Advertisement

ಕ್ವಾರಂಟೈನ್‌ ಮಾಹಿತಿಗೆ ಬೆಳ್ಮದಲ್ಲಿ ನೋಡಲ್‌ ಕೇಂದ್ರ ಆರಂಭ: ಖಾದರ್‌

12:58 AM May 21, 2020 | Sriram |

ಉಳ್ಳಾಲ: ಹೊರ ರಾಜ್ಯಗಳಿಂದ ಬರುವ ಮಂಗಳೂರು ವಿಧಾನಸಭೆ ಕ್ಷೇತ್ರದ ಮಂಗಳೂರು ತಾಲೂಕು ವ್ಯಾಪ್ತಿಯ 12 ಗ್ರಾಮಗಳ ಸ್ಥಳೀಯ ನಿವಾಸಿಗಳಿಗೆ ಸರಕಾರಿ ಕ್ವಾರಂಟೈನ್‌ಗೆ ಸಂಬಂಧಿಸಿದಂತೆ ಮಾಹಿತಿಗೆ ದೇರಳಕಟ್ಟೆ ಜಂಕ್ಷನ್‌ನಲ್ಲಿರುವ ಬೆಳ್ಮ ಗ್ರಾ.ಪಂ. ನೋಡಲ್‌(ಸಹಾಯ) ಕೇಂದ್ರವಾಗಿ ಆರಂಭಿಸಲಾಗಿದೆ ಎಂದು ಶಾಸಕ ಯು.ಟಿ. ಖಾದರ್‌ ತಿಳಿಸಿದರು.

Advertisement

ಮಂಗಳೂರು ವಿಧಾನಸಭೆ ಕ್ಷೇತ್ರದ ಮಂಗಳೂರು ತಾಲೂಕಿಗೆ ಒಳಪಡುವ 12 ಗ್ರಾಮ ಪಂಚಾಯತ್‌ಗಳ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು, ತಾ. ಪಂಚಾಯತ್‌ ಸದಸ್ಯರು, ಪಂಚಾಯತ್‌ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಮಂಗಳೂರು ವಿಧಾನಸಭೆ ಕ್ಷೇತ್ರದ ಕ್ವಾರಂಟೈನ್‌ಗೆ ಒಳಪಡುವ ಹೊರರಾಜ್ಯಗಳಿಂದ ಆಗಮಿಸುವ ಸ್ಥಳೀಯ ನಿವಾಸಿಗಳಿಗೆ ಕ್ವಾರಂಟೈನ್‌ ಮಾಹಿತಿ ಕೇಂದ್ರ ಮತ್ತು ಅದರ ನಿರ್ವಹಣೆ ಕುರಿತಂತೆ ಕರೆಯಲಾದ ಸಮಾಲೋಚನ ಸಭೆ ಯಲ್ಲಿ ಅವರು ಮಾತನಾಡಿದರು.

ಈಗಾಗಲೇ 22 ಜನರು ಕ್ವಾರಂಟೈನ್‌ನಲ್ಲಿದ್ದಾರೆ. ಕೇವಲ ಮಹಿಳೆಯರು ಮಾತ್ರ ಇದ್ದರೆ ಅವರಿಗೆ ಕೊಣಾಜೆಯ ವಿವಿ ಮಹಿಳಾ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗುವುದು. ಉಳಿದಂತೆ ಈಗಾಗಲೇ ಖಾಸಗಿ ಹಾಸ್ಟೆಲ್‌, ಸರಕಾರಿ ಹಾಸ್ಟೆಲ್‌ಗ‌ಳನ್ನು ಗುರುತಿಸಿದ್ದು ಅಲ್ಲಿ ಕ್ವಾರಂಟೈನ್‌ಗೆ ಬೇಕಾದ ಮೂಲಸೌಕರ್ಯಗಳನ್ನು ವ್ಯವಸ್ಥೆ ಮಾಡಿದ್ದು ಆಯಾಯ ಗ್ರಾಮ ಪಂಚಾಯತ್‌ನ ಅಧಿಕಾರಿಗಳು ಈ ಕ್ವಾರಂಟೈನ್‌ ಕೇಂದ್ರದ ಜವಾಬ್ದಾರಿ ವಹಿಸಲಿದ್ದಾರೆ ಎಂದರು.

