Advertisement
ದೇವನಹಳ್ಳಿ ವಿಧಾನಸಭಾ ಕ್ಷೇತ್ರವು ಮೀಸಲು ಕ್ಷೇತ್ರವಾಗಿದ್ದು 2.12ಲಕ್ಷ ಮತದಾರರನ್ನು ಹೊಂದಿದೆ. ಎಸ್.ಸಿ., ಎಸ್.ಟಿ., ಒಕ್ಕಲಿಗ, ಹಿಂದುಳಿದ ವರ್ಗದ ಮತದಾರರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಕಳೆದ ಎರಡೂ ಚುನಾವಣೆಗಳಲ್ಲಿ ಜೆಡಿಎಸ್ ಭದ್ರಕೋಟೆಯಂತಿರುವ ಮೀಸಲು ಕ್ಷೇತ್ರ ದಲ್ಲಿ ಕಾಂಗ್ರೆಸ್, ಬಿಜೆಪಿ ಜೊತೆಗೆ ಆಮ್ ಆದ್ಮಿ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಯೂ ಸದ್ದು ಮಾಡುತ್ತಿದ್ದಾರೆ.
Related Articles
Advertisement
ಶಾಪ ವಿಮೋಚನೆ ಆಗುತ್ತಾ: ಒಂದು ಬಾರಿ ಗೆದ್ದ ಶಾಸಕರು ಮತ್ತೂಮ್ಮೆ ಗೆದ್ದಿರುವುದಿಲ್ಲ ಎಂಬ ಶಾಪ ವಿದ್ದು, ಈ ಶಾಪ ಏನಾದರೂ ವಿಮೋಚನೆ ಆಗಬ ಹುದು ಎಂಬ ಲೆಕ್ಕಾಚಾರ ಸಾರ್ವಜನಿಕರಲ್ಲಿ ಮೂಡು ತ್ತಿದೆ. ಜೆಡಿಎಸ್‌ನಲ್ಲಿ 2013ರಲ್ಲಿ ಪಿಳ್ಳಮುನಿಶಾಮಪ್ಪ ಶಾಸಕರಾಗಿದ್ದರು. 2018ರಲ್ಲಿ ಜೆಡಿಎಸ್‌ನಿಂದ ಎಲ್. ಎನ್.ನಾರಾಯಣಸ್ವಾಮಿ ಶಾಸಕರಾಗಿದ್ದರು. ಕಳೆದ ಹತ್ತು ವರ್ಷದಿಂದ ಜೆಡಿಎಸ್ ಶಾಸಕರಿದ್ದಾರೆ.
ಕಳೆದ ಬಾರಿ ಜೆಡಿಎಸ್‌ನಿಂದ “ಸಿ’ ಫಾರಂ: ಕಳೆದ ಬಾರಿ ಪಿಳ್ಳಮುನಿಶಾಮಪ್ಪಗೆ ಜೆಡಿಎಸ್ ಬಿ ಫಾರಂ ನೀಡಲಾಗಿತ್ತು. ಕೊನೆ ಕ್ಷಣದಲ್ಲಿ ನಾರಾಯಣಸ್ವಾಮಿ ಅವರಿಗೆ ಸಿ ಫಾರಂ ನೀಡಲಾಯಿತು. ದೇವನಹಳ್ಳಿ ಕ್ಷೇತ್ರದ ಇತಿಹಾಸದಲ್ಲಿ ಇದುವರೆಗೂ ಬಿಜೆಪಿ ಶಾಸಕರು ಗೆದ್ದಿಲ್ಲ. ತಾಲೂಕಿನಲ್ಲಿ ಅಷ್ಟು ಪ್ರಭಾವ ಹೊಂದಿಲ್ಲ. ಈ ಬಾರಿ ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಅವರಿಗೆ ಟಿಕೆಟ್ ನೀಡಿರುವುದರಿಂದ ತಾಲೂಕಿನ ಎಲ್ಲೆಡೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಭಿನ್ನಮತ ಶಮನ: ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ದೇವನಹಳ್ಳಿಯಿಂದ ಸ್ಪರ್ಧಿ ಸುತ್ತಿರುವುದರಿಂದ ರಾಜ್ಯ ರಾಜಕಾರಣಕ್ಕೆ ಬಂದಿರು ವುದರಿಂದ ದೇವನಹಳ್ಳಿ ಕ್ಷೇತ್ರವು ಪ್ರತಿಷ್ಠೆಯ ಕಣವಾಗಿದೆ. ಕಾಂಗ್ರೆಸ್ಸಿನಲ್ಲಿದ್ದ ಭಿನ್ನಮತವನ್ನು ಶಮನ ಮಾಡಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತಿದ್ದಾರೆ. ಕಾಂಗ್ರೆಸ್ ಕಳೆದ ಹತ್ತು ವರ್ಷಗಳಿಂದ ಶಾಸಕರನ್ನು ಕಳೆದುಕೊಂಡಿದೆ. ಆದರೆ, ಈ ಬಾರಿ ಕಾಂಗ್ರೆಸ್ಸಿನ ಎಲ್ಲಾ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಏನೇ ಆದರೂ ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.
