Advertisement

ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ; ವಿಫ‌ಲ ಎಂದ ಅಮೆರಿಕ

10:49 AM Apr 30, 2017 | Team Udayavani |

ಸಿಯೋಲ್‌: ಉತ್ತರ ಕೊರಿಯಾದ ಪರಮಾಣು ಚಟುವಟಿಕೆಗಳ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರ್ಬಂಧ ಹೇರಲು ಅಮೆರಿಕ ಮುಂದಾಗಿರುವಂತೆಯೇ, ಉತ್ತರ ಕೊರಿಯಾ ಖಂಡಾಂತರ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ನಡೆಸಿದೆ.

Advertisement

ಆದರೆ ಈ ಕ್ಷಿಪಣಿ ಕೊರಿಯಾದ ಗಡಿ ದಾಟಿ ಮುಂದೆ ಹೋಗಲು ವಿಫ‌ಲವಾಗಿದೆ ಎಂದು ಅಮೆರಿಕ ಹೇಳಿದೆ. ಅಮೆರಿಕ ವಿದೇಶಾಂಗ ಸಚಿವ ರೆಕ್ಸ್‌ ಟಿಲ್ಲರ್‌ಸನ್‌ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕೊರಿಯಾದ ಪರಮಾಣು ಮತ್ತು ಕ್ಷಿಪಣಿ ಯೋಜನೆಗಳನ್ನು ನಿಯಂತ್ರಿಸಲು ಜಾಗತಿಕ ಅಭಿಯಾನ ರೂಪಿಸಬೇಕು ಎಂದು ಹೇಳಿದ ಬಳಿಕ ಕೊರಿಯಾ ಕ್ಷಿಪಣಿ ಪರೀಕ್ಷೆ ನಡೆಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, “ಕ್ಷಿಪಣಿ ಪ್ರಯೋಗ ಮಾಡುವ ಮೂಲಕ ಉತ್ತರ ಕೊರಿಯಾವು, ಚೀನ ಮತ್ತು ಅದರ ಗೌರವಾನ್ವಿತ ಅಧ್ಯಕ್ಷರ ಅಭಿಲಾಷೆಗೆ ಅಗೌರವ ತೋರಿದೆ. ಇದು ಒಳ್ಳೆಯದಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next