ಗಯಾನಾ: 2024ರ ಐಸಿಸಿ ಟಿ20 ವಿಶ್ವಕಪ್ ಇಂದಿನಿಂದ (ಜೂನ್ 1) ಆರಂಭವಾಗಲಿದೆ. ಇದೇ ಮೊದಲ ಬಾರಿಗೆ ಕ್ರಿಕೆಟ್ ವಿಶ್ವಕಪ್ ಆತಿಥ್ಯ ವಹಿಸುತ್ತಿರುವ ಅಮೆರಿಕವು ಇಂದಿನ ಪಂದ್ಯದಲ್ಲಿ ಕೆನಡಾ ತಂಡವನ್ನು ಎದುರಿಸಲಿದೆ.
ಐಸಿಸಿ ಅಧಿಕಾರಿಗಳು ತೆಗೆದುಕೊಂಡ ವಿಚಿತ್ರವಾದ ನಿರ್ಧಾರವೆಂದರೆ, ಇಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಬದಲಿಗೆ ಗಯಾನಾದಲ್ಲಿ ನಡೆಯಲಿರುವ ಎರಡನೇ ಪಂದ್ಯಕ್ಕೆ ಮೊದಲು ಕ್ರಿಕೆಟ್ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದೆ.
ಜೂನ್ 02 ರಂದು ನಡೆಯಲಿರುವ ವೆಸ್ಟ್ ಇಂಡೀಸ್ ಮತ್ತು ಪಪುವಾ ನ್ಯೂಗಿನಿಯಾ ಪಂದ್ಯಕ್ಕೆ ಮುನ್ನ ಕರ್ಟನ್ ರೈಸರ್ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿದೆ. ಸ್ಥಳೀಯ ಕಾಲಮಾನ ಬೆಳಗ್ಗೆ 8.30ಕ್ಕೆ (ಭಾರತೀಯ ಕಾಲಮಾನ ಸಂಜೆ 6 ಗಂಟೆ) ಉದ್ಘಾಟನಾ ಸಮಾರಂಭ ನಡೆಯಲಿದೆ. ಪಂದ್ಯವು ಬೆಳಗ್ಗೆ 10.30ಕ್ಕೆ (8.00 PM IST) ಆರಂಭವಾಗಲಿದೆ.
ಕೆರಿಬಿಯನ್‌ನ ಹಲವಾರು ಡಿಜೆಗಳು ಮತ್ತು ಗಾಯಕರು ಸಮಾರಂಭದಲ್ಲಿ ಪ್ರದರ್ಶನ ನೀಡಲು ಸಿದ್ಧರಾಗಿದ್ದಾರೆ. ಈ ಪಟ್ಟಿಯಲ್ಲಿ ಡೇವಿಡ್ ರಡ್ಡರ್, ರವಿ ಬಿ, ಎರ್ಫಾನ್ ಅಲ್ವೆಸ್, ಡಿಜೆ ಅನಾ ಮತ್ತು ಅಲ್ಟ್ರಾ ಮುಂತಾದ ಪ್ರಮುಖ ಹೆಸರುಗಳು ಸೇರಿವೆ.
ಭಾರತದ ಮೊದಲ ಪಂದ್ಯವು ಜೂನ್ 5ರಂದು ನಡೆಯಲಿದೆ. ನ್ಯೂಯಾರ್ಕ್ ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ತಂಡವು ಐರ್ಲೆಂಡ್ ವಿರುದ್ದ ಆಡಲಿದೆ.