Advertisement
ಜಿಲ್ಲೆಯಲ್ಲಿ ಒಂದೆಡೆ ಬರ, ಮತ್ತೂಂದೆಡೆ ನದಿ ಪಾತ್ರದಲ್ಲಿ ನೆರೆ ಬಂದು ಬೆಳೆ ಹಾನಿಯಾಗಿದೆ. ಈಗ ಸರ್ಕಾರ ಬರ ಪರಿಹಾರ ಕಾಮಗಾರಿ ಜತೆಗೆ ಪ್ರವಾಹದಿಂದ ಬೆಳೆ ನಷ್ಟವಾದ ರೈತರನ್ನು ಪರಿಗಣಿಸಬೇಕಿದೆ ಎಂಬ ಒತ್ತಾಯ ಕೇಳಿ ಬರುತ್ತಿದೆ. ಆದರೆ, ಸರ್ಕಾರ ಬರಪೀಡಿತ ಜಿಲ್ಲೆ ಎಂದು ಘೋಷಿಸಿದರೂ ರೈತರು ಮಾತ್ರ ಬಾಡುತ್ತಿರುವ ಬೆಳೆ ನಾಶ ಮಾಡುವುದನ್ನು ನಿಲ್ಲಿಸುತ್ತಿಲ್ಲ.
ಶಂಕ್ರಪ್ಪ. ತಾಲೂಕಿನಲ್ಲೇ ಜೇಗರಕಲ್ ಹೋಬಳಿ ಅತಿ ಹೆಚ್ಚು ಕೃಷಿ ಜಮೀನು ಹೊಂದಿದೆ. ಏಳು ಸಾವಿರಕ್ಕೂ ಅಧಿಕ ಎಕರೆ ಜಮೀನಿದೆ. ಅದರಲ್ಲಿ ಸುಮಾರು ಮೂರು ಸಾವಿರ ಎಕರೆಗೂ ಅಧಿಕ ಪ್ರದೇಶದಲ್ಲಿ ಬೆಳೆದ ಬೆಳೆಯನ್ನು ರೈತರು ಕೈಯ್ನಾರೆ ನಾಶ ಮಾಡಿದ್ದಾರೆ.
Related Articles
Advertisement
ಯಾವ ಬೆಳೆ ಎಷ್ಟು ಹಾನಿ: ಮುಂಗಾರು ಹಂಗಾಮಿನಲ್ಲಿ 3,50,551 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಈ ಪೈಕಿ 85,090 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಗುರಿಯಲ್ಲಿ 37,590 ಹೆಕ್ಟೇರ್‌ನಲ್ಲಿ ಹತ್ತಿ ಬಿತ್ತನೆಯಾಗಿದೆ. 26,293 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 1,37,550 ಹೆಕ್ಟೇರ್ ಭತ್ತದ ಗುರಿಯಲ್ಲಿ 85,168 ಹೆಕ್ಟೇರ್ ನಾಟಿ ಮಾಡಿದ್ದು. 8,292 ಹೆಕ್ಟೇರ್ ಹಾನಿಯಾಗಿದೆ.
47,905 ಹೆಕ್ಟೇರ್ ತೊಗರಿ ಬಿತ್ತನೆ ಗುರಿಯಲ್ಲಿ 48,535 ಹೆಕ್ಟೇರ್ ಬಿತ್ತನೆಯಾಗಿದ್ದು, 43,119 ಹೆಕ್ಟೇರ್ ಹಾನಿಯಾಗಿದೆ. 45,295 ಹೆಕ್ಟೇರ್ ಸಜ್ಜೆ ಬಿತ್ತನೆ ಗುರಿಯಲ್ಲಿ 28,781 ಹೆಕ್ಟೇರ್ ಬಿತ್ತನೆಯಾಗಿದ್ದು, 23,647 ಹೆಕ್ಟೇರ್ ಹಾನಿಯಾಗಿದೆ. 17,865 ಹೆಕ್ಟೇರ್ ಸೂರ್ಯಕಾಂತಿ ಬಿತ್ತನೆ ಗುರಿಯಲ್ಲಿ 4,240 ಹೆಕ್ಟೇರ್ ಬಿತ್ತನೆಯಾಗಿದ್ದು, 3,308 ಹೆಕ್ಟೇರ್ ಹಾನಿಯಾಗಿದೆ.
