Advertisement
ಉದ್ಯೋಗ ಅರಸಿಕೊಂಡು ಕರಾವಳಿಗೆ ಬಂದ ಉತ್ತರ ಕರ್ನಾಟಕದ ವಿವಿಧ ಭಾಗಗಳ ಜನರು ಇಲ್ಲಿಯೇ ಜೀವನ ಸಾಗಿಸುತ್ತಿದ್ದರು. ಅವರ ಮಕ್ಕಳು ಕೂಡ ಇಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದರು. ಆದರೆ ಕೊರೊನಾ ಬಂದಾಗ ಊರಿಗೆ ತೆರಳಿದವರು ಮರಳಲು ಮನಮಾಡುತ್ತಿಲ್ಲ.
ಉಡುಪಿ ಮತ್ತು ದ.ಕ. ಜಿಲ್ಲೆಯ ಕಾಲೇಜುಗಳಲ್ಲಿ ಉತ್ತರ ಕರ್ನಾಟಕ ಕಾರ್ಮಿಕರ ಮಕ್ಕಳ ದಾಖಲಾತಿ ಪ್ರಮಾಣ ಅನುಕ್ರಮವಾಗಿ ಶೇ. 40 ಮತ್ತು ಶೇ. 25ರಷ್ಟು ಕಡಿಮೆಯಾಗಿದೆ. ಉಡುಪಿಯ ಎರಡು ಮೊರಾರ್ಜಿ ದೇಸಾಯಿ ವಸತಿ ಪಿ.ಯು. ಕಾಲೇಜು ಸಹಿತ 44 ಸರಕಾರಿ ಪ.ಪೂ. ಕಾಲೇಜು
ಗಳಿದ್ದರೆ 18 ಅನುದಾನಿತ ಪ.ಪೂ. ಕಾಲೇಜುಗಳಿವೆ. ದ.ಕ.ದಲ್ಲಿ 2 ಮೊರಾರ್ಜಿ ದೇಸಾಯಿ ವಸತಿ ಕಾಲೇಜು ಸಹಿತ 54 ಸರಕಾರಿ ಪ.ಪೂ. ಕಾಲೇಜುಗಳಿವೆ. 42 ಅನುದಾನಿತ ಪ.ಪೂ. ಕಾಲೇಜುಗಳಿವೆ. ಎಲ್ಲ ಕಡೆ ಇದರ ಪರಿಣಾಮ ಕಂಡುಬರುತ್ತಿದೆ ಎನ್ನುತ್ತಾರೆ ಶಿಕ್ಷಣ ಅಧಿಕಾರಿಗಳು.
Related Articles
ಅವಿಭಜಿತ ದ.ಕ. ಜಿ ಪುನೀತ್ ಸಾಲ್ಯಾನ್‌ಯ ಖಾಸಗಿ ಪ.ಪೂ. ಕಾಲೇಜುಗಳಲ್ಲಿ ಪ್ರವೇಶಕ್ಕೆ ಮಿಶ್ರ ಪ್ರತಿಕ್ರಿಯೆ ಇದೆ. ಲಭ್ಯ ಮಾಹಿತಿ ಪ್ರಕಾರ ಉಡುಪಿ ಎರಡು ಖಾಸಗಿ ಕಾಲೇಜುಗಳಲ್ಲಿ ಯಾವುದೇ ದಾಖಲಾತಿ ಆಗಿಲ್ಲ. ದ.ಕ.ದಲ್ಲಿಯೂ ಕೆಲವು ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಶೇ. 50ರಷ್ಟು ಮಾತ್ರ ದಾಖಲಾತಿಯಾಗಿದೆ. ದ್ವಿತೀಯ ಪಿಯುಸಿಗೆ ಸೇರ್ಪಡೆಯೂ ಕುಸಿತ ಅನ್ಯ ಜಿಲ್ಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಪ್ರಥಮ ಪಿಯುಸಿ ತೇರ್ಗಡೆಯಾಗಿದ್ದರೂ ಕೊರೊನಾ ಕಾರಣದಿಂದಾಗಿ ಊರಿಗೆ ಹೋದವರು ಅಲ್ಲಿಯೇ ವಿದ್ಯಾಭ್ಯಾಸ ಮುಂದುವರಿಸಲು ಬಯಸಿದ್ದು, ಅವಿಭಜಿತ ದ.ಕ. ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿಗೂ ವಿದ್ಯಾರ್ಥಿಗಳ ಸಂಖ್ಯೆ ಕುಸಿದಿದೆ.
Advertisement
ಹೊರಜಿಲ್ಲೆಗಳ ವಿದ್ಯಾರ್ಥಿಗಳು ಅಲ್ಲಿಯೇ ಶಿಕ್ಷಣ ಮುಂದುವರಿಸಲು ನಿರ್ಧರಿಸಿರುವುದು ಕರಾವಳಿಯ ಕಾಲೇಜುಗಳಿಗೆ ಹೊಡೆತ ನೀಡಿದೆ. ಕೆಲವು ಪಿಯು ಕಾಲೇಜುಗಳಲ್ಲಿ ಶೂನ್ಯ ದಾಖಲಾತಿಯ ಬಗ್ಗೆ ಪ.ಪೂ. ಶಿಕ್ಷಣ ಇಲಾಖೆಯ ನಿರ್ದೇಶಕರ ಕಚೇರಿಗೆ ವರದಿ ಮಾಡಿ ಮುಂದಿನ ಕ್ರಮಕ್ಕಾಗಿ ಸಲಹೆ ಪಡೆದುಕೊಳ್ಳುತ್ತೇವೆ.– ಭಗವಂತ ಕಟ್ಟೇಮನಿ, ಮೊಹಮ್ಮದ್ ಇಮ್ತಿಯಾಜ್, ಉಡುಪಿ, ದ.ಕ., ಡಿಡಿಪಿಯು ಪುನೀತ್ ಸಾಲ್ಯಾನ್