Advertisement

ಈಶ್ವರಪ್ಪಗೆ ಟಿಕೆಟ್‌ ಕೈತಪ್ಪಿತೆ? ಭುಗಿಲೆದ್ದ ಬಿಜೆಪಿ ಭಿನ್ನಮತ 

01:52 PM Feb 15, 2018 | Team Udayavani |

ಶಿವಮೊಗ್ಗ : ಚುನವಾಣೆಗೆ ಕೆಲವೆ ದಿನಗಳಿರುವ ವೇಳೆಯಲ್ಲಿ ಶಿವಮೊಗ್ಗ ಕ್ಷೇತ್ರದ ಟಿಕೇಟ್‌ ಕುರಿತಾಗಿ ಭಿನ್ನಮತ ಭುಗಿಲೆದ್ದಿದೆ. ಮಾಜಿ ಉಪಮುಖ್ಯಮಂತ್ರಿ, ವಿಧಾನಪರಿಷತ್‌ ವಿಪಕ್ಷ ನಾಯಕ  ಕೆ.ಎಸ್‌.ಈಶ್ವರಪ್ಪ ಅವರಿಗೆ ಟಿಕೆಟ್‌ ಕೈತಪ್ಪುವ ಭೀತಿಯಲ್ಲಿ ರಾಯಣ್ಣ  ಬ್ರಿಗೇಡ್‌ ಮತ್ತೆ ಸಕ್ರಿಯವಾಗಿದ್ದು ಹೋರಾಟದ ಸೂಚನೆ ನೀಡಿದೆ. 

Advertisement

ಬುಧವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಶಿವಮೊಗ್ಗದ ಕೆಲ ಬಿಜೆಪಿ ಮುಖಂಡರು ಈಶ್ವರಪ್ಪ ಅವರಿಗೆ ಟಿಕೆಟ್‌ ನೀಡಿದರೆ ಸೋಲು ಖಚಿತ ಎಂದು ಹೇಳಿರುವುದಾಗಿ ವರದಿಯಾಗಿದೆ.

ಟಿಕೆಟ್‌ ಕೈತಪ್ಪುವ ಸಾಧ್ಯತೆಗಳ ಹಿನ್ನಲೆಯಲ್ಲಿ ಈಶ್ವರಪ್ಪ ಅವರ ಬೆಂಬಲಿಗರು ಮತ್ತು ರಾಯಣ್ಣ ಬ್ರಿಗೇಡ್‌ನ‌ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದು ಟಿಕೆಟ್‌ ನೀಡದಿದ್ದರೆ ಹೋರಾಟ ಮಾಡುವುದಾಗಿ ಸಾಮಾಜಿಕ ತಾಣಗಳಲ್ಲಿ ಬರೆದುಕೊಂಡಿದ್ದಾರೆ. 

ಗುರುವಾರ ಶಿವಮೊಗ್ಗ ಬಿಜೆಪಿ ಕಚೇರಿ ಎದುರು ಈಶ್ವರಪ್ಪ ಬೆಂಬಲಿಗರು ಜಮಾವಣೆಗೊಂಡು ‘ನಮ್ಮ ಮುಂದಿನ ಶಾಸಕ ಈಶ್ವರಪ್ಪ’ ಎಂಬ ಘೋಷಣೆಗಳನ್ನೂ ಕೂಗಿದ್ದಾರೆ. ಈ ವೇಳೆ ಕೆಲ ಮುಖಂಡರ ನಡುವೆ ವಾಗ್ವಾದವೂ ನಡೆದಿರುವ ಬಗ್ಗೆ ವರದಿಯಾಗಿದೆ. 

ವರಿಷ್ಠರ ತೀರ್ಮಾನವೇ ಅಂತಿಮ !

Advertisement

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ ‘ಟಿಕೆಟ್‌ ಕೊಡುವ ಅಧಿಕಾರ ನನಗೆ ಇಲ್ಲ. ಅಮಿತ್‌ ಶಾ ಅವರು ಸರ್ವೆ ಮಾಡಿಸಿ ವರಿಷ್ಠರೊಂದಿಗೆ ಚರ್ಚಿಸಿ ಟಿಕೆಟ್‌ ನೀಡುತ್ತಾರೆ. ಒಗ್ಗಟಾಗಿ ಕೆಲಸ ಮಾಡಿ , ಅನಗತ್ಯ ಗೊಂದಲ ಸೃಷ್ಟಿ ಮಾಡಬೇಡಿ. ಪಕ್ಷಕ್ಕೆ ಮುಜುಗರ ತರಬೇಡಿ’ ಎಂದರು.

ರುದ್ರೇಗೌಡರಿಗೆ ಟಿಕೆಟ್‌ ಖಚಿತ ?
ಕಳೆದ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು 278 ಮತಗಳ ಅಂತರಿಂದ ಸೋಲನ್ನಪ್ಪಿದ್ದರು. ಹಾಲಿ ಬಿಜೆಪಿ ಘಟಕದ ಜಿಲ್ಲಾಧ್ಯಕ್ಷರಾಗಿರುವ ರುದ್ರೇಗೌಡರಿಗೆ ಟಿಕೆಟ್‌ ನೀಡಿದರೆ ಶಾಸಕ ಪ್ರಸನ್ನ ಕುಮಾರ್‌ ಅವರನ್ನು ಮಣಿಸಬಹುದು ಎಂದು ಬಿಜೆಪಿ ಲೆಕ್ಕಾಚಾರ ಹಾಕಿಕೊಂಡಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next