Advertisement

ಪ್ಲೇ ಆಫ್ ಗೆ ತೇರ್ಗಡೆಯೇ ಗುರಿ: ರೋವ್ಮನ್ ಪೊವೆಲ್‌

11:12 PM Apr 26, 2022 | Team Udayavani |

ಮುಂಬಯಿ: ರಾಜಸ್ಥಾನ್‌ ತಂಡದೆದುರಿನ ಅಂತಿಮ ಓವರಿನಲ್ಲಿ ವಿವಾದಾತ್ಮಕ ಮೂರನೇ ಎಸೆತವು ಫುಲ್ ಟಾಸ್‌ ಮತ್ತು ಸೊಂಟದ ಮೇಲಿನಿಂದ ಹೋಗಿದ್ದರಿಂದ ನೋ ಬಾಲ್‌ ಎಂದು ಅಂಪಾಯರ್‌ ಹೇಳಬಹುದಿತ್ತು. ಆದರೆ ಅಂಪಾಯರ್‌ ಅವರ ನಿರ್ಧಾರವೇ ಅಂತಿಮ ಎಂದು ತಿಳಿಸಿದ ಡೆಲ್ಲಿ ಕ್ಯಾಪಿಟಲ್ಸ್‌ನ ರೋವ್ಮನ್ ಪೊವೆಲ್‌ ಅವರು ಆ ಓವರಿನ ಆರು ಎಸೆತಗಳನ್ನು ಸಿಕ್ಸರ್‌ಗೆ ಅಟ್ಟುವ ಆತ್ಮವಿಶ್ವಾಸ ನನ್ನಲ್ಲಿತ್ತು ಎಂದರು.

Advertisement

ಅಂತಿಮ ಓವರಿನಲ್ಲಿ 36 ರನ್‌ ತೆಗೆಯ ಬೇಕಾದ ಅನಿವಾರ್ಯತೆ ಇದ್ದಾಗ ಪೊವೆಲ್‌ ಒಬೆದ್‌ ಮೆಕ್‌ಕಾಯ್‌ ಎಸೆದ ಆ ಓವ ರಿನ ಮೊದಲ ಮೂರು ಎಸೆತಗಳಲ್ಲಿ ಸಿಕ್ಸರ್‌ ಬಾರಿಸಿ ರೋಮಾಂಚನ ಉಂಟುಮಾಡಿ ದ್ದರು. ಆದರೆ ಮೂರನೇ ಎಸೆತ ಫುಲ್ ಟಾಸ್‌ ಮತ್ತು ಸೊಂಟದ ಮೇಲಿನಿಂದ ಹೋಗಿದ್ದರಿಂದ ಡೆಲ್ಲಿ ತಂಡದ ನಾಯಕ ರಿಷಬ್‌ ಪಂತ್‌ ನೋ ಬಾಲ್‌ಗೆ ಮನವಿ ಮಾಡಿದರಲ್ಲದೇ ಮೈದಾನದಲ್ಲಿದ್ದ ಪೊವೆಲ್‌ ಮತ್ತು ಕುಲದೀಪ್‌ ಅವರಲ್ಲಿ ಪೆವಿಲಿ ಯನ್‌ಗೆ ಬರುವಂತೆ ಸೂಚಿಸಿದ್ದರು.

ಆದರೆ ಇದೆಲ್ಲ ಈಗ ಮುಗಿದ ಅಧ್ಯಾಯ. ನಾವು ಭವಿಷ್ಯದ ಕಡೆಗೆ ಗಮನ ಹರಿಸಬೇಕು. ಮುಂದಿನ ದಿನಗಳಲ್ಲಿ ಕೆಲವು ಪ್ರಮುಖ ಪಂಧ್ಯಗಳಿವೆ. ಈ ಎಲ್ಲ ಪ್ರಮುಖ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಪ್ಲೇ ಆಫ್ ಗೆ ತೇರ್ಗಡೆಯಾಗಲು ಪ್ರಯತ್ನಿಸಬೇಕಾಗಿದೆ. ಹಾಗಾಗಿ ಈಗ ಹಿಂದಿನ ಘಟನೆಗಳನ್ನು ನೆನಪು ಮಾಡಿಕೊಳ್ಳಲಿಕ್ಕೆ ಸಮಯವಿಲ್ಲ ಎಂದು ಪೊವೆಲ್‌ ತಿಳಿಸಿದರು.

ನಿಜ ಹೇಳಬೇಕೆಂದರೆ ಆ ಪಂದ್ಯದ ವೇಳೆ ನನಗೆ ಸಿಕ್ಸರ್‌ ಬಾರಿಸುವ ವಿಶ್ವಾಸವಿತ್ತು. ಮೊದಲ ಎರಡು ಎಸೆತಗಳನ್ನು ಸಿಕ್ಸರ್‌ಗೆ ತಳ್ಳಿದ ಬಳಿಕ ಇದೇ ರೀತಿ ಆಡುವ ನಿರ್ಧಾರ ಮಾಡಿದೆ. ಮೂರನೇ ಎಸೆತ ಫುಲ್ ಟಾಸ್‌ ಆಗಿ ಬಂದಿದ್ದರಿಂದ ನೋ ಬಾಲ್‌ ಆಗಬಹುದೇನೂ ಅಂದುಕೊಂಡೆ. ಆದರೆ ಅಂಪಾಯರ್‌ ಅವರ ನಿರ್ಧಾರವೇ ಅಂತಿಮ. ನಾವು ಕ್ರಿಕೆಟಿಗರಾಗಿ ಅದನ್ನು ಪಾಲಿಸಬೇಕು ಎಂದು ಪೊವೆಲ್‌ ತಿಳಿಸಿದರು. ಪೊವೆಲ್‌ ಈ ಋತುವಿನಲ್ಲಿ ಅನುಕ್ರಮವಾಗಿ 0, 20, 3, 8, 0 ಮತ್ತು 36 ರನ್‌ ಗಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next