Advertisement

ಸಚಿವ ಸ್ಥಾನದ ಆಕಾಂಕ್ಷಿಯಲ್ಲ

11:11 PM Aug 13, 2019 | Team Udayavani |

ಬಳ್ಳಾರಿ: “ನಾನಂತೂ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಆದರೆ ದೇವರ ಕೃಪೆಯಿಂದ ಸಚಿವ ಸ್ಥಾನ ಸಿಕ್ಕರೆ ನಿಭಾಯಿಸುವೆ. ಕರುಣಾಕಾರ ರೆಡ್ಡಿ ಹಾಗೂ ಶ್ರೀರಾಮುಲು ಅವರಿಗೆ ಸಚಿವ ಸ್ಥಾನ ಸಿಕ್ಕರೂ ಸಂತೋಷ’ ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದರು. ನಗರದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿ, “ಉತ್ತರ ಕರ್ನಾಟಕದಲ್ಲಿ ಸಂಭವಿಸಿರುವ ನೆರೆ ಹಾವಳಿಯಿಂದ ಸಚಿವ ಸಂಪುಟ ರಚನೆ ವಿಳಂಬವಾಗಿದೆ.

Advertisement

ಆ.18ರಂದು ಸಚಿವ ಸಂಪುಟ ರಚನೆಯಾ ಗುವ ಸಾಧ್ಯತೆಯಿದೆ. ಮೊದಲ ಹಂತದಲ್ಲಿ ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ನಾನಂತೂ ಸಚಿವ ಸ್ಥಾನದ ಆಕಾಂಕ್ಷಿಯಲ್ಲ ವರಿಷ್ಠರಿಗೆ ಈ ಬಗ್ಗೆ ಮನವಿಯನ್ನೂ ನೀಡಿಲ್ಲ’ ಎಂದರು. ಸಿಎಂ ಯಡಿಯೂರಪ್ಪ ನವರು ನೆರೆ ಹಾನಿ ಪ್ರದೇಶಗಳಲ್ಲಿ ಬಿಡುವಿಲ್ಲದೆ ಓಡಾಡುತ್ತಿ ದ್ದಾರೆ. ಈ ವೇಳೆ ಅವರಿಗೆ ಸಚಿವರ ಸಾಥ್‌ ಅಗತ್ಯವಿತ್ತು.

ಆದರೆ ನೆರೆ ಹಾವಳಿ ಉಂಟಾಗಿರುವ ವೇಳೆ ಸಚಿವ ಸಂಪುಟ ರಚನೆಯಾಗಿದ್ದರೆ, ಜನರ ಕೆಂಗಣ್ಣಿಗೆ ಗುರಿ ಆಗುವ ಸಾಧ್ಯತೆಯಿತ್ತು. ಹೀಗಾಗಿ ಸಂಪುಟ ರಚನೆ ಅಷ್ಟೊಂದು ಸಮಂಜಸವಲ್ಲ ಎಂಬ ಅಭಿಪ್ರಾಯಕ್ಕೆ ಹೈಕಮಾಂಡ್‌ ಬಂದಂತಿದೆ ಎಂದರು. ಹರಪನ ಹಳ್ಳಿ ಶಾಸಕ ಜಿ.ಕರುಣಾಕರರೆಡ್ಡಿ ಅವರು ನನ್ನ ಸಹೋದರ. ಬಿ.ಶ್ರೀರಾಮುಲು, ಕರುಣಾಕರೆಡ್ಡಿ ನಾವೆಲ್ಲ ಒಂದೇ. ಮಧ್ಯ ದಲ್ಲಿ ಪಕ್ಷ ಬೇರೆ ಬೇರೆಯಾಗಿತ್ತು. ಇದು ನಮ್ಮ ನಡುವೆ ಒಂದಷ್ಟು ಅಂತರಕ್ಕೆ ಕಾರಣವಾಗಿತ್ತು. ಆದರೆ, ವೈಯಕ್ತಿಕವಾಗಿ ಯಾವುದೇ ವೈಮನಸ್ಸುಗಳಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next