Advertisement
ಹುದ್ದೆ ಏರಿಕೆ, ಶಾಖೆ ಯಥಾಸ್ಥಿತಿನಿಗಮದ ನಿಯಮದಂತೆ 7,000 ಗ್ರಾಹಕರಿರುವ ಶಾಖೆಗೆ ಕಿರಿಯ ಎಂಜಿನಿಯರ್, ಅದಕ್ಕಿಂತ ಹೆಚ್ಚು ಗ್ರಾಹಕರಿದ್ದರೆ ಶಾಖೆಯನ್ನು ಮೇಲ್ದರ್ಜೆ ಗೇರಿಸಿ, ಸಹಾಯಕ ಎಂಜಿನಿಯರ್ ನೇಮಿಸಬೇಕು. ಉಪ್ಪಿನಂಗಡಿಯಲ್ಲಿ ಹುದ್ದೆ ಏರಿಕೆ ಆಯಿತೇ ಹೊರತು ಸಮರ್ಪಕ ವಿದ್ಯುತ್ ಒದಗಿಸುವ ವಿತರಣ ಕೇಂದ್ರ ತೆರೆಯುವ ಪ್ರಯತ್ನವನ್ನೇ ಮಾಡಿಲ್ಲ. ಹಲವು ಕಿರಿಯ ಎಂಜಿನಿಯರ್ ಗಳು ಕರ್ತವ್ಯ ನಿರ್ವಹಿಸಿದ್ದು, ಬರುವ ವರ್ಷದಿಂದ ಸಮರ್ಪಕ ವಿದ್ಯುತ್ ಒದಗಿಸುವುದಾಗಿ ಗ್ರಾಮಸಭೆಗಳಲ್ಲಿ ಭರವಸೆ ನೀಡುವುದು ವಾಡಿಕೆಯ ಮಾತಾಗಿದೆ. ಈಗಲೂ ಪುತ್ತೂರಿನಿಂದಲೇ ವಿದ್ಯುತ್ ಸರಬರಾಜು ಆಗುವುದು. ಎಕ್ಸ್‌ಪ್ರೆಸ್ ಲೈನ್ ಬಂದರೆ ಮಾತ್ರ ಸಮಸ್ಯೆ ಸರಿಹೋದೀತು. ಬಳಿಕ ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಗ್ರಾಮದಲ್ಲಿ 110 ಕೆ.ವಿ. ವಿದ್ಯುತ್ ವಿತರಣೆ ಘಟಕ ಶೀಘ್ರ ರಚನೆಯಾಗಬೇಕು ಎಂಬ ಆಗ್ರಹವೂ ವ್ಯಕ್ತವಾಗಿದೆ.
ಪುತ್ತೂರಿನಿಂದ ವಿದ್ಯುತ್ ಪೂರೈಕೆಯಲ್ಲಿ ಆಗಾಗ ಸಣ್ಣಪುಟ್ಟ ತೊಡಕುಗಳು ಕಾಣಿಸಿಕೊಳ್ಳುತ್ತಿವೆ. ತಣ್ಣೀರುಪಂತ ವಿತರಣ ಕೇಂದ್ರದಲ್ಲಿ ಕಳಪೆ ಸಾಮಗ್ರಿಗಳ ಜೋಡಣೆಯಾಗಿದೆ ಎನ್ನುವ ಆರೋಪವಿದೆ. ಇಲ್ಲಿಂದ ಸಮರ್ಪಕ ವಿದ್ಯುತ್ ನಿರೀಕ್ಷೆ ಮಾಡಲಾಗದು. ನೆಲ್ಯಾಡಿ 33 ಕೆವಿ ಕೇಂದ್ರವಾಗಿದ್ದು, ಓವರ್ ಲೋಡ್ ಸಮಸ್ಯೆ ಸದಾ ಇರುತ್ತದೆ. ಇದೀಗ ಉಪ್ಪಿನಂಗಡಿ ಮಠ ಎಂಬ 38 ಕೆವಿ ವಿತರಣ ಕೇಂದ್ರ ಬೇಕು ಎನ್ನುತ್ತಾರೆಯೇ ಹೊರತು, ನಿವೇಶನ ಕ್ಕಾಗಿ ಹುಡುಕಾಟ ನಡೆದಿಲ್ಲ. ಈ ಮಧ್ಯೆ ನಿವೇಶನಕ್ಕಾಗಿ ಜನಪ್ರತಿನಿಧಿಗಳ ಸಲಹಾ ಸಮಿತಿ ಕಚೇರಿಗಳಿಗೆ ಅಲೆದಾಟ ನಡೆಸಿತ್ತು. ಈಗ ಸಮಿತಿಯೇ ರದ್ದುಕೊಂಡು ಕಡತ ಬಾಕಿ ಉಳಿದಿದೆ. ನಿವೇಶನ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. 