Advertisement
ಮೂಗುತಿಯಲ್ಲಿ ಅಕ್ಷರನಿಮ್ಮ ಹೆಸರು, ಮಗುವಿನ ಅಥವಾ ಪ್ರೀತಿಪಾತ್ರರ ಹೆಸರು, ಜನ್ಮ ದಿನಾಂಕ, ಶ್ರೀ, ಓಂ, ಸ್ವಸ್ತಿಕ್, ಶಿಲುಬೆಯ ಆಕೃತಿ ಮುಂತಾದವುಗಳನ್ನು ತೊಟ್ಟು ಮಹಿಳೆಯರು ತಮ್ಮ ಮೂಗಿನ ಅಂದವನ್ನು ಹೆಚ್ಚಿಸುತ್ತಿದ್ದಾರೆ. ಮಹಿಳೆಯರು ಇಂಥದ್ದೇ ಅಕ್ಷರ ಅಥವಾ ಪದಗಳುಳ್ಳ ವಿನ್ಯಾಸದ ಮೂಗುತಿ ಬೇಕು ಎಂದು ಸೋನಾಗಾರದಲ್ಲಿ ಬೇಡಿಕೆ ಇಡುತ್ತಿದ್ದಾರೆ. ಈ ಫ್ಯಾಷನ್‌ನ ಪ್ರಭಾವ ಮದುವೆಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ, ಎತ್ನಿಕ್ ಡೇಯಂಥ ಸಮಾರಂಭ, ಹಬ್ಬ ಮತ್ತು ಪೂಜೆಗಳ ದಿನ ಕಾಣಸಿಗುತ್ತದೆ.
ಗೆಜ್ಜೆಗಳು ಸದ್ದು ಮಾಡುತ್ತವೆ ಎಂದು ಎಲ್ಲರಿಗೂ ಗೊತ್ತು. ಈಗ ಸದ್ದು ಮಾಡುವ ಮೂಗುತಿಯೂ ಸಿಗುತ್ತೆ. ಅದು ಹ್ಯಾಂಗಿಂಗ್ಸ್ ಮತ್ತು ಟ್ಯಾಸೆಲ್ಸ್ ಇರುವ ಮೂಗುತಿ. ಪುಟ್ಟದಾದ ಮಗುವಿನ ಪಾದದ ಆಕೃತಿಯ ಮೂಗುತಿಯನ್ನು ಗರ್ಭಿಣಿಯರು ತೊಡುತ್ತಿದ್ದಾರೆ. ನಿಶ್ಚಿತಾರ್ಥವಾಗಿರೋ ಮಹಿಳೆಯರು, ಮದುವೆ ಆಗಲಿರೋ ಗಂಡಿನ ಹೆಸರನ್ನು ಅಥವಾ ಅವನ ಪೆಟ್‌ನೆàಮ್ ಅನ್ನು ಮೂಗುತಿಯಾಗಿ ತೊಡುತ್ತಿದ್ದಾರೆ. ತಮ್ಮ ಸಾಕುಪ್ರಾಣಿಗಳ ಹೆಸರನ್ನು ಮೂಗುತಿಯಲ್ಲಿ ಅರಳಿಸಿಕೊಂಡವರೂ ಇದ್ದಾರೆ. ಶ್ವಾನಪ್ರಿಯರ ಮೂಗಿನ ಮೇಲೆ ನಾಯಿಯ ಆಕೃತಿಯಿದ್ದರೆ, ಬೆಕ್ಕನ್ನು ಇಷ್ಟಪಡುವವರು ಬೆಕ್ಕನ್ನು ಮೂಗಿನ ಮೇಲೇರಿಸಿಕೊಳ್ಳುತ್ತಾರೆ. ಇಂಥ ಭಿನ್ನ ಭಿನ್ನ ಆಕೃತಿಯ ಕಿವಿಯೋಲೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆಹಾ ಮೂಗುತಿಯ ಆಕಾರವೆ!
