Advertisement

ವಾಹನ ಪಾರ್ಕಿಂಗ್‌ ಮೀಸಲು ಸ್ಥಳದ ವಾಣಿಜ್ಯ ಅಂಗಡಿ ತೆರವಿಗೆ ಸೂಚನೆ

11:48 PM Feb 24, 2021 | Team Udayavani |

ಉಡುಪಿ: ಬಹು ಮಹಡಿ ಕಟ್ಟಡ, ವಾಣಿಜ್ಯ ಸಂಕೀರ್ಣಗಳಲ್ಲಿ ಅನುಮೋದಿತ ನಕ್ಷೆಯಲ್ಲಿರುವಂತೆ ವಾಹನ ಪಾರ್ಕಿಂಗ್‌ಗೆ ಸ್ಥಳಾವಕಾಶ ಕಲ್ಪಿಸಬೇಕಾಗಿದ್ದು ಇಂತಹ ಕಡೆ ಬೇರೆ ಉದ್ದೇಶಗಳಿಗೆ ಬಳಸಿಕೊಂಡಿದ್ದರೆ ಅದನ್ನು ತೆರವುಗೊಳಿಸಲು ನಗರಸಭೆ ಸೂಚಿಸಿದೆ.

Advertisement

ಕೆಲವು ವಾಣಿಜ್ಯ ಸಂಕೀರ್ಣ, ವಸತಿ ಸಮುಚ್ಚಯದವರು ಅನುಮೋದಿತ ನಕ್ಷೆಯಂತೆ ಪಾರ್ಕಿಂಗ್‌ ಜಾಗವನ್ನು ಅತಿಕ್ರಮಿಸಿ ವಾಣಿಜ್ಯ, ಇತರ ಚಟುವಟಿಕೆಗಳಿಗೆ ಬಳಸುತ್ತಿ ರುವುದು ಕಾನೂನುಬಾಹಿರವಾಗಿದೆ. ಇದರಿಂದ ಸಾರ್ವ ಜನಿಕರು ತಮ್ಮ ವಾಹನಗಳನ್ನು ರಸ್ತೆ ಬದಿಯ ಪಾರ್ಕಿಂಗ್‌ ಸ್ಥಳಗಳಲ್ಲಿ ನಿಲುಗಡೆ ಮಾಡುತ್ತಿದ್ದಾರೆ. ಇದರಿಂದ ಸುಗಮ ಜನಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ.

ಪಾರ್ಕಿಂಗ್‌ಗಾಗಿ ಮೀಸಲಿರಿಸಿದ ಸ್ಥಳಗಳಲ್ಲಿರುವ ವಾಣಿಜ್ಯ ಅಂಗಡಿಗಳನ್ನು ತೆರವುಗೊಳಿಸಿ, ಮಂಜೂರಾದ ಅನುಮೋದಿತ ನಕ್ಷೆಯಂತೆ ವಾಹನ ನಿಲುಗಡೆಗೆ 15 ದಿನಗಳಲ್ಲಿ ಸ್ಥಳಾವಕಾಶವನ್ನು ಕಲ್ಪಿಸಿಕೊಡಬೇಕು. ತಪ್ಪಿದಲ್ಲಿ ಸಮುಚ್ಚಯಗಳಿಗೆ ನೀಡಲಾದ ಮೂಲ ಸೌಕರ್ಯಗಳನ್ನು ಸ್ಥಗಿತಗೊಳಿಸಲಾಗುವುದು. ತಪ್ಪು ಮಾಹಿತಿ ನೀಡಿ ಪಡೆಯ ಲಾದ ಉದ್ದಿಮೆ ಪರವಾನಿಗೆಯನ್ನು ರದ್ದುಪಡಿಸಿ, ಅಕ್ರಮವಾಗಿ ಪಾರ್ಕಿಂಗ್‌ ಜಾಗದಲ್ಲಿ ನಿರ್ಮಿಸಿದ್ದರೆ ಅದ ನ್ನು ತೆರವುಗೊಳಿಸಿ, ಭಾರೀ ದಂಡದೊಂದಿಗೆ ಕ್ರಮ ವಹಿಸಲಾಗುವುದು ಎಂದು ಪೌರಾಯುಕ್ತರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next