Advertisement

ಜನ ಸಂಪರ್ಕ ಸಭೆ, ಸಾರ್ವಜನಿಕ ಭೇಟಿ ಕಡ್ಡಾಯಕ್ಕೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ

11:21 AM Jul 19, 2022 | Team Udayavani |

ಕಲಬುರಗಿ: ಜನರ ಹಾಗೂ ಪೊಲೀಸರ ನಡುವೆ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ನಿಗದಿತವಾಗಿ ಠಾಣೆಗಳಲ್ಲಿ ಜನ ಸಂಪರ್ಕ ಸಭೆ ಹಾಗೂ ದಿನಾಲು ಸಂಜೆ ಐದರಿಂದ ಆರು ಗಂಟೆವರೆಗೆ ವಿಸಿಟರ್ಸ್ ಹವರ್ಸ್ ಕಡ್ಡಾಯವಾಗಿ ಪಾಲಿಸುವಂತೆ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ ವಿಭಾಗ) ಅಲೋಕ ಕುಮಾರ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಎರಡು ದಿನಗಳ ಭೇಟಿಯಾಗಿ ನಗರಕ್ಕೆ ಆಗಮಿಸಿದ ಅವರು ಸಾರ್ವಜನಿಕರ ಅಹವಾಲು ಸ್ವೀಕರಿಸಿ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ನಿಗದಿತ ಜನ ಸಂಪರ್ಕ ನಡೆದರೆ ಅಲ್ಲೇ ಹಲವು ಸಮಸ್ಯೆಗಳನ್ನು ಬಗೆಹರಿಸ ಬಹುದಾಗಿದೆಯಲ್ಲದೇ ಜನಸ್ನೇಹಿ ವಾತಾವರಣ ನಿರ್ಮಾಣವಾಗುತ್ತದೆ. ಅದಲ್ಲದೇ ವಿಸಿಟರ್ಸ್ ಹವರ್ಸ್ ಅಳವಡಿಸಿಕೊಂಡರೆ ಸಣ್ಣ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳಬಹುದು ಎಂದು ವಿವರಣೆ ನೀಡಿದರಲ್ಲದೇ ಈ ಕುರಿತು ಸಭೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.

ಇದನ್ನೂ ಓದಿ:ಶಂಕರಘಟ್ಟದ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷ ಎಂಬ ವಿಡಿಯೋ ವೈರಲ್: ಆದರೆ ಅಸಲಿ ಕಥೆಯೆ ಬೇರೆ!

ರೌಡಿ ಪಡೆ ನಿಗ್ರಹಕ್ಕೂ ಸೂಚನೆ ನೀಡಲಾಗಿದ್ದು, ಗೂಂಡಾ ಕಾಯ್ದೆ ಅಥವಾ ಸಾಧ್ಯವಾದರೆ ಕೋಕಾ ಕಾಯ್ದೆ ಜಾರಿ ತರುವಂತೆ ನಿರ್ದೇಶನ ನೀಡಲಾಗಿದೆ. ಪ್ರಮುಖವಾಗಿ ಈಗಾಗಲೇ ನೀಡಲಾಗಿರುವ ಆಯುಧ ಅನುಮತಿಯನ್ನು ಪರಾಮರ್ಶಿಸುವಂತೆ ಹಾಗೂ ಮುಂದೆ ನೀಡಲಾಗುವ ಆಯುಧ ಅನುಮತಿಯನ್ನು ಎಲ್ಲ ಪರಾಮರ್ಶಿಸುವಂತೆ ಸೂಚನೆ ನೀಡಲಾಗುವುದು ಎಂದರು.

Advertisement

ರೌಡಿ ಶೀಟರ್ ದಿಂದ ಹೆಸರು ತೆಗೆದು ಹಾಕಿರುವುದನ್ನು ಅವಲೋಕನ ನಡೆಸುವಂತೆ ಹಾಗೂ ಮತ್ತೆ ಅಕ್ರಮ ಚಟುವಟಿಕೆ ಕಂಡು ಬಂದರೆ ರೌಡಿ ಶೀಟರ್ ಓಪನ್ ಮಾಡುವಂತೆ ಸೂಚಿಸಲಾಗಿದೆ ಎಂದು ಅಲೋಕ ಕುಮಾರ ತಿಳಿಸಿದರು.

ಈಶಾನ್ಯ ವಲಯ ಐಜಿಪಿ ಮನೀಷ ಖರ್ಬಿಕರ್, ಕಲಬುರಗಿ ಮಹಾನಗರ ಪೊಲೀಸ್ ಆಯುಕ್ತ ಡಾ. ರವಿಕುಮಾರ, ಎಸ್ಪಿ ಇಶಾ ಪಂತ, ಬೀದರ್ ಎಸ್ಪಿ ಕಿಶೋರ ಬಾಬು, ಡಿಸಿಪಿ ಅಡ್ಡೂರು ಶ್ರೀ ನಿವಾಸ ಸೇರಿದಂತೆ ಮುಂತಾದವರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next