ಮುಂಬಯಿ: ಬಿಜೆಪಿ ವಿರುದ್ಧ ಯಾವುದೇ ರಂಗವನ್ನು ಮುನ್ನಡೆಸಲು ಹೋಗುವುದಿಲ್ಲ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಕೊಲ್ಲಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎನ್‌ಸಿಪಿ ಮುಖ್ಯಸ್ಥ ಪವಾರ್, ಪ್ರಸ್ತುತ ಕಾಂಗ್ರೆಸ್ ನೇತೃತ್ವದ ಯುಪಿಎಯನ್ನು ಮುನ್ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ “ಇತ್ತೀಚೆಗೆ, ನಮ್ಮ ಪಕ್ಷದ ಕೆಲವು ಯುವ ಕಾರ್ಯಕರ್ತರು ನನ್ನನ್ನು ಯುಪಿಎ ಅಧ್ಯಕ್ಷರಾಗುವಂತೆ ಕೇಳುವ ನಿರ್ಣಯವನ್ನು ಅಂಗೀಕರಿಸಿದ್ದಾರೆ. . ಆದರೆ ನನಗೆ ಆ ಸ್ಥಾನದ ಬಗ್ಗೆ ಆಸಕ್ತಿ ಇಲ್ಲ, ನಾನು ಆ ಸ್ಥಾನಕ್ಕೆ ಹೋಗುವುದಿಲ್ಲ, ನಾನು ಆ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ ಎಂದರು.
ಬಿಜೆಪಿಗೆ ಪರ್ಯಾಯವನ್ನು ಒದಗಿಸಲು ಪ್ರಯತ್ನಿಸಿದರೆ, ಅಂತಹ ಬಣವನ್ನು ಸಹಕರಿಸಲು, ಬೆಂಬಲಿಸಲು ಮತ್ತು ಬಲಪಡಿಸಲು ನಾನು ಸಿದ್ಧನಿದ್ದೇನೆ. ನಾವು ಅದನ್ನು ಮಾಡುತ್ತಿದ್ದೇವೆ. ಪ್ರತಿಪಕ್ಷಗಳು ಒಗ್ಗೂಡಬೇಕು ಎಂದು ಹೇಳಿದಾಗ ಕೆಲವು ಸಂಗತಿಗಳನ್ನು ನಿರ್ಲಕ್ಷಿಸಬೇಕಾಗಿಲ್ಲ. ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪಶ್ಚಿಮ ಬಂಗಾಳದಲ್ಲಿ ಪ್ರಬಲ ಪಕ್ಷವಾಗಿದೆ ಮತ್ತು ಅವರು ಜನರ ಬೆಂಬಲವನ್ನು ಹೊಂದಿದ್ದಾರೆ. ಅದೇ ಸಮಯದಲ್ಲಿ, ಪ್ರಾದೇಶಿಕ ಪಕ್ಷಗಳು ಇತರ ರಾಜ್ಯಗಳಲ್ಲಿ ಪ್ರಬಲವಾಗಿವೆ ಎಂದು ಪವಾರ್ ಹೇಳಿರುವುದಾಗಿ ಪಿಟಿಐ ಉಲ್ಲೇಖಿಸಿದೆ.
“ಒಂದು ಪಕ್ಷ ಮಾತ್ರ ಬಲಿಷ್ಠವಾಗಿದ್ದರೆ ಅದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್‌ನಂತಾಗುತ್ತದೆ. ಅವರು ಮತ್ತು ಚೀನಾದ ಅಧ್ಯಕ್ಷರು ಅವರು ಜೀವಂತವಾಗಿರುವವರೆಗೆ ತಮ್ಮ ದೇಶಗಳನ್ನು ಮುನ್ನಡೆಸಲು ನಿರ್ಧರಿಸಿದ್ದಾರೆ. ಭಾರತವು ಅಂತಹ ಪುತಿನ್ ಹೊಂದಿರಬಾರದು ಎಂದು ನಾನು ಭಾವಿಸುತ್ತೇನೆ. ಎಂದು ಪವಾರ್ ಹೇಳಿದ್ದಾರೆ.
”ದಿ ಕಾಶ್ಮೀರ್ ಫೈಲ್ಸ್” ಚಲನಚಿತ್ರವನ್ನು ಇತರ ಧರ್ಮದ ಜನರು ಕೋಪಗೊಳ್ಳುವ ರೀತಿಯಲ್ಲಿ ನಿರ್ಮಿಸಲಾಗಿದೆ. ಕಾಶ್ಮೀರಿ ಪಂಡಿತರ ನಿರ್ಗಮನದ ಸಮಯದಲ್ಲಿ ಕಣಿವೆಯಲ್ಲಿ ವಿ ಪಿ ಸಿಂಗ್ ಅವರ ಸರ್ಕಾರವು ಕೇಂದ್ರದಲ್ಲಿ ಅಧಿಕಾರದಲ್ಲಿತ್ತು, ಕಾಂಗ್ರೆಸ್ ಇರಲಿಲ್ಲ ಎಂದು ಪವಾರ್ ಪುನರುಚ್ಚರಿಸಿದ್ದಾರೆ.