Advertisement

ಈ ದೇಶದಲ್ಲಿ ಯಾರೂ ವಿಕ್ಟೋರಿಯಾ ರಾಣಿಯಾಗಲಿ, ರಾಜನಾಗಲಿ ಇಲ್ಲ: ರಾಹುಲ್ ಗೆ ಬಿಜೆಪಿ ತಿರುಗೇಟು

01:38 PM Jun 20, 2022 | Team Udayavani |

ನವದೆಹಲಿ:ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯನ್ನು ಸೋಮವಾರವೂ (ಜೂನ್ 20) ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿಸಿ ಸತ್ಯಾಗ್ರಹ ನಡೆಸುತ್ತಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದ್ದು, ಈ ದೇಶದಲ್ಲಿ ಯಾರೊಬ್ಬರು ವಿಕ್ಟೋರಿಯಾ ರಾಣಿಯಾಗಲಿ ಅಥವಾ ರಾಜನಾಗಲಿ ಇಲ್ಲ. ಎಲ್ಲರೂ ಕಾನೂನಿಗೆ ತಲೆಬಾಗಬೇಕು ಎಂದು ತಿರುಗೇಟು ನೀಡಿದೆ.

Advertisement

ಇದನ್ನೂ ಓದಿ:ಶ್ರೀರಂಗಪಟ್ಟಣ: ಪಿಂಡ ಪ್ರದಾನ ಮಾಡಿ ರೋಹಿತ್ ಚಕ್ರತೀರ್ಥ ವಿರುದ್ಧ ಆಕ್ರೋಶ

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ಕಿಡಿಕಾರಿದ್ದು, ನ್ಯಾಷನಲ್ ಹೆರಾಲ್ಡ್ ಹಗರಣದ ಮೂಲಕ ರಾಹುಲ್ ಗಾಂಧಿ ದೇಶದ ಹಣವನ್ನು ದುರುಪಯೋಗಪಡಿಸಿಕೊಳ್ಳುವಲ್ಲಿ ಶಾಮೀಲಾಗಿದ್ದಾರೆ ಎಂಬುದು ಸಾರ್ವಜನಿಕರಿಗೆ ತಿಳಿದಿದೆ ಎಂದು ಹೇಳಿದರು.

ಇ.ಡಿ ಎಂಬುದು ಜಾರಿ ನಿರ್ದೇಶನಾಲಯ ಎಂಬುದನ್ನು ರಾಹುಲ್ ಗಾಂಧಿ ತಿಳಿದುಕೊಳ್ಳಬೇಕು ಎಂದು ಪಾತ್ರಾ ತಿಳಿಸಿರುವುದಾಗಿ ಎನ್ ಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ತಮ್ಮನ್ನು ತನಿಖೆಗೆ ಒಳಪಡಿಸಬಾರದು ಎಂದು ಹೇಳಲು ಈ ದೇಶದಲ್ಲಿ ರಾಣಿ ವಿಕ್ಟೋರಿಯಾ ಆಗಲಿ ರಾಜ ಎಂಬವರು ಇಲ್ಲ. ಕಾನೂನು ಎಲ್ಲರಿಗೂ ಸಮಾನವಾಗಿದೆ. ಭ್ರಷ್ಟಾಚಾರದಲ್ಲಿ ಎಲ್ಲರನ್ನೂ ತನಿಖೆಗೊಳಪಡಿಸಲಾಗುತ್ತದೆ ಎಂದು ಸಂಬಿತ್ ತಿರುಗೇಟು ನೀಡಿದ್ದಾರೆ.

Advertisement

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ನಾಲ್ಕನೇ ದಿನವೂ ರಾಹುಲ್ ಗಾಂಧಿಯನ್ನು ವಿಚಾರಣೆಗೊಳಪಡಿಸಿದೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷ ದೆಹಲಿಯಲ್ಲಿ ಧರಣಿ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಸಂಬಿತ್ ಪಾತ್ರ ಈ ಪ್ರತಿಕ್ರಿಯೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next