದಾದರೂ ಕಾರಣಕ್ಕೆ ಎನ್‌ಪಿಎಸ್‌ ಕಂತುಗಳನ್ನು ಮುಂದುವರಿಸಲಾರದೆ ಖಾತೆಯನ್ನು ಕೈಬಿಡಬೇಕಾದವರು ಏನು ಮಾಡಬೇಕು? ಅಂಥವರು ಕನಿಷ್ಠ 80% ಮೊತ್ತವನ್ನು ಆನ್ಯೂಟಿಗೆ ಪರಿವರ್ತಿಸಿಕೊಂಡು ಉಳಿದ ಗರಿಷ್ಟ 20%ವನ್ನು ಹಿಂಪಡೆಯಬಹುದು. ಈಗ ಈ 20% ಮೊತ್ತ ಕರಮುಕ್ತವಾಗಿದೆ.

ಭಾಗಶಃ ಹಿಂಪಡೆತ: ಎನ್‌ಪಿಎಸ್‌ನಲ್ಲಿ ತೊಡಗಿಸಿದ ಮೊತ್ತವನ್ನು 60 ತುಂಬುವ ಮೊದಲೂ ಕೂಡ ಭಾಗಶಃ ಹಿಂಪಡೆಯುವ ಸೌಲಭ್ಯವನ್ನು ಒದಗಿಧಿಸಲಾಗಿದೆ. ಆದರೆ ಖಾತೆಗೆ ಕನಿಷ್ಠ 10 ವರ್ಷ ತುಂಬಿರಬೇಕು. ಹಿಂಪಧಿಡೆತದ ಪ್ರಮಾಣವು ಸ್ವಂತ ದೇಣಿಗೆಯ ಮೊತ್ತದ 25%ಕ್ಕೆ ಸೀಮಿತವಾಗಿದೆ ಹಾಗೂ 2017ರ ಬಜೆಟ್ಟಿನಲ್ಲಿ ಈ ಮೊತ್ತಕ್ಕೆ ಕರ ವಿನಾಯಿತಿ ನೀಡಲಾಗಿದೆ. ಭಾಗಶಃ ಹಿಂಪಡೆತದ ಸೌಲಭ್ಯವನ್ನು ಈ ಕಾರಣಗಳಿಗೆ ಮಾತ್ರ ನೀಡಲಾಗಿದೆ: 1) ಮಕ್ಕಳ ವಿದ್ಯಾಭ್ಯಾಸಕ್ಕೆ 2) ಮಕ್ಕಳ ಮದುವೆಗಾಗಿ 3) ಮೊದಲನೆಯ ಮನೆಯ ನಿರ್ಮಾಣ/ ಫ್ಲಾಟ್‌ ಖರೀದಿಗೆ 4) ಕೆಲ ನಿಗದಿತ ರೋಗಗಳ ಚಿಕಿತ್ಸೆಗಾಗಿ ಸ್ವಂತ, ಗಂಡ/ಹೆಂಡತಿ/ಮಕ್ಕಳು/ಅವಲಂಬಿತ ಹೆತ್ತವರು. ಈ ರೀತಿಯ ಭಾಗಶಃ ಹಿಂಪಡೆತಗಳನ್ನು ಗರಿಷ್ಠ ಮೂರು ಬಾರಿ ಮಾತ್ರ ಮಾಡಲು ಸಾಧ್ಯ ಹಾಗೂ ಒಂದು ಹಿಂಪಡೆತ ಮತ್ತು ಇನ್ನೊಂದರ ನಡುವೆ ಕನಿಷ್ಠ 5 ವರ್ಷಗಳ ಅವಧಿ ಇರಬೇಕು. (ಅನಾರೋಗ್ಯದ ಸಂದರ್ಭಕ್ಕೆ ಈ ಕಾನೂನು ಅನ್ವಯಿಸುವುದಿಲ್ಲ)
ಮೃತ್ಯು:  60ರ ಮೊದಲು ಖಾತೆದಾರರ ಮೃತ್ಯು ಸಂಭವಿಸಿದಲ್ಲಿ ಒಟ್ಟು ಮೊತ್ತವನ್ನು ನಾಮಿನಿಗೆ ನೀಡಲಾಗುವುದು. ನಾಮಿನಿಯು ಏಕಗಂಟಿನಲ್ಲಿ ದುಡ್ಡನ್ನು ಪಡೆದುಕೊಳ್ಳಬಹುದು ಅಥವಾ ಸಂಪೂರ್ಣವಾಗಿ ಆನ್ಯೂಟಿಯಾಗಿಯೂ ಪಡಕೊಳ್ಳಬಹುದು. ಸರಕಾರಿ ಎನ್‌ ಪಿಎಸ್‌ ಸ್ಕೀಮಿನಲ್ಲಿ 80% ಆನ್ಯೂಟಿ ಕಡ್ಡಾಯ. ಹಿಂಪಡೆ‌ದ ಮೊತ್ತ ಸಂಪೂರ್ಣ ಕರಮುಕ್ತವಾಗಿದೆ. 

