Advertisement

ಬಡವರಿಗೆ ಉಜ್ವಲ ಭವಿಷ್ಯ ರೂಪಿಸುವುದೇ ಗುರಿ: ಮಲ್ಲಿಕಾರ್ಜುನ

11:55 AM May 01, 2023 | Team Udayavani |

ಬಾಗಲಕೋಟೆ: ಎಲ್ಲ ರಾಜಕೀಯ ಪಕ್ಷಗಳ ಶಾಸಕರನ್ನು ನೋಡಿರುವ ಕ್ಷೇತ್ರದ ಜನರು ಬೇಸತ್ತು ಹೋಗಿದ್ದಾರೆ. ಈ ಬಾರಿ ಬದಲಾವಣೆಗೆ ಬಯಸಿದ್ದು, ಸ್ವಾಭಿಮಾನಿ ಬಳಗದ ಆಟೋಗೆ ಗೆಲುವು ನೀಡಲಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಚರಂತಿಮಠ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಅಮೀನಗಡದ ಹಲವು ಯುವಕರು ರವಿವಾರ ಸಂಜೆ ಕಾಂಗ್ರೆಸ್‌-ಬಿಜೆಪಿ ತೊರೆದು ಸ್ವಾಭಿಮಾನ ಕಾರ್ಯಕರ್ತರ ಪಡೆಗೆ ಸೇರ್ಪಡೆಗೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕ್ಷೇತ್ರದಲ್ಲಿ ಯುವಕರು ಹೊಸ ಬದಲಾವಣೆಗಾಗಿ ಸ್ವಾಭಿಮಾನಿ ಕಾರ್ಯಕರ್ತರ ಪಡೆಗೆ ಸೇರ್ಪಡೆಯಾಗುತ್ತಿದ್ದಾರೆ. ಧನಾತ್ಮಕವಾಗಿ ಪ್ರತಿಕ್ರಿಯೇ ವ್ಯಕ್ತವಾಗುತ್ತಿದ್ದು, ಈ ಬಾರಿ ಆಟೋರಿಕ್ಷಾ ಕ್ಷೇತ್ರದಲ್ಲಿ ಗೆಲುವಿನ ಸಂಭ್ರಮ ಹೊತ್ತು ಸಂಚರಿಸಲಿದೆ. ನಾವು ನಮ್ಮ ಸ್ವಂತ ಲಾಭಕ್ಕಾಗಿ ಚುನಾವಣೆ ಮಾಡುತ್ತಿಲ್ಲ. ಮತ್ತೂಬ್ಬರ ಕಪಿಮುಷ್ಠಿಗೆ ಸಿಲುಕಿರುವ ಕ್ಷೇತ್ರವನ್ನು ಬಿಡುಗಡೆಗೊಳಿಸುವ ಕೆಲಸ ಮಾಡುವ ಮೂಲಕ ಕ್ಷೇತ್ರದಲ್ಲಿ ಶಾಂತಿ-ನೆಮ್ಮದಿ ನೆಲೆಸಲು ಸ್ವಾಭಿಮಾನಿ ಕಾರ್ಯಕರ್ತರ ಒಟ್ಟೂಗೂಡಿ ಚುನಾವಣೆ ಮಾಡುತ್ತಿದ್ದೇವೆ ಎಂದರು.