33 ಕೆವಿ ವಿತರಣ ಕೇಂದ್ರ ಮಂಜೂರಾಗುವ ಹೊತ್ತಿಗೆ ಆ ನಿವೇಶನದಲ್ಲಿ ಅನಧಿಕೃತವಾಗಿ ಮನೆಗಳು ನಿರ್ಮಾಣವಾದರೂ ಅಚ್ಚರಿಯಿಲ್ಲ. ಅಂತಹ ಮನೆಗಳಿಗೆ 94 ಸಿ ಯೋಜನೆಯಡಿ ಅಕ್ರಮ -ಸಕ್ರಮ ಹಕ್ಕುಪತ್ರ ನೀಡಿದರೆ, ನಿವೇಶನ ಒಂದು ಹಕ್ಕುಪತ್ರ ಎರಡು ಆಗಲಿದ್ದು, ಸಮಸ್ಯೆಯಾಗಲಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಕಡತ ಬಾಕಿ
ನಿತ್ಯದ ವಿದ್ಯುತ್ ಸಮಸ್ಯೆ ಪರಿಹರಿಸಬೇಕಾದರೆ ವಿತರಣ ಕೇಂದ್ರ ಸ್ಥಾಪಿಸಬೇಕೆಂಬ ಪ್ರಸ್ತಾವ ಗ್ರಾಮಸಭೆ, ಜನಸಂಪರ್ಕ ಸಭೆಗಳಲ್ಲೂ ಆಗಿತ್ತು. ಅದಾಗ್ಯೂ ಎರಡು ವರ್ಷಗಳಿಂದ ಉಪ್ಪಿನಂಗಡಿ ಹಿರ್ತಡ್ಕ ಮಠ ಎಂಬಲ್ಲಿ ಸರ್ವೆ ನಂ. 170ರ ಗೋಮಾಳ ಜಾಗದಲ್ಲಿ ಸಾರ್ವಜನಿಕ ಸೇವೆಯಡಿ ಒಂದು ಎಕ್ರೆ 36 ಸೆಂಟ್ಸು ಜಾಗಕ್ಕಾಗಿ ಕೋರಿಕೆ ಸಲ್ಲಿಸಿತ್ತು. ಪರಿಶೀಲನೆ ನಡೆಸಿ, ವರದಿ ಸಲ್ಲಿಸಲು ಜಿಲ್ಲಾಧಿಕಾರಿ ತಾಲೂಕು ದಂಡಾಧಿಕಾರಿಗೆ ಕಳುಹಿಸಿರುವ ಕಡತ ಒಂದು ವರ್ಷದಿಂದ ಬಾಕಿ ಉಳಿದುಕೊಂಡಿದೆ.
Related Articles
ಮೆಸ್ಕಾಂ ಸಬ್‌ಸ್ಟೇಶನ್‌ಗೆ ನಿವೇಶನಕ್ಕಾಗಿ ತಮ್ಮ ಕಚೇರಿಗೆ ಕಡತ ಸಲ್ಲಿಸಲಾಗಿದೆ. ಈಗಾಗಲೇ ಕಡತ ನಮ್ಮ ಕಚೇರಿಯಲ್ಲಿದ್ದು, ಸದ್ರಿ ಜಮೀನು ರಾಷ್ಟ್ರೀಯ ಹೆದ್ದಾರಿ 75 ಹಾಗೂ ಅರಣ್ಯ ಇಲಾಖಾ ಜಾಗಕ್ಕೆ ತಾಗಿಕೊಂಡಿದೆ. ಇದರಿಂದ ಎರಡೂ ಇಲಾಖೆಗಳ ನಿರಾಕ್ಷೇಪಣಾ ಪತ್ರಕ್ಕಾಗಿ ಕೋರಿಕೆ ಸಲ್ಲಿಸಲಾಗಿದೆ. ಈ ಎರಡು ಇಲಾಖೆಗಳ ಆಕ್ಷೇಪಣೆಗಳು ಇಲ್ಲದೇ ಇದ್ದಲ್ಲಿ, ಮೆಸ್ಕಾಂಗೆ ಕೋರಿದ ನಿವೇಶನ ಮಂಜೂರಾತಿಗೆ ಜಿಲ್ಲಾಧಿಕಾರಿಗಳಿಗೆ ಕಡತವನ್ನು ಕಳುಹಿಸಿಕೊಡಲಾಗುವುದು.
– ಅನಂತ ಶಂಕರ
ಪುತ್ತೂರು ತಾಲೂಕು ದಂಡಾಧಿಕಾರಿಗಳು
Advertisement
ಎಂ.ಎಸ್. ಭಟ್