Advertisement

ಖಾತೆ ತೆರೆಯುವುದು ಹೇಗೆ?: ಎನ್‌ಪಿಎಸ್‌ ಅನ್ನು ಪಿಓಪಿ ಕೇಂದ್ರಗಳಲ್ಲಿ ತೆರೆಯಬಹುದು. ಪಿಓಪಿ ಎಂದು ಕರೆಯಧಿಲ್ಪಡುವ ಈ ಸೇವಾ ಕೇಂದ್ರಗಳು ದೇಶದ ಬಹುತೇಕ ಎಲ್ಲ ಸರಕಾರಿ/ಖಾಸಗಿ ಬ್ಯಾಂಕುಗಳಲ್ಲಿ, ಪೋಸ್ಟಾಫೀಸಿನಲ್ಲಿ, ಕಾರ್ವಿ/ಕ್ಯಾಮ್ಸ್‌ನಂತಹ ಸೇವಾ ಕೇಂದ್ರಗಳಲ್ಲಿ ಇವೆ. ಈ ಸಂಸ್ಥೆಗಳು ತಮ್ಮ ಎಲ್ಲ ಬ್ರಾಂಚುಗಳಲ್ಲೂ ಸೇವಾ ಕೇಂದ್ರಗಳನ್ನು ತೆರೆದಿರದಿದ್ದರೂ ಮುಖ್ಯ ಪಟ್ಟಣಗಳ ಮುಖ್ಯ ಬ್ರಾಂಚುಗಳಲ್ಲಿ ಎನ್‌ಪಿಎಸ್‌ ಖಾತೆಯನ್ನು ತೆರೆಯುವ ಸೌಲಭ್ಯವನ್ನು ನೀಡುತ್ತವೆ. ಈ ಬಗ್ಗೆ ವಿಚಾರಿಸಿ ಖಾತೆಗೆ ಅರ್ಜಿ ಗುಜರಾಯಿಸಬಹುದು. 

ದಾಖಲೆಗಳು: ಎನ್‌ಪಿಎಸ್‌ ಖಾತೆಗೆ ಅಗತ್ಯವಾದ ಎಲ್ಲ ಫಾರ್ಮುಗಳು ಬ್ಯಾಂಕುಗಳ ವೆಬ್‌ಸೈಟ್‌ ಅಥವಾ ಎನ್‌ಪಿಎಸ್‌ಸಿಆರ್‌ಎ ವೆಬ್‌ಸೈಟಿನಲ್ಲಿ ಪಡೆಯಬಹುದು. ಖಾತೆ ತೆರೆಯಲು ಸಿಎಸ್‌ಆರ್‌-1 ಫಾರ್ಮ್ ಅನ್ನೂ ಹೂಡಿಕೆಗೆ ಎನ್‌ಸಿಐಎಸ್‌ ಫಾರ್ಮ್ ಬಳಸಬೇಕು. ಖಾತೆ ತೆರೆಯಲು ಈ ದಾಖಲೆಗಳು ಬೇಕು: ಸೂಕ್ತವಾಗಿ ತುಂಬಿದ ಅರ್ಜಿ (ಫೋಟೋ ಸಹಿತ), ವಿಳಾಸ ಪುರಾವೆ,  ಪ್ಯಾನ್‌ ಕಾರ್ಡ್‌ ಪ್ರತಿ,  ಬ್ಯಾಂಕ್‌ ಪುರಾವೆ

