Advertisement

NOTA ಕ್ಕೆ 1.7 ಲಕ್ಷ ಮತಗಳು!; ಹಿಂದಿನ ನೋಟಾ ದಾಖಲೆ ಪತನ

02:53 PM Jun 04, 2024 | Team Udayavani |

ಭೋಪಾಲ್: ಮಧ್ಯಪ್ರದೇಶದ ಇಂದೋರ್‌ನಲ್ಲಿ ‘ನೋಟಾ ‘ ಆಯ್ಕೆಯನ್ನು ಆರಿಸುವಂತೆ ಕಾಂಗ್ರೆಸ್‌ನ ಮತದಾರರಿಗೆ ಮನವಿ ಮಾಡಿದ ಪರಿಣಾಮ ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೆ 1.7 ಲಕ್ಷಕ್ಕೂ ಹೆಚ್ಚು ಮತಗಳನ್ನು ಗಳಿಸಿದೆ. ಬಿಹಾರದ ಗೋಪಾಲ್‌ಗಂಜ್‌ನ ಕ್ಷೇತ್ರದಲ್ಲಿ ದಾಖಾಲಾಗಿದ್ದ ಹಿಂದಿನ ನೋಟಾ ದಾಖಲೆಯನ್ನು ಮುರಿದಿದೆ.

Advertisement

ಚುನಾವಣ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ಇಂದೋರ್‌ನಲ್ಲಿ ನೋಟಾಕ್ಕೆ 1,72,798 ಮತಗಳನ್ನು ಪಡೆದಿದೆ, ಬಿಜೆಪಿ ಅಭ್ಯರ್ಥಿ ಶಂಕರ್ ಲಾಲ್ವಾನಿ 9,90,698 ಮತಗಳ ನಂತರ ಎರಡನೇ ಸ್ಥಾನದಲ್ಲಿದೆ. ಇಂದೋರ್‌ನಲ್ಲಿ ಎಲ್ಲಾ 13 ಅಭ್ಯರ್ಥಿಗಳು ಇಲ್ಲಿಯವರೆಗೆ ನೋಟಾಕ್ಕಿಂತ ಕಡಿಮೆ ಮತಗಳನ್ನು ಪಡೆದಿದ್ದಾರೆ. ಲಾಲ್ವಾನಿ ಅವರ ಸಮೀಪದ ಬಿಎಸ್‌ಪಿ ಪ್ರತಿಸ್ಪರ್ಧಿ ಸಂಜಯ್ ಸೋಲಂಕಿ ಅವರಿಗಿಂತ 9,48,603 ಮತಗಳಿಂದ ಮುಂದಿದ್ದಾರೆ.

2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ, ಕಾಂಗ್ರೆಸ್‌ನ ಇಂದೋರ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ಏಪ್ರಿಲ್ 29 ರಂದು ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡು ಬಿಜೆಪಿಗೆ ಸೇರಿದ್ದರು. ಬಿಜೆಪಿಗೆ ಪಾಠ ಕಲಿಸಲು ಇವಿಎಂಗಳಲ್ಲಿ ನೋಟಾ ಒತ್ತುವಂತೆ ಕಾಂಗ್ರೆಸ್ ನಂತರ ಇಂದೋರ್‌ನ ಮತದಾರರಿಗೆ ಮನವಿ ಮಾಡಿತ್ತು.

2019 ರ ಚುನಾವಣೆಯಲ್ಲಿ, ಬಿಹಾರದ ಗೋಪಾಲ್‌ಗಂಜ್ ಲೋಕಸಭಾ ಕ್ಷೇತ್ರವು 51,660 ಗರಿಷ್ಠ ನೋಟಾ ಮತಗಳನ್ನು ದಾಖಲಿಸಿತ್ತು. ಇದು ಕ್ಷೇತ್ರದಲ್ಲಿನ ಒಟ್ಟು ಮತದಾನದ ಶೇಕಡಾ 5 ರಷ್ಟು ಮತಗಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next