Advertisement
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯದಿಂದ ಸೋಮವಾರ ನಗರದ ಸ್ವತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ದಿವ್ಯಾಂಗರಲ್ಲಿನ ಪ್ರತಿಭೆ ಗುರುತಿಸಿ ಸಹಕಾರ ನೀಡುವ ಕಾರ್ಯವನ್ನು ಸಮ್ಮಿಶ್ರ ಸರ್ಕಾರ ಮಾಡುತ್ತಿದೆ ಎಂದರು.
Related Articles
Advertisement
1988ರಿಂದ ಇಂದಿನವರೆಗೆ ನಮ್ಮಲ್ಲಿ ದಿವ್ಯಾಂಗರು ಅನೇಕ ಸಾಧನೆ ಮಾಡಿದ್ದಾರೆ. 2011ರ ಗಣತಿ ಪ್ರಕಾರ ರಾಜ್ಯದಲ್ಲಿ 13.24 ಲಕ್ಷ ದಿವ್ಯಾಂಗರಿದ್ದು, 7 ವಿಧದ ವಿಕಲತೆ ಗುರುತಿಸಲಾಗಿತ್ತು. ಈಗ 21 ಬಗೆಯ ಅಂಗವಿಕಲತೆ ಇದ್ದು, ಊನತೆಯೂ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ. ರಾಜ್ಯದಲ್ಲಿ ದಿವ್ಯಾಂಗರ ಸಮೀಕ್ಷೆಗೆ ಎಲ್ಲ ತಯಾರಿ ಮಾಡಿದ್ದೇವೆ. ಸರ್ಕಾರ ಇದಕ್ಕೆ ಸಹಕಾರ ನೀಡಬೇಕು ಎಂದು ಕೋರಿಕೊಂಡರು.
ಬೆನ್ನುಹುರಿ ಸಮಸ್ಯೆಯಿಂದ ಸಂಪೂರ್ಣವಾಗಿ ಹಾಸಿಗೆ ಹಿಡಿದರುವವರಿಗೆ ನೀಡುತ್ತಿರುವ ಸಹಾಯ ಧನದಲ್ಲಿ 5 ಸಾವಿರ ಹೆಚ್ಚುವರಿಯಾಗಿ ನೀಡಬೇಕು. ಗ್ರಾಮೀಣ ಪುನರ್ ವಸತಿ ಯೋಜನೆಯಡಿ ಸೇವೆ ಸಲ್ಲಿಸುತ್ತಿರುವವರಿಗೆ ಮಾಸಿಕ 6 ಸಾವಿರ ರೂ.ಬದಲಿಗೆ 10 ಸಾವಿರ ರೂ. ಹಾಗೂ 3 ಸಾವಿರ ರೂ. ಬದಲಿಗೆ 5 ಸಾವಿರ ರೂ. ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕ ಎಸ್.ಟಿ.ಸೋಮಶೇಖರ್, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ರಾಜ್ಯ ಅಂಗವಿಕಲ ವ್ಯಕ್ತಿಗಳ ಅಧಿನಿಯಮ ಕಚೇರಿ ಆಯುಕ್ತ ವಿ.ಎಸ್.ಬಸವರಾಜು, ಇಲಾಖೆ ನಿರ್ದೇಶಕ ಜಯವಿಭವಸ್ವಾಮಿ, ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ಇದ್ದರು.ದಿವ್ಯಾಂಗರ ಏಳಿಗೆಗೆ ಶ್ರಮಿಸಿದ ಮತ್ತು ಕ್ರೀಡೆ, ಶಿಕ್ಷಣ ಹೀಗೆ ವಿವಿಧ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದ ದಿವ್ಯಾಂಗರಿಗೆ ಹಾಗೂ ವಿಶೇಷ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸರ್ಕಾರಿ ಉದ್ಯೋಗ ಕೊಡಿ: ಕಾರ್ಯಕ್ರಮದ ವೇಳೆ ಪ್ರತಿಭಟನೆ ನಡೆಸಿದ ಕೆಲವು ದಿವ್ಯಾಂಗ ಅಭ್ಯರ್ಥಿಗಳು, ನಮಗೆ ಸರ್ಕಾರದಿಂದ ಮಾಸಿಕವಾಗಿ ನೀಡುತ್ತಿರುವ ಸಹಾಯಧನದಲ್ಲಿ ಜೀವನ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಸರ್ಕಾರದಿಂದ ಉದ್ಯೋಗ ಒದಗಿಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿಗಳ ಎದುರೇ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಡೆಸಿದವರಲ್ಲಿ ಅನೇಕರು ಅಂಧರು ಹಾಗೂ ಕಿವುಡರಾಗಿದ್ದರು. ಪೊಲೀಸರು ತಕ್ಷಣ ಪ್ರತಿಭಟನಾಕಾರರನ್ನು ತಡೆದರು. ಇಲಾಖೆ ಅಧಿಕಾರಿಗಳು ಬಂದು ಸಮಾಧಾನ ಮಾಡಿದರು. ಅಂಧ ವಿದ್ಯಾರ್ಥಿಗಳಿಂದ ಮಲ್ಲಕಂಬ ಪ್ರದರ್ಶನ: ನಮಗೆ ಕಣ್ಣು ಕಾಣದೇ ಇರಬಹುದು. ಆದರೆ, ಪ್ರತಿಭೆಯಲ್ಲಿ ನಾವು ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ಗದಗ ಜಿಲ್ಲೆಯ ರೋಣ ತಾಲೂಕಿನ ಜ್ಞಾನಸಿಂಧು ಮಕ್ಕಳ ವಸತಿಯುತ ಶಾಲೆಯ ವಿದ್ಯಾರ್ಥಿಗಳು ವಿಶ್ವ ದಿವ್ಯಾಂಗರ ದಿನಾಚರಣೆ ಸಮಾರಂಭದಲ್ಲಿ ಸಾಭಿತುಪಡಿಸಿದರು. ಮುಖ್ಯಮಂತ್ರಿಗಳ ಎದುರು ಮಲ್ಲಕಂಬದ ಪ್ರದರ್ಶನ ನೀಡಿದ 8 ವಿದ್ಯಾರ್ಥಿಗಳು ಎಲ್ಲರ ಮನ ಗೆದ್ದರು. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮಾದರಿಯಲ್ಲಿ ದಿವ್ಯಾಂಗರಿಗೆ ವಸತಿ ಶಾಲೆ ಆರಂಭಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ದಿವ್ಯಾಂಗರಿಗೆ ಉತ್ತಮ ಶಿಕ್ಷಣ ನೀಡಿ, ಅವರ ಭವಿಷ್ಯ ಸದೃಢಗೊಳಿಸುವುದು ನಮ್ಮ ಸಂಕಲ್ಪವಾಗಿದೆ.
-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