ಯಾರು ಅರ್ಹರು?: 18-60 ವರ್ಷ ವಯಸ್ಸಿನ ಎಲ್ಲ ಭಾರತೀಯರೂ ಈ ಖಾತೆಧಿಯನ್ನು ತೆರೆಯಬಹುದು. 
ಪ್ರಾಣ್‌: ಒಂದು ಎನ್‌ಪಿಎಸ್‌ ಖಾತೆ ಒಂದು ವಿಶಿಷ್ಟವಾದ ಪರ್ಮನೆಂಟ್‌ ರಿಟೈರ್ಮೆಂಟ್‌ ಅಕೌಂಟ್‌ ನಂಬರ್‌ ಅಥವಾ ಪಿಆರ್‌ಎಎನ್‌ ಸಂಖ್ಯೆಯಿಂದ ಗುರುತಿಸಲ್ಪಡುತ್ತದೆ. ನಿಮ್ಮ ಖಾತೆ ತೆರೆದೊಡನೆ ನಿಮಗೆ ಒಂದು ಪ್ರಾಣ್‌ ಕಿಟ್‌ ಬರುತ್ತದೆ. ಅದರಲ್ಲಿ ನಿಮ್ಮ ಪ್ರಾಣ್‌ ಕಾರ್ಡ್‌ ಹಾಗೂ ಎಲ್ಲ ಮಾಹಿತಿಗಳ ಕರಪತ್ರಗಳು ಇರುತ್ತವೆ. ಇದು ನಿಮ್ಮ ಖಾತೆಯ ಯುನಿಕ್‌ ನಂಬರ್‌. ಆಜೀವ ಪರ್ಯಂತ ಈ ಒಂದು ನಂಬರನ್ನೇ ಹೊತ್ತು ತಿರುಗಾಡಬೇಕು. ಒಬ್ಟಾತ ಇನ್ನೊಂದು ಖಾತೆಯನ್ನು ತನ್ನ ಹೆಸರಿನಲ್ಲಿ ತೆರೆಯುವಂತಿಲ್ಲ. ಆದರೆ ಈ ಪ್ರಾಣ್‌ ನಂಬರ್‌ ಮೂಲಕ ದೇಶದೆಲ್ಲೆಡೆ ಯಾವ ಪಿಓಪಿಯ ಮೂಲಕವಾದರೂ ಪೆನ್ಶನ್‌ ಖಾತೆಯನ್ನು ಬಳಸಬಹುದು, ವರ್ಗಾಯಿಸಬಹುದು. 

ವಾರ್ಷಿಕ ದೇಣಿಗೆ: ಎನ್‌ಪಿಎಸ್‌ನಲ್ಲಿ ಎರಡು ಉಪಖಾತೆಗಳಿರುತ್ತವೆ. ಕಡ್ಡಾಯಧಿವಾದ ಟೈರ್‌-1 ಖಾತೆಯಲ್ಲಿ ವಾರ್ಷಿಕ ಕನಿಷ್ಠ ರೂ.6000 ಅನ್ನು ಒಂದು ಅಥವಾ ಹಲವು ಕಂತುಗಳಲ್ಲಿ ಕಟ್ಟುತ್ತಾ ಮುಂದುಧಿವರಿಯಬಹುದು. ಒಂದು ಕಂತಿಗೆ ಕನಿಷ್ಠ ಮಿತಿ ರೂ.500. ವಾರ್ಷಿಕ ದೇಣಿಗೆಗೆ ಗರಿಷ್ಟ ಮಿತಿ ಇಲ್ಲ. ಆದರೆ ಕರವಿನಾಯಿತಿಗೆ ಮಾತ್ರ ವಿನಾಯಿತಿ ಇರುತ್ತದೆ. ಐಚ್ಛಿಕವಾದ ಒಂದು ಎಸ್‌ಬಿ ಖಾತೆಯನ್ನು ಹೋಲುವ ಟೈರ್‌-2 ಖಾತೆಯಲ್ಲಿ ವಾರ್ಷಿಕ ಕನಿಷ್ಠ ಒಂದು ದೇಣಿಗೆ ಮತ್ತು ವರ್ಷಾಂತ್ಯದಲ್ಲಿ ಕನಿಷ್ಠ ಉಳಿಕೆ ರೂ.2,000 ಹೊಂದಿರಬೇಕು. ಕನಿಷ್ಠ ವಾರ್ಷಿಕ ದೇಣಿಗೆ ನೀಡದ ಖಾತೆಗಳನ್ನು ಫ್ರೀಜ್‌ ಮಾಡಲಾಗುತ್ತದೆ. ಆಮೇಲೆ ಬಾಕಿ ಪಾವತಿ ಮತ್ತು ಪೆನಾಲ್ಟಿ ತೆತ್ತು ಅಂತಹ ಖಾತೆಗಳನ್ನು ಪುನಃ ಓಪನ್‌ ಮಾಡಬೇಕಾಗುತ್ತದೆ. 