ಹೃದಯಾಕಾರದ, ಮನೆಯ ಚಿತ್ರದ, ಜನ್ಮರಾಶಿ ಚಿಹ್ನೆಯ, ಹಾವು, ಮಿಂಚಿನ ಆಕೃತಿ, ಬಲ್ಬ್ , ಬಲೂನ್, ಬೀಗ, ಕೀಲಿಕೈ, ಪಾದರಕ್ಷೆ… ಹೀಗೆ ಊಹಿಸಲೂ ಸಾಧ್ಯವಿಲ್ಲದಷ್ಟು ಆಯ್ಕೆಗಳು ಇವೆ. ಇಂಥ ಮುದ್ರೆಗಳು ಆನ್‌ಲೈನ್‌ನಲ್ಲೂ ಲಭ್ಯವಿವೆ. ಪರ್ಸನಲೈಸ್ಡ್ ಅಥವಾ ಕಸ್ಟಮೈಸ್ಡ್ ಮೂಗಿನ ಬೊಟ್ಟು ಮಾಡಿಕೊಡುವ ಅಂಗಡಿ ಮತ್ತು ಆನ್‌ಲೈನ್ ಸರ್ವಿಸ್‌ಗಳು ಲಭ್ಯ ಇರುವ ಕಾರಣ ಮೂಗುತಿಯನ್ನು ಉಡುಗೊರೆಯಾಗಿಯೂ ನೀಡಬಹುದು!
Related Articles
ಮೂಗು ಚುಚ್ಚಿಸಿಕೊಳ್ಳಲು ಇಷ್ಟವಿಲ್ಲದೇ ಇರುವವರೂ ಈ ಫ್ಯಾಷನ್ ಫಾಲೋ ಮಾಡಬಹುದು. ಇಂಥ ಮೂಗುತಿಗಳು ಕ್ಲಿಪ್ ಅಥವಾ ಹುಕ್ ರೂಪದಲ್ಲೂ ಸಿಗುತ್ತದೆ. ಹಾಗಾಗಿ, ಮೂಗು ಚುಚ್ಚಿಸಿಕೊಳ್ಳುವ ತಾಪತ್ರಯವಿಲ್ಲ. ಮೂಗುತಿಯನ್ನು ಸಿಕ್ಕಿಸಿಕೊಳ್ಳಬಹುದು ಕೂಡ. ಉಟ್ಟ ಉಡುಪಿಗೆ ಹೋಲುವ ಮೂಗುತಿ ತೊಡಬೇಕಿದ್ದರೆ ಹುಕ್ ಅಥವಾ ಕ್ಲಿಪ್ ಮೂಗುತಿ ಉತ್ತಮ. ಉಟ್ಟ ಉಡುಪಿನಲ್ಲಿ ಕಮಲದ ಚಿಹ್ನೆ ಇದ್ದರೆ, ಅದೇ ಅಕೃತಿಯ ಮೂಗಿನ ಬೊಟ್ಟು ಹಾಕಿಕೊಳ್ಳಬಹುದು.
Advertisement
ಒಂದು ವೇಳೆ ನಿಮ್ಮ ಬಳಿ ಚಿನ್ನ ಅಥವಾ ಬೆಳ್ಳಿಯ ಮೂಗುತಿ ಈಗಾಗಲೇ ಇದ್ದರೆ, ಅದಕ್ಕೆ ಬೇಕಾದ ಹೊಸ ವಿನ್ಯಾಸ, ಆಕೃತಿ ನೀಡಿ ಹೊಸ ಲುಕ್ ಪಡೆಯಬಹುದು. ಆಗ ಮೂಗಿನ ಬೊಟ್ಟು ತೊಡುವುದು ಬೋರಿಂಗ್ ಎನಿಸಲಾರದು. ಮತ್ತೇಕೆ ತಡ? ಸಾಂಪ್ರದಾಯಿಕ ಮೂಗುತಿಗೆ ಹೊಸ ಟ್ವಿಸ್ಟ್ ನೀಡಿ ಅದನ್ನು ತೊಟ್ಟು ಮಿಂಚಿರಿ!
ಅದಿತಿ