Advertisement
ಶುಕ್ರವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸೇರಲು ನನಗೆ ಯಾರಿಂದಲೂ ಆಹ್ವಾನ ಬಂದಿಲ್ಲ, ಯಾವ ಕಾರಣಕ್ಕೂ ನಾನು ಮರಳಿ ಬಿಜೆಪಿ ಪಕ್ಷಕ್ಕೆ ಸೇರುವ ಪ್ರಶ್ನೆಯೇ ಇಲ್ಲ ಎಂದರು.
Related Articles
Advertisement
ಬಿಜೆಪಿ ಯಾರನ್ನ ಕಡೆಗಣಿಸುತ್ತಿದೆ ಎನ್ನುವುದಕ್ಕೆ ಇದು ತಾಜಾ ಉದಾಹರಣೆ. ರಾಜಕಾರಣದಲ್ಲಿ ಹಿಂದುತ್ವ ಏಕೆ ಬೆರೆಸಲಾಗುತ್ತಿದೆ. ಹಿಂದುಳಿದ ವರ್ಗದವರು, ಶೋಷಿತರು ಸೇರಿದಂತೆ ಇತರೆ ಎಲ್ಲ ಸಮುದಾಯ, ಸಮಾಜಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಎಲ್ಲ ಧರ್ಮಗಳ ಜೊತೆಗೆ ಸೌಹಾರ್ದ ವಾತಾವರಣ ಉಂಟು ಮಾಡುವ ಅವಶ್ಯಕತೆ ಇದೆ ಎಂದರು.
ನಾನು ಕಾಂಗ್ರೆಸ್‌ಗೆ ಹೋಗುವ ಪರಿಸ್ಥಿತಿ ನಿರ್ಮಾಣ ಮಾಡಿದ್ದು ಬಿಜೆಪಿ. ಈ ಬಗ್ಗೆ ಅವರು ಆತ್ಮಾವಲೋಕನ ಮಾಡಿಕೊಳ್ಳಲಿ. ಬಿಜೆಪಿ ಕಟ್ಟಿ ಬೆಳೆಸಿದ ವ್ಯಕ್ತಿಗೆ ಅಪಮಾನ ಮಾಡಿದ್ದಾರೆ, ನನ್ನನ್ನು ಹಾಗೂ ಕೆಲವರನ್ನು ಬಹಳ ಹೀನಾಯವಾಗಿ ನಡೆಸಿಕೊಂಡು ಅಪಮಾನ ಮಾಡಿದರು ಎಂದು ವಾಗ್ದಾಳಿ ನಡೆಸುದರು.
ಈಶ್ವರಪ್ಪ ಅಪೇಕ್ಷೆಯಿಂದ ನಾನೇನು ಮಾಡಲಿ, ಅವರ ಅಪೇಕ್ಷೆ ನೂರೆಂಟು ಇರುತ್ತದೆ ಅವನ್ನೆಲ್ಲಾ ಈಡೇರಿಸಲು ನನಗೆ ಆಗದು. ಬಿಜೆಪಿಯಲ್ಲಿ ಅಪಮಾನ ಮಾಡಿದ್ದಕ್ಕೆ ನಾನು ಪಕ್ಷ ಬಿಟ್ಟೆ ಎಂದು ಹೇಳಿದರು.
ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದ್ದು, ಕಾಂಗ್ರೆಸ್ ಬಲಯುತವಾಗುತ್ತಿದೆ. ಜನರ ಬೆಂಬಲ ಸಿಗುತ್ತಿದೆ. ಡಿ. 3 ರಂದು ಫಲಿತಾಂಶ ಬರಲಿದ್ದು ಹೆಚ್ಚು ರಾಜ್ಯಗಳಲ್ಲಿ ಕಾಂಗ್ರೆಸ್ ಗೆದ್ದು, ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.