Advertisement
ಈ ಆದೇಶ ಪ್ರಶ್ನಿಸಿ ಇಂಡಿಗೋ ವಿಮಾನಯಾನ ಸಂಸ್ಥೆ ಹೊಸದಾಗಿ ಅರ್ಜಿ ಸಲ್ಲಿಸಿದ್ದು, 2015ರ ಆಗಸ್ಟ್ 3ರ ನಿರ್ದೇಶನವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದೆ. ಈ ಸಂಬಂಧ ಉತ್ತರ ನೀಡುವಂತೆ ಎನ್‌ಜಿಟಿಯ ನ್ಯಾ. ಜಾವೇದ್ ರಹೀಂ ಅವರಿದ್ದ ಪೀಠ ನಾಗರಿಕ ವಿಮಾನಯಾನ ಸಚಿವಾಲಯ, ಡಿಜಿಸಿಎ ಮತ್ತು ಇತರರಿಗೆ ನೋಟಿಸ್ ನೀಡಿದೆ.
Related Articles
Advertisement
ಆದರೆ ನಿಮ್ಮ ನಿಷೇಧದಿಂದಾಗಿ ನಾವು ಪ್ರಯಾಣಿಕರ ಸುರಕ್ಷತೆಗೆ ಯಾವುದೇ ಕ್ರಮ ತೆಗೆದುಕೊಳ್ಳಲು ಆಗದ ಅಸಹಾಯಕ ಸ್ಥಿತಿಯಲ್ಲಿ ಇದ್ದೇವೆ. ಈ ಬಗ್ಗೆ ಪ್ರಯಾಣಿಕರಿಂದ ಹಲವಾರು ದೂರುಗಳು ಬಂದಿದ್ದು, ಗ್ರಾಹಕರ ವೇದಿಕೆಗೂ ಇವರು ಮೊರೆ ಹೋಗಿದ್ದಾರೆ. ಹೀಗಾಗಿ ಪರಿಸ್ಥಿತಿಗೆ ಅನುಗುಣವಾಗಿ ತಕ್ಷಣವೇ ನಿಮ್ಮ ಆದೇಶವನ್ನು ಮರುಪರಿಶೀಲಿಸಬೇಕು ಎಂದು ಮನವಿ ಮಾಡಿದೆ.
ಅಮೆರಿಕದ ವೈದ್ಯನಿಂದ ದೂರು: ವಿಮಾನಗಳಲ್ಲಿ ಸೊಳ್ಳೆ ನಿರೋಧಕ ಔಷಧಗಳನ್ನು ಸಿಂಪಡಿಸುವುದರ ವಿರುದ್ಧ ಅಮೆರಿಕದ ನರರೋಗ ತಜ್ಞ ಡಾ.ಜೈಕುಮಾರ್ ಎಂಬವರು ಎನ್‌ಜಿಟಿಗೆ ದೂರು ನೀಡಿದ್ದರು. ಫೆನೋತ್ರಿನ್ ನಂಥ ರಾಸಾಯನಿಕಗಳನ್ನು ವಿಮಾನಗಳಲ್ಲಿ ಸಿಂಪಡಿಸುವುದರಿಂದ ಪ್ರಯಾಣಿಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಇದು ಕ್ಯಾನ್ಸರ್, ಪಾರ್ಕಿನ್ಸನ್, ಸ್ಮರಣಶಕ್ತಿ ಕಳೆದುಕೊಳ್ಳುವುದು ಮತ್ತಿತರ ಕಾಯಿಲೆಗಳಿಗೂ ಕಾರಣವಾಗುತ್ತದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ, ಪ್ರಯಾಣಿಕರು ಇರುವಾರ ವಿಮಾನದೊಳಗೆ ಔಷಧ ಸಿಂಪಡಣೆ ಮಾಡದಂತೆ ಕ್ರಮ ಕೈಗೊಳ್ಳಿ ಎಂದು ಕೇಂದ್ರ ಸರ್ಕಾರಕ್ಕೆ ಎನ್‌ಜಿಟಿ ಸೂಚನೆ ನೀಡಿತ್ತು.