ಪ್ರತೀ ಗ್ರಾಮದಲ್ಲಿ ತುರ್ತು ನಿರ್ವಹಣೆ ತಂಡ
ಕೋವಿಡ್‌-19 ತಡೆ ಯುವ ಮುಂಜಾಗ್ರತೆಗಾಗಿ ಪ್ರತೀ ಗ್ರಾಮದಲ್ಲಿ ತುರ್ತು ನಿರ್ವಹಣೆ ತಂಡವನ್ನು ರಚಿಸಬೇಕು. ಪ್ರತೀ ತಂಡದಲ್ಲಿ 10 ಮಂದಿ ಸ್ವಯಂ ಸೇವಕರು ಮತ್ತು ಅವರಿಗೆ ತುರ್ತು ಸಂದರ್ಭದಲ್ಲಿ ಕೋವಿಡ್‌-19 ಸೋಂಕಿತರನ್ನು ನಿರ್ವ ಹಿ ಸುವ ಬಗ್ಗೆ ತರಬೇತಿ ನೀಡ ಬೇಕು ಎಂದರು.

ತಾಲೂಕು ಪಂಚಾಯತ್‌ ಅಧ್ಯಕ್ಷ ಮಹಮ್ಮದ್‌ ಮೋನು, ಬೆಳ್ಮ ಗ್ರಾಮ ಪಂಚಾಯತ್‌ವಿಜಯಾ ಕೃಷ್ಣಪ್ಪ, ಉಪಾಧ್ಯಕ್ಷ ಮಹಮ್ಮದ್‌ ಸತ್ತಾರ್‌, ನೋಡಲ್‌ ಅಧಿಕಾರಿ ನವೀನ್‌ ಹೆಗ್ಡೆ, ಮಂಜನಾಡಿ ಗ್ರಾಮ ಪಂಚಾಯತ್‌ ಅಧ್ಯಕ್ಷ ಮಹಮ್ಮದ್‌ ಅಸೈ ಉಪಸ್ಥಿತರಿದ್ದರು.

Advertisement

ನೋಡಲ್‌ ಅಧಿಕಾರಿ ಸಂಪರ್ಕ
ಬೆಳ್ಮ ಪಿಡಿಒ ನವೀನ್‌ ಹೆಗ್ಡೆ ಅವರನ್ನು ನೋಡಲ್‌ ಅಧಿಕಾರಿಯಾಗಿ ನೇಮಿಸಿದ್ದು, ಜಿಲ್ಲೆಗೆ ಬರುವ ಏಳು ಗಡಿಗಳಲ್ಲಿರುವ ನೋಡಲ್‌ ಅಧಿಕಾರಿಗಳೊಂದಿಗೆ ಕ್ಷೇತ್ರದ ನೋಡಲ್‌ ಅಧಿಕಾರಿ ಸಂಪರ್ಕದಲ್ಲಿದ್ದು ಗಡಿ ದಾಟುತ್ತಿದ್ದಂತೆ ಮಾಹಿತಿ ಪಡೆಯಬೇಕು. ಬೆಳ್ಮದ ನೋಡೆಲ್‌ ಕೇಂದ್ರದ ಅಡಿಯಲ್ಲಿ ಬರುವ 12 ಗ್ರಾ.ಪಂ.ಗಳ ಅಧಿಕಾರಿಗಳು ಜನಪ್ರತಿನಿಧಿಗಳ ವಾಟ್ಸಪ್‌ ಗ್ರೂಪ್‌ ರಚಿಸಿ ಗಡಿದಾಟಿ ಬರುವ ವರ ಮಾಹಿತಿ ನೀಡಿದಾಗ ಕ್ವಾರಂಟೈನ್‌ ಮಾಡಲು ಸಹಕಾರಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next