Advertisement

Karnataka: ಸಸ್ಯ ಶ್ಯಾಮಲಾ ಅನುಷ್ಠಾನಕ್ಕೆ ಸೂಚನೆ

11:07 PM Sep 09, 2023 | Team Udayavani |

ಬೆಂಗಳೂರು: ಸರಕಾರಿ ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ಆವರಣದ ಸುತ್ತಮುತ್ತ ಇರುವ ಸ್ಥಳಗಳಲ್ಲಿ ಹಾಗೂ ಈ ಶಾಲಾ ಕಾಲೇಜುಗಳಿಗೆ ಸೇರಿದ ಸ್ಥಳಗಳಲ್ಲಿ ವಿದ್ಯಾರ್ಥಿಗಳಿಂದ ಶ್ರಮದಾನದ ಮೂಲಕ ಗಿಡ ನೆಟ್ಟು, ಪೋಷಿಸುವ “ಸಸ್ಯ ಶ್ಯಾಮಲಾ’ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಸೂಚನೆ ನೀಡಿದೆ.

Advertisement

ಯೋಜನೆಯನ್ನು ಜಾರಿಗೊಳಿಸಲು ಅರಣ್ಯ ಇಲಾಖೆ ಉಚಿತವಾಗಿ ಪರಿಸರಕ್ಕೆ ಉಪಯುಕ್ತವಾಗುವಂತ ಸಸಿಗಳನ್ನು ಉಚಿತವಾಗಿ ಒದಗಿಸಲಿದೆ. ಗಿಡವನ್ನು ನೆಟ್ಟು ಪೋಷಿಸುವ ಜವಾಬ್ದಾರಿಯನ್ನು ವಿದ್ಯಾರ್ಥಿಗಳು, ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳು ಮತ್ತು ಗ್ರಾಮಗಳ ಅರಣ್ಯ ಸಮಿತಿ ವಹಿಸಿಕೊಳ್ಳಬೇಕಿದೆ. ಅರಣ್ಯ ಇಲಾಖೆಯು ಸಸಿಗಳನ್ನು ನೆಡಲು ಎರಡು ಸಸಿಗಳ ನಡುವೇ ಕನಿಷ್ಠ 5 ಮೀಟರ್‌ಗಳ ಅಂತರ ಇರಬೇಕು, ಕಟ್ಟಡ, ಆವರಣ ಗೋಡೆಗಳಿಂದ 5 ಮೀಟರ್‌ ದೂರದಲ್ಲಿ ಗಿಡ ನೆಡಬೇಕು, ಕಟ್ಟಡ ಕಾಮಗಾರಿಗೆ ಗುರುತಿಸಲಾದ ಸ್ಥಳಗಳಲ್ಲಿ ಗಿಡ ನೆಡುವಂತಿಲ್ಲ ಎಂಬ ಮಾರ್ಗಸೂಚಿ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next