Advertisement

ಬಿಜೆಪಿಗೆ ಇದೀಗ ಹಿಂದುತ್ವ ಬೇಡವಾಗಿದೆ: ಮುತಾಲಿಕ್‌ ಕಿಡಿ

11:45 AM Jan 17, 2018 | Team Udayavani |

ವಿಜಯಪುರ: ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರಿಗೆ ಹಿಂದುತ್ವ, ಹಿಂದೂ ನಾಯಕರು ಬೇಡವಾಗಿದ್ದಾರೆ. ಹಿಂದೂ ವಿರೋಧಿ ಸಂಘ ಪರವಾರ ಹಾಗೂ ಬಿಜೆಪಿ ಸರ್ಕಾರಗಳಿಗೆ ಇದೀಗ ಹಿಂದುತ್ವ ಬೇಡವಾಗಿದೆ.ಇವರ ಷಡ್ಯಂತ್ರದ ಕಾರಣದಿಂದ ಪ್ರಖರ ಹಿಂದೂ ನಾಯಕ ಪ್ರವೀಣಭಾಯಿ ತೊಗಾಡಿಯಾ ಕಣ್ಣೀರು ಹಾಕುವ ದುಸ್ಥಿತಿ ಬಂದಿದೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಕಿಡಿ ಕಾರಿದರು.

Advertisement

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘ ಪರಿವಾರದ ಷಡ್ಯಂತ್ರದಿಂದಾಗಿ ನಾನು ಸಾಕಷ್ಟು ನೋವು ಅನುಭವಿಸಿದ್ದೇನೆ. ಇದೀಗ ಪ್ರವೀಣಭಾಯಿ ಅವರ ಸರದಿ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೆ ಕಾರಣನಾದ ನನ್ನನ್ನು ಬಿಜೆಪಿ ಸರ್ಕಾರ ಅತ್ಯಂತ ಹೀನಾಯವಾಗಿ ನಡೆಸಿಕೊಂಡಿತು. ತೊಗಾಡಿಯಾ ಅವರು ರಾಷ್ಟ್ರೀಯ ಮಟ್ಟದಲ್ಲಿ ಇಂತಹ ಯಾತನೆ ಸಹಿಸಿಕೊಂಡರೆ ನಾನು ಅವುಗಳನ್ನೆಲ್ಲ ಮೆಟ್ಟಿ ನಿಂತಿದ್ದೇನೆ. ತೊಗಾಡಿಯಾ ಅವರು ಕಣ್ಣೀರು ಹಾಕುವ ಅಗತ್ಯವೇ ಇಲ್ಲ. ಅವರ ಒಂದೊಂದು ಹನಿ ಕಣ್ಣೀರು ರಕ್ತವಾಗಲಿದೆ. ದೇಶದ ಕೋಟಿ ಕೋಟಿ ಹಿಂದೂಗಳು ಅವರ ಹಿಂದಿದ್ದಾರೆ ಎಂದರು.

ಈ ಹಿಂದೆ ಅಶೋಕ ಸಿಂಘಾಲ್‌ ಅವರ ಕಣ್ಣೀರಿಗೆ ಕಾರಣವಾಗಿ ವಾಜಪೇಯಿ ಸರ್ಕಾರ ಅ ಧಿಕಾರ ಕಳೆದುಕೊಂಡಿತ್ತು. ಇದೀಗ ಹಿಂದೂತ್ವನ್ನೇ ಜೀವನದ ಉಸಿರಾಗಿಸಿಕೊಂಡಿರುವ ತೊಗಾಡಿಯಾ ಅವರ ಕಣ್ಣಲ್ಲಿ ನೀರು ಹರಿಸುವಂತೆ ಮಾಡಿರುವ ಕೇಂದ್ರ ಹಾಗೂ ರಾಜಸ್ಥಾನ, ಗುಜರಾತ್‌ ಬಿಜೆಪಿ ಸರ್ಕಾರಗಳು ಅಧಿ ಕಾರ ಕಳೆದುಕೊಳ್ಳುವುದು ಖಚಿತ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next