ಕೈ ತೆನೆಗೆ ನೇರ ಸ್ಪರ್ಧೆ: ದೇವನಹಳ್ಳಿಯಲ್ಲಿ ಕಳೆದೆರಡು ದಶಕದಲ್ಲಿ ಮೂರು ಬಾರಿ ಜೆಡಿಎಸ್, ಒಂದು ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಈ ಚುನಾವಣೆ ಯಲ್ಲೂ ಜೆಡಿಎಸ್, ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಆದರೆ, ಜೆಡಿಎಸ್‌ನಿಂದಲೇ ಟಿಕೆಟ್ ಕೈತಪ್ಪಿ ಪಿಳ್ಳಮುನಿಶಾಮಪ್ಪ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಇದು ಕಾಂಗ್ರೆಸ್‌ಗೆ ಲಾಭವಾಗುವ ಸಾಧ್ಯತೆಯಿದೆ. ಜೊತೆಗೆ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಕ್ಷೇತ್ರಾದ್ಯಂತ ಬಿರುಸಿನ ಮತ ಪ್ರಚಾರ ನಡೆಸುತ್ತಿದ್ದು ಗೆಲುವು ದಕ್ಕುತ್ತ ಕಾದು ನೋಡಬೇಕು. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಪರಸ್ಪರ ಸ್ಟಾರ್ ಪ್ರಚಾರಕರ ಮೊರೆ ಹೋಗುತ್ತಿದ್ದು, ಈ ಮಧ್ಯೆ ಆಮ್ ಆದ್ಮಿ, ಪಕ್ಷೇತರ ಅಭ್ಯರ್ಥಿಗಳು ಸಹ ಕಣದಲ್ಲಿ ಸದ್ದು ಮಾಡುತ್ತಿದ್ದಾರೆ. ಅಂತಿಮವಾಗಿ ಅದೃಷ್ಟ ಲಕ್ಷ್ಮೀ ಯಾರಿಗೆ ಒಲಿಯಲಿದ್ದಾಳೆ ಎನ್ನುವ ಕುತೂಹಲ ಸೃಷ್ಟಿಯಾಗಿದೆ.
