ಮೊಬೈಲ್ ಕಂಪೆನಿಗಳ ಮಟ್ಟಿಗೆ ನೋಕಿಯಾ ಎಂದಿಗೂ ಎಒಂದು ಬ್ರ್ಯಾಂಡ್ ಆಗಿಯೇ ಕಾಣುತ್ತದೆ. ನೋಕಿಯಾ ತನ್ನ C30 ಸ್ಮಾರ್ಟ್ ಫೋನ್ ನನ್ನು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ಇನ್ನು ಈ ಸ್ಮಾರ್ಟ್ ಫೋನ್ 6.82 ಇಂಚಿನ ಎಚ್‌ಡಿ + ಎಲ್ ಸಿಡಿ ಡಿಸ್ ಪ್ಲೇಯನ್ನು ಒಳಗೊಂಡಿದೆ. ಜೊತೆಗೆ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು ನೋಡಲು ಆಕರ್ಷಕವಾಗಿದೆ.
ನೋಕಿಯಾ C30 ಇದು ಆಕ್ಟಾ-ಕೋರ್ ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಡ್ಯುಯೆಲ್ ರಿಯರ್ ಕ್ಯಾಮರಾ ಸೆಟಪ್ ನನ್ನು ಹೊಂದಿದೆ. 2GB RAM + 32GB, 3GB RAM + 32GB ಮತ್ತು 3GB RAM + 64GB ಸಾಮರ್ಥ್ಯದ ಮೂರು ರೂಪಾಂತರಗಳ ಆಯ್ಕೆಯನ್ನು ಹೊಂದಿದೆ ಎನ್ನುವುದು ವಿಶೇಷ.
ಇದನ್ನೂ ಓದಿ : ಟಿ ಸೀರಿಸ್ -ಲಹರಿ ಸಂಸ್ಥೆ ತೆಕ್ಕೆಗೆ ‘RRR’ ಆಡಿಯೋ ರೈಟ್ಸ್ :ಸೇಲಾಗಿದ್ದು ಎಷ್ಟು ಕೋಟಿಗೆ ?
1600 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.82 ಇಂಚಿನ ಎಚ್‌ಡಿ + ಎಲ್‌ಸಿಡಿ ಡಿಸ್‌ಪ್ಲೇಯನ್ನು ನೋಕಿಯಾ ನೋಕಿಯಾ C30 ಸ್ಮಾರ್ಟ್ ಫೋನ್ ಹೊಂದಿದೆ. ನೋಕಿಯಾ C30 ಸ್ಮಾರ್ಟ್‌ಫೋನ್ ಅನಿರ್ದಿಷ್ಟ ಆಕ್ಟಾ-ಕೋರ್ ಪ್ರೊಸೆಸರ್ ನಿಂದ 1.6GHz ನಲ್ಲಿ ನಾಲ್ಕು A55 ಕೋರ್ ಮತ್ತು 1.2GHz ನಲ್ಲಿ ನಾಲ್ಕು A55 ಕೋರ್ ಗಳನ್ನು ಒಳಗೊಂಡಿದೆ. ಆಂಡ್ರಾಯ್ಡ್ 11 ಗೋ ಸಾಫ್ಟ್ ವೇರ್ ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 2GB RAM + 32GB, 3GB RAM + 32GB ಮತ್ತು 3GB RAM + 64GB ಸಾಮರ್ಥ್ಯದ ಮೂರು ವೇರಿಯೆಂಟ್ ಆಯ್ಕೆಯನ್ನು ಹೊಂದಿದೆ. ಇದಲ್ಲದೆ ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಸ್ಟೋರೇಜ್ ಸಾಮರ್ಥ್ಯವನ್ನು ಎಕ್ಸ್ಟೆಂಡ್ ಮಾಡುವ ವಿಶೇಷತೆಯನ್ನು ಒಳಗೊಂಡಿದೆ.
ಡ್ಯುಯಲ್ ಕ್ಯಾಮೆರಾ ಸೆಟಪ್ ನನ್ನು ಹೊಂದಿರುವ ನೋಕಿಯಾ C30 ಸ್ಮಾರ್ಟ್‌ಫೋನ್, ಬ್ಯಾಕ್ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು ಎಲ್ ಇಡಿ ಫ್ಲ್ಯಾಷ್ ಹಾಗೂ ಫ್ರಂಟ್ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ನನ್ನು ಒಳಗೊಂಡಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಇಮೇಜ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದ್ದು, ನೋಡಲು ಆಕರ್ಷಕವಾಗಿದೆ.
ಇದನ್ನೂ ಓದಿ : ಬಿಜೆಪಿ ಹೈಕಮಾಂಡ್ ಪಾಲಿಗೆ ರಾಜ್ಯದ ಜನರೇನು ಪ್ರಯೋಗ ಪಶುಗಳೆ? : ದಿನೇಶ್ ಗುಂಡೂರಾವ್ ಟ್ವೀಟ್