ಸ್ಕೀಮುಗಳು: ನಿಮ್ಮ ಹೂಡಿಕೆಯ ಗರಿಷ್ಠ 50% ಇಂಡೆಕ್ಸ್‌ ಶೇರುಗಳಲ್ಲೂ (ಉ), ಉಳಿದದ್ದನ್ನು ಸ್ಥಿರ ಆದಾಯದ ಕಾರ್ಪೊàರೇಟ್‌ ಸಾಲಪತ್ರ (ಇ) ಹಾಗೂ ಸರಕಾರಿ ಸಾಲಪತ್ರಗಳಲ್ಲಿ(ಎ) ನೀವು ನಿರ್ದೇಶಿಸಿದ ಪ್ರಮಾಣದಲ್ಲಿ ಹೂಡುತ್ತಾರೆ. ಖಾತೆ ತೆರೆಯುವ ವ್ಯಕ್ತಿ ತನ್ನ ರಿಸ್ಕ್ ಧಾರಣೆಯನ್ನು ಆಧರಿಸಿ ಬೇಕೆನಿಸಿದ ಅನುಪಾತವನ್ನು ಆಯ್ದುಕೊಳ್ಳಬೇಕು. ಇವೆಲ್ಲವನ್ನೂ ಬಳಿಕ ಬೇಕಾದಂತೆ ಬದಲಾಯಿಸಲೂಬಹುದು. ಉ ಆಯ್ಕೆಯಲ್ಲಿ ಇಂಡೆಕ್ಸ್‌ ಶೇರುಗಳಲ್ಲಿ ಅದೇ ಅನುಪಾತದಲ್ಲಿ ಹೂಡಿಕೆ ಮಾಡಲಾಗುತ್ತದೆ ಎನ್ನುವುದನ್ನು ಗಮನಿಸಬೇಕು. ಮ್ಯೂಚುವಲ್‌ ಫ‌ಂಡುಗಳಂತೆ ತಮಗೆ ಬೇಕಾದ ಶೇರುಗಳಲ್ಲಿ ತೊಡಗಿಸುವ ಸ್ವಾತಂತ್ರ್ಯ ಎನ್‌ಪಿಎಸ್‌ ನಿರ್ವಾಹಕರಿಗೆ ಇರುವುದಿಲ್ಲ. 
ನಿಮ್ಮ ಆಯ್ಕೆಯ ಬದಲಾಗಿ ಸ್ವಯಂಚಾಲಿತ ಆಯ್ಕೆಯನ್ನು ನಮೂದಿಸಿದರೆ ನಿಮ್ಮ ವಯೋಮಾನವನ್ನು ಅನುಸರಿಸಿ ಅವರೇ ಒಂದು ಪೂರ್ವ ನಿಗದಿತ ಕೋಷ್ಟಕದ ಪ್ರಕಾರ ಹೂಡಿಕೆ ಮಾಡುತ್ತಾರೆ. ವಯಸ್ಸು ಏರಿದಂತೆ ಇಕ್ವಿಟಿ ಕಡಿಮೆಯಾಗಿ ಡೆಟ್‌ ಜಾಸ್ತಿಯಾಗುವ ಸೂತ್ರವನ್ನು ಇದರಲ್ಲಿ ಪಾಲಿಸುತ್ತಾರೆ.

ಫ‌ಂಡ್‌ ನಿರ್ವಹಣೆ: ಆದರೆ ಇದರಲ್ಲಿ ಶೇಖರಗೊಂಡ ದುಡ್ಡಿನ ಹೂಡಿಕೆಯ ಜವಾಬ್ದಾರಿ ಮಾತ್ರ UTI, ICICI, LIC, HDFC, SBI, Kotak Mahindra, Reliance ಕಂಪೆನಿಗಳ ಪೆನ್ಶನ್‌ ಫ‌ಂಡ್‌ ಹೌಸ್‌ಗಳ ಕೈಗೆ ನೀಡಲಾಗಿದೆ. ಅರ್ಜಿಯ ಸಮಯದಲ್ಲಿ ನಿಮ್ಮ ಫ‌ಂಡು ನಿರ್ವಾಹಕರನ್ನು ಆಯ್ದುಕೊಳ್ಳುವ ಹಕ್ಕು ನಿಮಗಿದೆ. ಅದನ್ನು ಆಮೇಲೆ ಬದಲಿಸಲೂಬಹುದು; ಆದರೆ ವರ್ಷಕ್ಕೆ ಒಂದೇ ಬಾರಿ.

– ಜಯದೇವ ಪ್ರಸಾದ ಮೊಳೆಯಾರ

Advertisement

Udayavani is now on Telegram. Click here to join our channel and stay updated with the latest news.

Next