ನಾವು ನಾಯಕರಾಗಿ ಅಧಿಕಾರ ಅನುಭವಿಸುವ ದುರಾಸೆ ನಮಗಿಲ್ಲ. ಜನಸೇವಕರಾಗಿ ಸದಾ ಜನರೊಂದಿಗೆ ಇದ್ದು ಅವರ ಕಷ್ಟ-ನೋವುಗಳಿಗೆ ಸ್ಪಂದಿಸುವ ಮನಸ್ಸಿದೆ. ಜನರಿಗೆ ಉಜ್ವಲ ಬದುಕು ಕಟ್ಟಿಕೊಡುವ ಕೆಲಸ ಮಾಡಲು ಬಂದಿದ್ದೇವೆ. ಜನರು ಈ ಬಾರಿ ಆಟೋರಿಕ್ಷಾ ಚಿನ್ಹೆಗೆ ಮತ ನೀಡಿ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ಉದ್ಯೋಗ ಸೃಷ್ಠಿಸುವಂತಹ ಒಂದು ದೊಡ್ಡ ಕೈಗಾರಿಕೆ ಇಲ್ಲ. ಹಾಗಾಗಿ ಯುವಕರು ತಮ್ಮ ಕುಟುಂಬಕ್ಕಾಗಿ ದೂರದ ಊರಿಗೆ ತೆರಳಿ ಉದ್ಯೋಗ ಮಾಡುವ ಪರಿಸ್ಥಿತಿ ಇದೆ. ಬಾಗಲಕೋಟೆಗೆ ಘೋಷಣೆಯಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜು ನೆನೆಗುದಿಗೆ ಬಿದ್ದಿದ್ದು, ಅದು ಸ್ಥಾಪನೆಯಾದರೆ ಸುಮಾರು 2 ಸಾವಿರ ಜನರಿಗೆ ಉದ್ಯೋಗ ದೊರೆಯುತ್ತದೆ. ಬಡವರ ಮಕ್ಕಳೂ ವೈದ್ಯಕೀಯ ಶಿಕ್ಷಣ ಪಡೆಯಲು ಸಹಕಾರಿಯಾತ್ತದೆ. ಆದರೆ, ಬಡವರ ಮಕ್ಕಳು ಬೆಳೆಯಬಾರದೆಂಬ ದುರಾಸೆ ಯಾರಿಗೂ ಇರಬಾರದು ಎಂದು ಹೇಳಿದರು.

Advertisement

ಸ್ವಾಭಿಮಾನಿ ಕಾರ್ಯಕರ್ತರ ಪಡೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೆಲ್ಲವು ನೋಡುತ್ತಿದ್ದರೆ ಆಟೋರಿûಾ ಕ್ಷೇತ್ರದಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಖಂಡರಾದ ರವಿ ರಾಠೊಡ, ಕುಡ್ಲಪ್ಪ ಚಿತ್ತರಗಿ, ಗಣೇಶ ಚಿತ್ತರಗಾರ, ಪಾಪಣ್ಣ ಲಮಾಣಿ, ಮಹಾಂತೇಶ ಹಿರೇಮಠ, ಮಲ್ಲಿಕಾರ್ಜುನ ಸರಗಣಾಚಾರಿ ಮುಂತಾದವರು ಉಪಸ್ಥಿತರಿದ್ದರು.

ಯುವಕರು ಸೇರ್ಪಡೆ: ಹಿರೇಮಾಗಿ ಗ್ರಾಮದ ಯುವಕರಾದ ರಾಹುಲ ಚವ್ಹಾಣ, ಸತೀಶ ಚವ್ಹಾಣ, ಬಂಗಾರಿ ರಾಠೊಡ, ಕಿರಣ ಚವ್ಹಾಣ, ರಾಹುಲ್‌ ಚವ್ಹಾಣ, ವಿಕಾಸ ರಾಠೊಡ, ಚಂದ್ರು ಚವ್ಹಾಣ, ಎಸ್‌. ವಡ್ಡರ, ಅಕ್ಷಯ ಕುಮಚಗಿ, ಶ್ರೀಧರ ಬಂಡಿ, ಮಹಾಂತೇಶ ಬಂಡಿ, ಬಸು ನಿಡಗುಂದಿ, ರಾಜು ಕತ್ತಿ, ಬಸವರಾಜ ಶಿರೋಳ ಮುಂತಾದವರು ಸೇರ್ಪಡೆಯಾದರು.

Advertisement

Udayavani is now on Telegram. Click here to join our channel and stay updated with the latest news.

Next