Advertisement
ಸೋಮವಾರ ಸ್ಥಳೀಯ ನಗರಸಭೆಯ ಕಾರ್ಯಾಲಯದಲ್ಲಿ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
Related Articles
Advertisement
ಜಮಖಂಡಿ ತಾಲೂಕು ಆರೋಗ್ಯಾಧಿಕಾರಿ ಡಾ| ಜಿ.ಎಚ್.ಗಲಗಲಿ ಮಾತನಾಡಿ, ರಬಕವಿ ಬನಹಟ್ಟಿ ತಾಲೂಕಿನಲ್ಲಿ ಶೇ. 33 ಮಕ್ಕಳಿಗೆ ಮೆದುಳು ಜ್ವರದ ವ್ಯಾಕ್ಸಿನ್ ನೀಡಲಾಗಿದೆ. ಇದುವರೆಗೆ ತಾಲೂಕಿನಲ್ಲಿ ಯಾವುದೆ ಪ್ರಕರಣಗಳು ಪತ್ತೆಯಾಗಿಲ್ಲ. ತಾಲ್ಲೂನಲ್ಲಿ 11 ಸಂಶಾಯಸ್ಪದ ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದು, ಐದು ಖಚಿತಗೊಂಡಿವೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ಬಸನ್ನವರ ಮಾತನಾಡಿ, ವಿವೇಕ ಯೋಜನೆ ಅಡಿಯಲ್ಲಿ ರಬಕವಿ ಬನಹಟ್ಟಿ ತಾಲೂಕಿನ 18 ಶಾಲೆಗಳಿಗೆ 30 ಕೋಣೆಗಳು ಮಂಜೂರಾಗಿವೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗಾಗಿ ತಾಲ್ಲೂಕಿನಲ್ಲಿ ವಿಶೇಷ ಗಮನ ನೀಡಲಾಗುತ್ತಿದೆ ಎಂದರು.
ಅಧಿಕಾರಿಗಳು ಶಾಸಕರ ಸಮಯವನ್ನು ತೆಗೆದುಕೊಂಡು ಅವರ ಕಾರ್ಯಾಲಯಕ್ಕೆ ಬಂದು ಇಲಾಖೆಗಳ ಪ್ರಗತಿಯ ಕುರಿತು ಚರ್ಚೆ ಮಾಡಬೇಕು ಎಂದರು.
ತಾಪಂ ಆಡಳಿತಾಧಿಕಾರಿ ಎಂ.ಜಿ.ಕೊಣ್ಣೂರ, ಕಾರ್ಯ ನಿರ್ವಾಹಕ ಅಧಿಕಾರಿ ಸಂಜೀವ ಹಿಪ್ಪರಗಿ, ತಹಶೀಲ್ದಾರ್ ಎಸ್.ಬಿ.ಇಂಗಳೆ ಇದ್ದರು.