ಕಳೆದೆರಡು ವರ್ಷಗಳಿಂದ ಕ್ಷೇತ್ರದಲ್ಲಿ ಸಮಾಜಸೇವೆ ಮಾಡಿಕೊಂಡು ಬಂದಿರುವ ವೆಲ್ಫೇರ್ ಫೌಂಡೇಷನ್‌ನ ಸಂಸ್ಥಾಪಕ ಮಂಜುನಾಥ್ ಪಕ್ಷೇತರರಾಗಿ ಸ್ಪರ್ಧಿಸಿ ತಾಲೂಕಾದ್ಯಂತ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ತಾಪಂ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಹೋರಾಟ ಸಮಿತಿ ಸಂಚಾಲಕರಾಗಿದ್ದ ಬಿ.ಕೆ.ಶಿವಪ್ಪ ಪಕ್ಷದಿಂದ ಅಭ್ಯರ್ಥಿಯಾಗಿ ತಾಲೂಕಾ ದ್ಯಂತ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ದೇವನಹಳ್ಳಿ ಮೀಸಲು ವಿಧಾನಸಭಾ ಕ್ಷೇತ್ರವು ಕಾಂಗ್ರೆಸ್, ಜೆಡಿಎಸ್ ನಡುವೆ ನೇರ ಹಣಾಹಣಿಯಿದ್ದರೂ ಬಿಜೆಪಿಯು ತನ್ನದೇ ಆದ ಲೆಕ್ಕಾಚಾರವಿಟ್ಟುಕೊಂಡು ತಂತ್ರಗಾರಿಕೆ ರೂಪಿಸುತ್ತಿದೆ. ಮತದಾರ ಯಾರಿಗೆ ಮಣೆ ಹಾಕಲಿದ್ದಾನೆ ಎಂಬುವುದು ಚುನಾವಣಾ ಫಲಿತಾಂಶದ ಬಳಿಕ ಉತ್ತರ ಸಿಗಲಿದೆ.
ಮಂಡಲ್ ಪಂಚಾಯ್ತಿ, ಜಿಪಂ ಸದಸ್ಯ ನಾಗಿ, ಶಾಸಕನಾಗಿ, ಯಾವುದೇ ಕಳಂಕ ಇಲ್ಲದೆ ದೇವನಹಳ್ಳಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಪ್ರತಿ ಹೋಬ ಳಿಗೆ ವಸತಿ ಶಾಲೆ, ರಸ್ತೆ ಅಭಿವೃದ್ಧಿ, ಜಿಲ್ಲಾಡಳಿತ ಭವನ ನಿರ್ಮಿಸಿದ್ದೇನೆ. ಇದು ನನಗೆ ಶ್ರೀರಕ್ಷೆ – ಪಿಳ್ಳಮುನಿಶಾಮಪ್ಪ, ಬಿಜೆಪಿ ಅಭ್ಯರ್ಥಿ
ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ್ರೆ 10 ಕೇಜಿ ಅಕ್ಕಿ, ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್, ಯುವನಿಧಿ ಹೀಗೆ ಎಲ್ಲಾ ವರ್ಗದ ಬಲವರ್ಧನೆಗೆ ಶ್ರಮಿಸಲಾಗುವುದು. ಕೇಂದ್ರ ಸಚಿವನಾಗಿದ್ದಾಗ ಗ್ರಾಮಾಂತರ ಜಿಲ್ಲೆಗೆ ಕೊಡುಗೆ ನೀಡಿದ್ದು, ನನ್ನ ಗೆಲವಿಗೆ ಶ್ರೀರಕ್ಷೆ – ಕೆ.ಎಚ್.ಮುನಿಯಪ್ಪ, ಕಾಂಗ್ರೆಸ್ ಅಭ್ಯರ್ಥಿ
ನಾನು ಶಾಸಕನಾದ ಮೇಲೆ ತಾಲೂ ಕಿನಲ್ಲಿ 75 ವರ್ಷಗಳಿಂದ ಆಗದಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಒಂದು ಗ್ರಾಮಕ್ಕೆ 1 ರಿಂದ 5 ಕೋಟಿ ರೂ.ವರೆಗೆ ಅನುದಾನ ನೀಡಿದ್ದೇನೆ. ನನ್ನ ಅಭಿವೃದ್ಧಿ ಕಾರ್ಯ ನೋಡಿ ಜನ ಆಯ್ಕೆ ಮಾಡುತ್ತಾರೆ. – ನಾರಾಯಸ್ವಾಮಿ, ಜೆಡಿಎಸ್ ಅಭ್ಯರ್ಥಿ.
– ಎಸ್.ಮಹೇಶ್