Advertisement

ಗೋವಾ: 2 ವಾರದಿಂದ ಒಂದೂ ಕೋವಿಡ್ ಪ್ರಕರಣ ಪತ್ತೆಯಾಗಿಲ್ಲ- ಹಸಿರು ವಲಯ ಎಂದು ಘೋಷಣೆ ಸಾಧ್ಯತೆ

09:13 AM Apr 19, 2020 | Nagendra Trasi |

ಪಣಜಿ: ಜಗತ್ತನ್ನೇ ಕಂಗೆಡಿಸುತ್ತಿರುವ ಕೋವಿಡ್ 19 ಸೋಂಕು ಗೋವಾಕ್ಕೆ ಕೆಲವು ಸಿಹಿ ಸುದ್ದಿ ನೀಡಿದೆ, ಕಳೆದ ಎರಡು ವಾರಗಳಿಂದ ಗೋವಾ ರಾಜ್ಯದಲ್ಲಿ ಕೋವಿಡ್ 19 ವೈರಸ್ ನ ಹೊಸ ಪ್ರಕರಣ ಪತ್ತೆಯಾಗದ ಹಿನ್ನೆಲೆಯಲ್ಲಿ ಇಡೀ ರಾಜ್ಯವನ್ನು ಹಸಿರು ವಲಯ ಎಂದು ಘೋಷಿಸುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.

Advertisement

ಗೋವಾದಲ್ಲಿ ಏಳು ಮಂದಿ ಕೋವಿಡ್ 19 ಸೋಂಕು ಪೀಡಿತರಾಗಿದ್ದರು. ಇದರಲ್ಲಿ ಆರು ಮಂದಿ ಈಗಾಗಲೇ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿದ್ದಾರೆ. ಏಳನೇ ರೋಗಿಯ ಗಂಟಲು ದ್ರವದ ಮಾದರಿಯನ್ನು ಎರಡು ಪರೀಕ್ಷಿಸಿದ್ದು ನೆಗೆಟಿವ್ ವರದಿ ಬಂದಿದೆ ಎಂದು ವರದಿ ವಿವರಿಸಿದೆ.

ಏಳು ಪ್ರಕರಣಗಳು ಉತ್ತರ ಗೋವಾದಲ್ಲಿ ಪತ್ತೆಯಾಗಿತ್ತು. ಈವರೆಗೂ ದಕ್ಷಿಣ ಗೋವಾ ಪ್ರದೇಶದಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗದಿರುವ ಹಿನ್ನೆಲೆಯಲ್ಲಿ ಗ್ರೀನ್ ಝೋನ್ (ಹಸಿರು ವಲಯ) ಎಂದು ಘೋಷಿಸಲಾಗಿದೆ. ಇದೀಗ ಉತ್ತರ ಗೋವಾದಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಹೀಗಾಗಿ ಇಡೀ ಗೋವಾ ರಾಜ್ಯವನ್ನು ಗ್ರೀನ್ ಝೋನ್ ಎಂದು ಘೋಷಿಸಲು ಸಿದ್ದತೆ ನಡೆಸಿದೆ.

ಗೋವಾ ರಾಜ್ಯವನ್ನು ಹಸಿರು ವಲಯ ಎಂದು ಘೋಷಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಗೋವಾ ಪತ್ರ ಬರೆದಿರುವುದಾಗಿ ವರದಿ ತಿಳಿಸಿದೆ. ಕೋವಿಡ್ 19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ರೆಡ್, ಆರೆಂಜ್ ಹಾಗೂ ಗ್ರೀನ್ ವಲಯ ಎಂದು ವಿಭಾಗಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next