Advertisement

ಕೋವಿಡ್ ಕಡ್ಡಾಯ ಚುಚ್ಚು ಮದ್ದಿಗೆ ಜೊಕೊವಿಚ್ ವಿರೋಧ

01:30 PM Apr 21, 2020 | keerthan |

ಲಂಡನ್‌: ಕೋವಿಡ್-19 ನಿಯಂತ್ರಣಕ್ಕೆ ಬಂದ ನಂತರ ಮತ್ತೆ ಟೆನಿಸ್‌ ಕೂಟಗಳು ಪುನರಾರಂಭವಾಗುವಂತಹ ಸಮಯದಲ್ಲಿ ಕಡ್ಡಾಯ ಚುಚ್ಚು ಮದ್ದು ಹಾಕಿಸಿಕೊಂಡು ಟೆನಿಸ್‌ ಆಟಗಾರರು ಕೂಟಗಳಲ್ಲಿ ಪಾಲ್ಗೊಳ್ಳಬೇಕು ಎಂಬ ವಾದವನ್ನು ಖ್ಯಾತ ಟೆನಿಸಿಗ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ತಳ್ಳಿ ಹಾಕಿದ್ದಾರೆ.

Advertisement

“ಪ್ರತ್ಯೇಕತೆಗೆ ಒಳಗಾಗಿಯೇ ಬಂದಿರುತ್ತೇವೆ. ಅಂತಹ ಹೊತ್ತಿನಲ್ಲಿ ಮತ್ತೆ ಚುಚ್ಚು ಮದ್ದು ತೆಗೆದುಕೊಳ್ಳಬೇಕು ಎಂದು ಯಾರಿಂದಲೂ ಬಲವಂತಕ್ಕೆ ಒಳಪಡುವುದನ್ನು ಇಷ್ಟಪಡುವುದಿಲ್ಲ ಎಂದು ಫೇಸ್‌ಬುಕ್ ಲೈವ್‌ ಚಾಟ್‌ನಲ್ಲಿ ಜೊಕೊವಿಚ್‌ ತಿಳಿಸಿದ್ದಾರೆ.

ನನಗೆ ಈ ವಿಚಾರದಲ್ಲಿ ನನ್ನದೇ ಆದ ಆಲೋಚನೆಗಳಿವೆ. ಮುಂದೊಂದು ದಿನ ಅದು ಬದಲಾಗಬಹುದು, ಗೊತ್ತಿಲ್ಲ ಎಂದಿದ್ದಾರೆ. ಜೊಕೊ ಚುಚ್ಚುಮದ್ದಿಗೆ ವಿರೋಧ ವ್ಯಕ್ತಪಡಿಸಿದ ಕಾರಣ ಅವರ ಟೆನ್ನಿಸ್ ಕಮ್ ಬ್ಯಾಕ್ ತಡವಾಗಬಹುದು ಎಂದು ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next