500 ಹೆಕ್ಟೇರ್ ನವಣೆ ಬಿತ್ತನೆ ಗುರಿಯಲ್ಲಿ 413 ಹೆಕ್ಟೇರ್ ಬಿತ್ತನೆಯಾಗಿದ್ದು, ಬೆಳೆ ಸಂಪೂರ್ಣ ಹಾನಿಯಾಗಿದೆ 1,210 ಹೆಕ್ಟೇರ್ ಔಡಲ ಬಿತ್ತನೆ ಗುರಿಯಲ್ಲಿ 347 ಹೆಕ್ಟೇರ್ ಬಿತ್ತನೆ ಆಗಿದೆ. 5515 ಹೆಕ್ಟೇರ್ ಹೆಸರು ಬಿತ್ತನೆ ಗುರಿಯಲ್ಲಿ 201 ಹೆಕ್ಟೇರ್ ಬಿತ್ತನೆಯಾಗಿದೆ.
5,237 ಹೆಕ್ಟೇರ್ ಶೇಂಗಾ ಬಿತ್ತನೆ ಗುರಿಯಲ್ಲಿ 802 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಒಟ್ಟು 1,05.805 ಹೆಕ್ಟೇರ್ ಪ್ರದೇಶ ಏಕದಳ, ಎಣ್ಣೆಕಾಳು, ವಾಣಿಜ್ಯ ಬೆಳೆಗಳು ಮಳೆ ಕೊರತೆಯಿಂದ ಒಣಗಿದ್ದು. ಶೇ.50ಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ಈ ಮಾಹಿತಿ ಆಧರಿಸಿ ರಾಜ್ಯ ಸರ್ಕಾರ ಬರಪೀಡಿತ ಜಿಲ್ಲೆ ಎಂದು ಘೋಷಿಸಿದೆ.
ಸುರಿದ ಮಳೆ ಪ್ರಮಾಣಜಿಲ್ಲೆಯಲ್ಲಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದೆ. ಇಡೀ ಜಿಲ್ಲೆಯಲ್ಲಿ ಸರಾಸರಿ 338 ಮಿ.ಮೀ. ಮಳೆಯಾಗಿದ್ದು, ಶೇ.58ರಷ್ಟು ಮಳೆ ಕೊರತೆಯಾಗಿದೆ. ಅದರಲ್ಲೂ ಯಾವುದೇ ಭಾಗದಲ್ಲೂ ನಿರೀಕ್ಷೆಯಷ್ಟು ಮಳೆಯಾಗಿಲ್ಲ. ಜೂನ್ 1ರಿಂದ ಸೆ.11 ರವರೆಗೆ ದೇವದುರ್ಗ ತಾಲೂಕಿನಲ್ಲಿ 363 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, 158, ಮಿ.ಮೀ.
ಮಳೆಯಾಗಿದೆ. ರಾಯಚೂರು ತಾಲೂಕಿನಲ್ಲಿ 407 ಮಿ.ಮೀ. ಮಳೆ ಪೈಕಿ 165 ಮಿ.ಮೀ. ಆಗಿದೆ. ಸಿಂಧನೂರು ತಾಲೂಕಿನಲ್ಲಿ 322 ಮಿ.ಮೀ. ಪೈಕಿ 130 ಮಿ.ಮೀ. ಮಳೆ ಸುರಿದಿದೆ. ಲಿಂಗಸುಗೂರು ತಾಲೂಕಿನಲ್ಲಿ 286 ಮಿ.ಮೀ.
ಪೈಕಿ 141 ಮಿ.ಮೀ. ಮಳೆಯಾಗಿದೆ. ಬಿತ್ತನೆ ಮಾಡಬೇಕಾದರೆ ಬಿತ್ತನೆ ಬೀಜ ಗೊಬ್ಬರಕ್ಕೆ ಸಾವಿರಾರು ರೂ. ಹಣ ಖರ್ಚಾಗಿದೆ. ಇನ್ನು ಈಗ ಅದನ್ನು ಕೆಡಿಸಲೂ ಕೂಡ ಸಾಕಷ್ಟು ಹಣ ಖರ್ಚಾಗುತ್ತಿದೆ. ಅದರ ಜತೆಗೆ ಹಿಂಗಾರಿಗೆ ಪುನಃ ಹಣ ಹೊಂದಿಸಿಕೊಳ್ಳಬೇಕು. ಜೀವನವೇ ಸಾಕಾಗಿ ಹೋಗಿದೆ.
ಶಂಕ್ರಪ್ಪ, ಜೇಗರಕಲ್ ಗ್ರಾಮದ ರೈತ.