Advertisement

ಕೋಟಕ್ ಮಹೀಂದ್ರಾ ಬ್ಯಾಂಕ್ ಪರಿಚಯಿಸಿದೆ ಸ್ಮಾರ್ಟ್ ಇಎಂಐ.!? ಮಾಹಿತಿ ಇಲ್ಲಿದೆ

12:26 PM Aug 12, 2021 | |

ನವ ದೆಹಲಿ : ಕೋಟಕ್ ಮಹೀಂದ್ರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಹಣಕಾಸಿನ ಸೌಲಭ್ಯವನ್ನು ನೀಡುತ್ತಿದೆ. ಸದಾ ಗ್ರಾಹಕ ಸ್ನೇಹಿ ಯೋಜನೆಗಳನ್ನೇ ನೀಡುತ್ತಾ ಬಂದಿರುವ ಕೋಟಕ್ ಬ್ಯಾಂಕ್  ಸುಮಾರು 15 ಲಕ್ಷದವರೆಗೆ ಹಣಕಾಸಿನ ಸೌಲಭ್ಯವನ್ನು ನೀಡುತ್ತಿದೆ.

Advertisement

ಹೌದು, ಬ್ಯಾಂಕ್ ನ ಟೆಲಿವಿಷನ್‌ನಿಂದ ಪೀಠೋಪಕರಣಗಳವರೆಗೆ ಯಾವುದೇ ಉತ್ಪನ್ನವನ್ನು ಗ್ರಾಹಕ ಸ್ನೇಹಿ ಇಎಂಐ ಕಂತುಗಳಲ್ಲಿ ಖರೀದಿಸುವುದಕ್ಕೆ ಬ್ಯಾಂಕ್ ಸುಮಾರು 15 ಲಕ್ಷಗಳನ್ನು ನೀಡುತ್ತಿದೆ.

ಇದನ್ನೂ ಓದಿ :  ಅಧಿಕಾರ ಪಡೆದವರು, ಸಿಗದವರು ಯಾರು ಕೂಡ ಸಂತೋಷದಿಂದಿಲ್ಲ : ಎಸ್.ಆರ್ ಪಾಟೀಲ

ಈ ಬಗ್ಗೆ ಮಾಹಿತಿ ನೀಡಿದ ಕೋಟಕ್ ಬ್ಯಾಂಕ್, ಸ್ಮಾರ್ಟ್ ಇಎಂಐ ಯೋಜನೆಯಡಿಯಲ್ಲಿ, ಇಎಂಐನಲ್ಲಿ ಶಾಪಿಂಗ್ ಮಾಡುವ ಅನುಕೂಲವನ್ನು ಕೂಡ ಕಲ್ಪಿಸಲಾಗಿದೆ. ಇದಕ್ಕಾಗಿ, ನೀವು ನಿಮ್ಮ ಹತ್ತಿರದ ಬ್ಯಾಂಕಿನ ಖಾತೆಗೆ ಭೇಟಿ ನೀಡಬೇಕು. ದಾಖಲೆಗಳನ್ನು ಪರಿಶೀಲಿಸಿದ ನಂತರ ನಿಮಗೆ ಬ್ಯಾಂಕ್ ಈ ಸಾಲದ ಕಂತನ್ನು ನೀಡಲಾಗುವುದು ಎಂದು ಹೇಳಿದೆ.

ಇನ್ನು,  ಸ್ಮಾರ್ಟ್ ಇಎಂಐ ಸೌಲಭ್ಯದ ಲಾಭವನ್ನು ಪಡೆಯುವುದಕ್ಕೆ  ಸಣ್ಣ ಕಾಗದಪತ್ರಗಳನ್ನಷ್ಟೇ ಪೂರೈಸಬೇಕಾಗುತ್ತದೆ. ಪ್ಯಾನ್ ಕಾರ್ಡ್ ಮತ್ತು ಕೆವೈಸಿ ದಾಖಲೆ ಮಾತ್ರ ಬಹಳ ಮುಖ್ಯ ಎಂದು ತಿಳಿಸಿದೆ.

Advertisement

ನಿಮೆಗೆ ಬೇಕಾದ ಉತ್ಪನ್ನಗಳ ಮೇಲೆ ನಿಲ್ ಡೌನ್ ಪೇಮೆಂಟ್ ಮಾಡಬಹುದಾಗಿದ್ದು, ಗ್ರಾಹಕರ ಅನುಕೂಲಕ್ಕೆ ತಕ್ಕಂತೆ 6 ತಿಂಗಳಿಂದ 24 ತಿಂಗಳುಗಳ ತನಕ ಇಎಂ ಐ ಕಂತುಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದೆ.

ಕೋಟಕ್ ಮಹೀಂದ್ರಾ ಬ್ಯಾಂಕ್ ಸೂಚಿಸಿರುವ 40 ಸಾವಿರಕ್ಕೂ ಹೆಚ್ಚು ಮಳಿಗೆಗಳಲ್ಲಿ ಈ ಕಾರ್ಡ್ ನನ್ನು ಸುಲಭವಾಗಿ ಬಳಸಬಹುದು. ಈ ಕಾರ್ಡ್ ಬಳಸಿ ಮಾಡಿದ ಶಾಪಿಂಗ್ ನನ್ನು ಸುಲಭವಾಗಿ ಇಎಂಐ ಆಗಿ ಪರಿವರ್ತಿಸಲಾಗುತ್ತದೆ ಎಂದು ಕೂಡ ಬ್ಯಾಂಕ್ ಹೇಳಿದೆ.

ಇದನ್ನೂ ಓದಿ : ಬೆಳ್ಳಂಬೆಳಗ್ಗೆ ಟ್ರಕ್ ಹಾಗೂ ಕಾರು ನಡುವೆ ಭೀಕರ ಅಪಘಾತ ; ಒಂದೇ ಕುಟುಂಬದ ಐವರ ಸಾವು

Advertisement

Udayavani is now on Telegram. Click here to join our channel and stay updated with the latest news.

Next