Advertisement

ಏರಿಂಡಿಯಾ, ಜೆಟ್‌ ಸಹಿತ ಹಲವು ಸಂಸ್ಥೆಗಳು ನಷ್ಟದಲ್ಲಿ: ಸಚಿವ ಪ್ರಭು

06:15 PM Aug 14, 2018 | Team Udayavani |

ಹೊಸದಿಲ್ಲಿ : ಏರಿಂಡಿಯಾ ವಿಮಾನ ಯಾನ ಸಂಸ್ಥೆ ತನ್ನ ನೌಕರರಿಗೆ ಜುಲೈ ತಿಂಗಳ ಸಂಬಳವನ್ನು ಇನ್ನೂ ಪಾವತಿಸಿಲ್ಲ. ಇದೇ ರೀತಿ ಜೆಟ್‌ ಏರ್‌ ವೇಸ್‌ ಕೂಡ ತೀವ್ರ ಹಣಕಾಸು ಬಿಕ್ಕಟ್ಟನ್ನು ಎದುರಿಸುತ್ತಿದೆ.  

Advertisement

ಇದೇ ರೀತಿ ಜಗತ್ತಿನ ಹಲವಾರು ವಿಮಾನ ಯಾನ ಸಂಸ್ಥೆಗಳು ಕೂಡ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿವೆ. ಇದಕ್ಕೆ ಮುಖ್ಯ ಕಾರಣ ನಿರಂತವಾಗಿ ಏರುತ್ತಿರುವ ವೈಮಾನಿಕ ಇಂಧನ ದರಗಳು ಎಂದು ನಾಗರಿಕ ವಾಯು ಯಾನ ಸಚಿವ ಸುರೇಶ್‌ ಪ್ರಭು ಹೇಳಿದ್ದಾರೆ. 

ಇಂಡಿಯನ್‌ ಏರ್‌ಲೈನ್ಸ್‌ ಸಂಸ್ಥೆ ಮಾತ್ರವೇ ನಷ್ಟಕ್ಕೆ ಗುರಿಯಾಗಿಲ್ಲ; ವಿಶ್ವದ ಅನೇಕ ವಿಮಾನ ಯಾನ ಸಂಸ್ಥೆಗಳು ನಷ್ಟಕ್ಕೆ ಗುರಿಯಾಗಿವೆ ಎಂದು ಸಚಿವ ಸುರೇಶ್‌ ಪ್ರಭು ಹೇಳಿದರು. 

ವೈಮಾನಿಕ ಇಂಧನ ಬೆಲೆಗಳಲ್ಲಿ ಕ್ಷಿಪ್ರಗತಿಯಲ್ಲಿ ಆಗುತ್ತಿರುವ ಏರಿಳಿತಗಳನ್ನು ಸಮರ್ಪಕವಾಗಿ ಮತ್ತು ತ್ವರಿತವಾಗಿ ಅರಗಿಸಿಕೊಳ್ಳಲು ವಿಮಾನ ಯಾನ ಸಂಸ್ಥೆಗಳಿಗೆ ಆಗುತ್ತಿಲ್ಲ; ಆದುದರಿಂದಲೇ ಅವು ನಷ್ಟವನ್ನು ಅನುಭವಿಸುತ್ತಿವೆ ಎಂದು ಸಚಿವ ಪ್ರಭು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next