Advertisement

ರಾಜಧಾನಿಯಲ್ಲಿ ಸಾಧಾರಣ ಮಳೆ

12:12 AM Oct 21, 2019 | Team Udayavani |

ಬೆಂಗಳೂರು: ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಹಿಂಗಾರು ಚುರುಕುಗೊಂಡಿರುವುದರಿಂದ ನಗರದ ವಿವಿಧೆಡೆ ಭಾನುವಾರ ಸಾಧಾರಣ ಮಳೆಯಾಗಿದೆ. ಆದರೆ, ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಬಿಬಿಎಂಪಿಯ ಸಹಾಯವಾಣಿಯ ಸಿಬ್ಬಂದಿಗಳು ತಿಳಿಸಿದ್ದಾರೆ.

Advertisement

ಎಲ್ಲೆಲ್ಲಿ ಎಷ್ಟು ಮಳೆ?: ಎಚ್‌ಎಎಲ್‌ 18 ಮಿ.ಮೀ,ಶ್ರೀಕಂಠಪುರ 4 ಮಿ.ಮೀ, ಚಿಕ್ಕಬಿದರಕಲ್ಲು 3 ಮಿ.ಮೀ, ಕೆ.ಆರ್‌ಪುರ 8 ಮಿ.ಮೀ, ಬಾಗಲೂರು 5 ಮಿ.ಮೀ, ರಾಜನಕುಂಟೆ 3 ಮಿ.ಮೀ, ಜಾಲ 6 ಮಿ.ಮೀ, ಯಶವಂತಪುರ 4 ಮಿ.ಮೀ, ಮಾದನಾಯಕನ ಹಳ್ಳಿ 3 ಮಿ.ಮೀ, ಬಸ‌ವೇಶ್ವರ ನಗರ 3 ಮಿ.ಮೀ, ಗಾಳೀಆಂಜನೇಯ ಸ್ವಾಮಿ ದೇವಸ್ಥಾನ 7 ಮಿ.ಮೀ, ಜ್ಞಾನಭಾರತಿ 4 ಮಿ.ಮೀ, ನಾಗರಬಾವಿ 3 ಮಿ.ಮೀ, ಚಾಮರಾಜಪೇಟೆ 7 ಮಿ.ಮೀ, ಅಗ್ರಹಾರ ಮತ್ತು ದಾಸರಹಳ್ಳಿ 5 ಮಿ.ಮೀ, ಬೇಗೂರು 6 ಮಿ.ಮೀ, ಕೆಂಗೇರಿ 5 ಮಿ.ಮೀ, ರಾಜರಾಜೇಶ್ವರಿ ನಗರ 2 ಮಿ.ಮೀ, ಆವಲಹಳ್ಳಿ 5 ಮಿ.ಮೀ, ಬಾಣಸವಾಡಿ 3 ಮಿ.ಮೀ, ಸಂಪಂಗಿ ರಾಮನಗರ 8 ಮಿ.ಮೀ, ರಾಮಮೂರ್ತಿನಗರ 9 ಮಿ.ಮೀ, ಕಣ್ಣೂರು 8 ಮಿ.ಮೀ, ಮಂಡೂರು 10 ಮಿ.ಮೀ ಮಳೆಯಾಗಿರುವುದು ವರದಿಯಾಗಿದೆ.

ಭಾರೀ ಮಳೆ ಸಾಧ್ಯತೆ: ರಾಜ್ಯಾದ್ಯಂತ ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ರಾಜ್ಯದ 30 ಜಿಲ್ಲೆಗಳಿಗೂ ಭಾರತೀಯ ಹವಾಮಾನ ಇಲಾಖೆ “ಯೆಲ್ಲೋ ಅಲರ್ಟ್‌’ ಎಚ್ಚರಿಕೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next